ADVERTISEMENT

ಕಲಬುರಗಿ: ಘನ-ತ್ಯಾಜ್ಯ ನಿರ್ವಹಣೆ ತರಬೇತಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2024, 14:05 IST
Last Updated 23 ಸೆಪ್ಟೆಂಬರ್ 2024, 14:05 IST
ಕಲಬುರಗಿಯ ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆ ಪ್ರಾದೇಶಿಕ ಕೇಂದ್ರದಲ್ಲಿ ಗ್ರಾ.ಪಂ ಮಟ್ಟದ ಮಹಿಳಾ ಒಕ್ಕೂಟದ ಸದಸ್ಯರಿಗೆ ಹಮ್ಮಿಕೊಂಡಿದ್ದ ಘನ-ತಾಜ್ಯ ನಿರ್ವಹಣೆ ಕುರಿತ ತರಬೇತಿ ಕಾರ್ಯಕ್ರಮವನ್ನು ಸಂಸ್ಥೆಯ ಬೋಧಕರಾದ ಶಿವಪುತ್ರಪ್ಪ ಗೊಬ್ಬೂರು, ರಾಜು ಕಂಬಾಳಿಮಠ ಉದ್ಘಾಟಿಸಿದರು

ಕಲಬುರಗಿ: ನಗರದಲ್ಲಿರುವ ಅಬ್ದುಲ್‌ ನಜೀರ್‌ ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆ ಪ್ರಾದೇಶಿಕ ಕೇಂದ್ರದಲ್ಲಿ ವಿವಿಧ ತಾಲ್ಲೂಕುಗಳ ಗ್ರಾಮ ಪಂಚಾಯಿತಿ ಮಟ್ಟದ ಮಹಿಳಾ ಒಕ್ಕೂಟದ ಸದಸ್ಯರಿಗೆ ಘನ-ತ್ಯಾಜ್ಯ ನಿರ್ವಹಣೆ ಕುರಿತು 3 ದಿನಗಳ ವಸತಿ ಸಹಿತ ತರಬೇತಿ ನೀಡಲಾಯಿತು.

ಸುಸ್ಥಿರ ನಡೆ ಸ್ವಚ್ಛತೆ ಕಡೆ ಅಭಿಯಾನದಡಿ 12 ಮತ್ತು 13ನೇ ತಂಡಗಳಿಗೆ ಹಮ್ಮಿಕೊಂಡ ಪುನಶ್ಚೇತನ ತರಬೇತಿ ಇದಾಗಿತ್ತು. ಸಂಸ್ಥೆಯ ಬೋಧಕರಾದ ಶಿವಪುತ್ರಪ್ಪ ಗೊಬ್ಬೂರು, ರಾಜು ಕಂಬಾಳಿಮಠ ಅವರು ತರಬೇತಿಯ ಗುರಿ-ಉದ್ದೇಶ ಕುರಿತು ಮಾತಾನಾಡಿದರು.

ಸಂಪನ್ಮೂಲ ವ್ಯಕ್ತಿಗಳಾದ ಸತೀಶಕುಮಾರ ಸುಲೇಪೇಟ, ಪುಷ್ಪಾ ಬೆಳಮಗಿ, ಸಂಗೀತಾ ಬಡಿಗೇರ ಹಾಗೂ ಸಂಗೀತಾ ರಡ್ಡಿ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು.‌ ತರಬೇತಿ ಸಹಾಯಕಿ ಅರ್ಚನಾ ಸ್ವಾಗತಿಸಿದರು. ಅಶ್ವಿನಿ ಪೂಜಾರಿ ವಂದಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.