ADVERTISEMENT

‘ದೇಶದ ಅಭಿವೃದ್ಧಿಗೆ ನಿಖರ ಅಂಕಿಅಂಶ ಅಗತ್ಯ’

ಪಿ.ಸಿ.ಮಹಾಲನೋಬಿಸ್‌ ಜನ್ಮದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 15:42 IST
Last Updated 3 ಜುಲೈ 2025, 15:42 IST
ಕಲಬುರಗಿಯಲ್ಲಿ ಸಂಖ್ಯಾಶಾಸ್ತ್ರಜ್ಞ ಮಹಾಲನೋಬಿಸ್‌ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಸಾಂಖಿಕ ದಿನ ಆಚರಿಸಲಾಯಿತು
ಕಲಬುರಗಿಯಲ್ಲಿ ಸಂಖ್ಯಾಶಾಸ್ತ್ರಜ್ಞ ಮಹಾಲನೋಬಿಸ್‌ ಜನ್ಮದಿನದ ಅಂಗವಾಗಿ ರಾಷ್ಟ್ರೀಯ ಸಾಂಖಿಕ ದಿನ ಆಚರಿಸಲಾಯಿತು   

ಕಲಬುರಗಿ: ‘ದೇಶದ ಅಭಿವೃದ್ದಿಗೆ ಹಾಗೂ ಸಮೀಕ್ಷೆ ಕಾರ್ಯಗಳಲ್ಲಿ ನಿಖರ ಅಂಕಿಅಂಶಗಳನ್ನು ಪಡೆಯಲು ಸಂಖ್ಯಾ ಸಂಗ್ರಹಣಾ ಇಲಾಖೆಯ ಪಾತ್ರ ಬಹಳ ಮುಖ್ಯವಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಯೋಜನಾಧಿಕಾರಿ ಶರಣಯ್ಯ ಮಠಪತಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಂಖ್ಯಾ ಸಂಗ್ರಹಣಾ ಇಲಾಖೆ ಕಚೇರಿಯಲ್ಲಿ ಪಿ.ಸಿ.ಮಹಲನೋಬಿಸ್ ಜನ್ಮದಿನದ ಅಂಗವಾಗಿ ನಡೆದ ರಾಷ್ಟ್ರೀಯ ಸಾಂಖಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದ ಆರ್ಥಿಕ ಅಭಿವೃದ್ಧಿಗೆ ಮತ್ತು ಸಂಖ್ಯಾಶಾಸ್ತ್ರಕ್ಕೆ ಮಹಲನೋಬಿಸ್‌ ಅವರು ಬಹಳಷ್ಟು ಕೊಡುಗೆ ನೀಡಿದ್ದಾರೆ. ಪಂಚವಾರ್ಷಿಕ ಯೋಜನೆ ಮೂಲಕ ದೇಶದ ಅಭಿವೃದ್ಧಿ ಸಾಧ್ಯವಿದೆ ಎಂಬುದು ಅವರ ನಿಲುವಾಗಿತ್ತು’ ಎಂದರು.

ADVERTISEMENT

‘ಪಿ.ಸಿ.ಮಹಲನೋಬಿಸ್‌ 1893ರ ಜೂನ್ 29ರಂದು ಜನಿಸಿದರು. ಭಾರತೀಯ ವಿಜ್ಞಾನಿ ಮತ್ತು ಅನ್ವಯಿಕ ಸಂಖ್ಯಾಶಾಸ್ತ್ರಜ್ಞರಾಗಿದ್ದರು. 1932ರಲ್ಲಿ ಭಾರತೀಯ ಸಂಖ್ಯಾಶಾಸ್ತ್ರೀಯ ಸಂಸ್ಥೆ ಸ್ಥಾಪಿಸಿದರು. 2007ರಿಂದ ಅವರು ಹುಟ್ಟಿದ ದಿನವನ್ನು ರಾಷ್ಟ್ರೀಯ ಸಾಂಖಿಕ ದಿನವನ್ನಾಗಿ ಆಚರಿಸಲಾಗುತ್ತಿದೆ’ ಎಂದರು.

ಕಲಬುರಗಿಯ ಲೆಕ್ಕ ಪರಿಶೋಧನೆ ಮತ್ತು ಸಹಕಾರ ಸಂಘಗಳ ಉಪನಿರ್ದೇಶಕ ಸುಭಾಷಚಂದ್ರ ಎಸ್.ಬರ್ಮಾ, ನಿವೃತ್ತ ಸಹಾಯಕ ಸಾಂಖಿಕ ಅಧಿಕಾರಿ ಈರಣ್ಣ ಆರ್. ಚಿನ್ನಗುಡಿ ಮಾತನಾಡಿದರು.

ಸಹಾಯಕ ಸಾಂಖಿಕ ಅಧಿಕಾರಿ ಗೀತಾಂಜಲಿ ಅವರು ಮಹಲನೋಬಿಸ್‌ ಅವರ ಜೀವನ, ಸಾಧನೆ ಮತ್ತು ದೇಶದ ಆರ್ಥಿಕತೆಗೆ ನೀಡಿದ ಕೊಡುಗೆಗಳ ಕುರಿತು ಮಾತನಾಡಿದರು.

ಜಿಲ್ಲಾ ಸಾಂಖಿಕ ಸಂಗ್ರಹಣಾಧಿಕಾರಿ ಜಯಶ್ರೀ ಕರಜಗಿ ಅಧ್ಯಕ್ಷತೆ ವಹಿಸಿದ್ದರು. ಪ್ರಭಾರ ಸಹಾಯಕ ನಿರ್ದೇಶಕ ದಾದ ಗೌಡ, ಸಹಾಯಕ ಸಾಂಖಿಕ ಅಧಿಕಾರಿ ನೀಲಮ್ಮ ಶರಣ ವಳಕೇರಿ ಸ್ವಾಗತಿಸಿ, ನಿರೂಪಿಸಿದರು. ಆಳಂದ ತಾಲ್ಲೂಕಿನ ಗಣತಿದಾರ ಪರಶುರಾಮ ಎಸ್.ದಶವಂತ ವಂದಿಸಿದರು. ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.