ADVERTISEMENT

ಕಲಬುರಗಿ | ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಾವು: ಆತ್ಮಹತ್ಯೆ ಶಂಕೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 6:19 IST
Last Updated 15 ಜನವರಿ 2026, 6:19 IST
   

ಕಲಬುರಗಿ: ನಗರದ ರಾಜಾಪುರ ಸಮೀಪದ ಮರಗಮ್ಮ ಗುಡಿ ಸಮೀಪದ ಮನೆಯೊಂದರಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಶ್ರೀರಾಮ ಪಾಟೀಲ (16) ಶವವು ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡ ಶಂಕೆ ವ್ಯಕ್ತವಾಗಿದೆ.

‘ಶ್ರೀರಾಮ ಖಾಸಗಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ. ನಾವು ಕಿರಾಣಿ ಅಂಗಡಿ ನಡೆಸುತ್ತೇವೆ. ಜ.12ರಂದು ರಾತ್ರಿ 9 ಗಂಟೆ ಸುಮಾರಿಗೆ ಅಂಗಡಿಯಿಂದ ಮನೆಗೆ ಬಂದು ನಾನು ದಿನಸಿ ಸಾಮಾನು ಒಯ್ದಿದ್ದೆ. ಬಳಿಕ ರಾತ್ರಿ 9.30ರ ಹೊತ್ತಿಗೆ ನಾನು ಹಾಗೂ ನನ್ನ ಹೆಂಡತಿ ಅಂಗಡಿ ಬಾಗಿಲು ಹಾಕಿ ಮನೆಗೆ ಬಂದೆವು. ಮನೆಯು ಒಳಗಿನಿಂದ ಲಾಕ್‌ ಆಗಿತ್ತು. ನಾವು ಕೂಗಿದರೂ ಮಗ ಬಾಗಿಲು ತೆರೆಯಲಿಲ್ಲ. ಭಯದಿಂದ ಬಾಗಿಲು ಮುರಿದು ನೋಡಿದಾಗ ಮಗ ಸೀರೆಯಿಂದ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದು ಕಂಡಿತು’ ಎಂದು ಶ್ರೀರಾಮ ಅವರ ತಂದೆ ಸುಖಶೀಲ ಪಾಟೀಲ ದೂರಿನಲ್ಲಿ ತಿಳಿಸಿದ್ದಾರೆ.

ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್‌ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.

ADVERTISEMENT