ADVERTISEMENT

ಸವಾಂಗೀಣ ಅಭಿವೃದ್ಧಿಗೆ ಸಿದ್ಧಸಿರಿ ಮೈಲುಗಲ್ಲು: ಬಸಯ್ಯ ಹಿರೇಮಠ

ಸಿದ್ಧಸಿರಿ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 5:54 IST
Last Updated 29 ಡಿಸೆಂಬರ್ 2025, 5:54 IST
ಚಿಂಚೋಳಿ ಹೊರ ವಲಯದ ಸಿದ್ಧಸಿರಿ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವವನ್ನು ಉಪ ತಹಶೀಲ್ದಾರ್‌ ಶಶಿಧರ ಸ್ವಾಮಿ ಉದ್ಘಾಟಿಸಿದರು
ಚಿಂಚೋಳಿ ಹೊರ ವಲಯದ ಸಿದ್ಧಸಿರಿ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವವನ್ನು ಉಪ ತಹಶೀಲ್ದಾರ್‌ ಶಶಿಧರ ಸ್ವಾಮಿ ಉದ್ಘಾಟಿಸಿದರು   

ಚಿಂಚೋಳಿ: ‘ಸಿದ್ಧಸಿರಿ ಸಮೂಹ ಸಂಸ್ಥೆಯು ಚಿಂಚೋಳಿಯ ಸಮಗ್ರ ಅಭಿವೃದ್ಧಿಗೆ ಮೈಲುಗಲ್ಲಾಗಲಿದೆ’ ಎಂದು ವಿಜಯಪುರದ ಸಿದ್ಧೇಶ್ವರ ಸಂಸ್ಥೆಯ ಅಧ್ಯಕ್ಷ ಬಸಯ್ಯ ಹಿರೇಮಠ ತಿಳಿಸಿದರು.

ಅವರು ಪಟ್ಟಣದ ಹೊರ ವಲಯದಲ್ಲಿರುವ ಸಿದ್ಧಸಿರಿ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

‘ಹಲವು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಸಕ್ಕರೆ ಕಾರ್ಖಾನೆ ಖರೀದಿ ಸಾವಿರಾರು ಕೋಟಿ ಬಂಡವಾಳ ಹೂಡಿ ದೇಶದ ಎರಡನೇ ಅತಿದೊಡ್ಡ ಎಥನಾಲ್‌ ಮತ್ತು ಪವರ್ ಘಟಕ ಸ್ಥಾಪಿಸಿದ್ದೇವೆ. ನಾಲ್ಕು ನೂರು ಟ್ರ್ಯಾಕ್ಟರ್, ನೂರಾರು ಲಾರಿಗಳು ಓಡಾಡುತ್ತಿವೆ. ಈ ಮೂಲಕ ಚಾಲಕ, ಮಾಲೀಕರ ಕುಟುಂಬಗಳಿಗೆ ಕಂಪನಿ ಆಶ್ರಯವಾಗಿದೆ’ ಎಂದರು.

ADVERTISEMENT

‘ವಿಜಯಪುರದ ಸಿದ್ಧೇಶ್ವರ ಸಂಸ್ಥೆಯ ಅಡಿಯಲ್ಲಿ ಸಿದ್ಧಸಿರಿ ಪಬ್ಲಿಕ್ ಶಾಲೆ ತೆರೆಯಲಾಗಿದ್ದು, ನರ್ಸರಿಯಿಂದ 6ನೇ ತರಗತಿವರೆಗೆ ನಡೆಯುತ್ತಿರುವ ಶಾಲೆಯಲ್ಲಿ ಎರಡು ವರ್ಷದಲ್ಲಿ 334 ಮಕ್ಕಳ ಸಂಖ್ಯೆಯಿದೆ. ಮುಂದಿನ ವರ್ಷ ಏಳನೇ ತರಗತಿ, ಕೆಲವೇ ವರ್ಷಗಳಲ್ಲಿ ಪ್ರೌಢ ಶಾಲೆ ಪ್ರಾರಂಭಿಸಲಾಗುವುದು’ ಎಂದು ತಿಳಿಸಿದರು.

‘ಸಿದ್ಧಸಿರಿ ಎಸ್ ಮಾರ್ಟ, ಹೋಟೆಲ್ ತೆರೆದು ಈ ಭಾಗದಲ್ಲಿ ಹೊಸ ವಾತಾವರಣ ಸೃಷ್ಟಿಸಿದೆ. ಸಿದ್ಧಸಿರಿ ಸೌಹಾರ್ದ ಸಹಕಾರಿ ಮೂಲಕ ಉಳಿತಾಯಕ್ಕೆ ಪ್ರೋತ್ಸಾಹ ನೀಡುವುದರ ಜತೆಗೆ ವ್ಯಾಪಾರಸ್ಥರಿಗೆ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಇದಕ್ಕೆ ಸಂಸ್ಥೆಯ ಬಸನಗೌಡ ಪಾಟೀಲ ಯತ್ನಾಳ ಅವರ ದೂರದೃಷ್ಟಿಯೇ ಕಾರಣ’ ಎಂದರು.

ಪ್ರಾಂಶುಪಾಲರಾದ ಟಿ.ಪುಷ್ಪಿಕಾ ವಾರ್ಷಿಕ ವರದಿ ವಾಚಿಸಿದರು. ಕಾರ್ಯಕ್ರಮವನ್ನು ಉಪ ತಹಶೀಲ್ದಾರ್‌ ಶಶಿಧರ ಸ್ವಾಮಿ ಉದ್ಘಾಟಿಸಿದರು. ಶಿಕ್ಷಣ ಪ್ರೇಮಿ ನಾಗೇಂದ್ರಪ್ಪ ಟೈಗರ್, ನಿರ್ದೇಶಕರಾದ ಆಕಾಶ ಗುತ್ತೇದಾರ, ಶಿವಾನಂದ ನೀಲಾ, ನಿಂಗೊಂಡಪ್ಪ ಗೋಳಾಯಿ, ವಿಜಯಕುಮಾರ ಡೋಣಿ, ಸಿಇಒ ವೆಂಕಟೇಶ, ಯಂಕಪ್ಪ ಗಾಣಿಗೇರ, ಮಲ್ಲಿಕಾರ್ಜುನ ಹಿಪರಗಿ, ಭೀಮು ಕುಳಗೇರಿ, ಮಲ್ಲಿಕಾರ್ಜುನ ಹಿಟ್ನಳ್ಳಿ, ಮಲ್ಕಪ್ಪ, ನಾಗಣ್ಣಗೌಡ ಮೊದಲಾದವರು ಇದ್ದರು.

ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮನಸೂರೆಗೊಳಿಸಿತು. ಪಾಲಕರು ವೇದಿಕೆಗೆ ಬಂದು ಮಕ್ಕಳ ಜತೆಗೆ ಹೆಜ್ಜೆ ಹಾಕಿ ಪುಳಕಗೊಂಡರು. ಶಿಕ್ಷಕಿಯರಾದ ಶಿವಲೀಲಾ, ಸಿದ್ದಮ್ಮ, ಶೃತಿ, ಸಿಂಚನ ಸೇರಿದಂತೆ ಅನೇಕರು ಇದ್ದರು. ಪಾಲಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.

ಚಿಂಚೋಳಿ ಹೊರ ವಲಯದ ಸಿದ್ಧಸಿರಿ ಪಬ್ಲಿಕ್‌ ಶಾಲೆಯ ವಾರ್ಷಿಕೋತ್ಸವದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಮಾಣ ಪತ್ರಗಳನ್ನು ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ ಬಸಯ್ಯ ಹಿರೇಮಠ ವಿತರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.