ADVERTISEMENT

ರಾಯಕೋಡದಲ್ಲಿ ಹಾವುಗಳ ಸರಸ ಸಲ್ಲಾಪ...

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2020, 8:11 IST
Last Updated 6 ಆಗಸ್ಟ್ 2020, 8:11 IST
ಚಿಂಚೋಳಿ ತಾಲ್ಲೂಕು ರಾಯಕೋಡ್ ಗ್ರಾಮದಲ್ಲಿ ಹಾವುಗಳು ಸರಸ ಸಲ್ಲಾಪದಲ್ಲಿ ತೊಡಗಿರುವುದು-ಚಿತ್ರ: ಚಂದ್ರು ಮೈಲ್ವಾರ್
ಚಿಂಚೋಳಿ ತಾಲ್ಲೂಕು ರಾಯಕೋಡ್ ಗ್ರಾಮದಲ್ಲಿ ಹಾವುಗಳು ಸರಸ ಸಲ್ಲಾಪದಲ್ಲಿ ತೊಡಗಿರುವುದು-ಚಿತ್ರ: ಚಂದ್ರು ಮೈಲ್ವಾರ್   

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ರಾಯಕೋಡ್ ಗ್ರಾಮದಲ್ಲಿ ಮಂಗಳವಾರ ಎರಡು ಹಾವುಗಳು ಸರಸ ಸಲ್ಲಾಪದಲ್ಲಿ ತೊಡಗಿದ್ದುದು ಜನರನ್ನು ಆಕರ್ಷಿಸಿತು.

ಮಧ್ಯಾಹ್ನ 2 ಗಂಟೆ ಸುಮಾರಿಗೆ ಗ್ರಾಮದ ಸರ್ಕಾರಿ ಶಾಲೆಯ ರಸ್ತೆಯಲ್ಲಿನ ನೀರಿನ ಟ್ಯಾಂಕ್ ಬಳಿ ಎರಡು ಉರಗಗಳು ಸಲ್ಲಾಪದಲ್ಲಿ ತೊಡಗಿದ್ದುದನ್ನು ಗ್ರಾಮಸ್ಥರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

10 ರಿಂದ 15 ಅಡಿ ಉದ್ದನೆಯ ಎರಡು ಹಾವುಗಳು ಕುರುಡು ಪ್ರೇಮ ಸಂಕೇತಿಸುವಂತೆ ನಡುರಸ್ತೆಯಲ್ಲಿಯೇ 45 ನಿಮಿಷಕ್ಕೂ ಅಧಿಕ ಸಮಯ ಸಲ್ಲಾಪ ನಡೆಸಿದವು.

ADVERTISEMENT

ಸುದ್ದಿ ಹಬ್ಬಿ ಜನರು ನೋಡಲು ಅಲ್ಲಿಗೆ ಧಾವಿಸಿದರೂ ಕೂಡ ಅವುಗಳು ಕದಲಲಿಲ್ಲ. ಸಾಕಷ್ಟು ಸಮಯ ಒಂದಕ್ಕೊಂದು ಸುತ್ತಿಕೊಂಡು ‘ಮುದ್ದಾಡಿದವು’. ಒಂದೊಂದು ಹಾವು ನೆಲಬಿಟ್ಟು ಸುಮಾರು 3 ಅಡಿಗಳ ಎತ್ತರಕ್ಕೆ ತನ್ನ ಮುಖ ಎತ್ತಿ ಒಂದಕ್ಕೊಂದು ಸುತ್ತಿಕೊಳ್ಳುತ್ತಿರುವುದು ನೋಡುಗರನ್ನು ರೋಮಾಂಚನಗೊಳಿಸಿತು. ನಂತರ ಎರಡೂ ಹಾವುಗಳು ಹಸಿರು ಪೊದೆಯಲ್ಲಿ ಮಾಯವಾದವು ಎಂದು ಸ್ಥಳೀಯ ಮುಖಂಡ ಚಂದ್ರು ಮೈಲ್ವಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.