ADVERTISEMENT

ಕಲಬುರಗಿ | 'ಆಪರೇಷನ್‌ ಸಿಂಧೂರ್‌': ಕಾಂಗ್ರೆಸ್‌ ಮುಖಂಡರ ಹೇಳಿಕೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 17 ಮೇ 2025, 14:23 IST
Last Updated 17 ಮೇ 2025, 14:23 IST
ಸುಧಾ ಹಾಲಕೈ
ಸುಧಾ ಹಾಲಕೈ   

ಕಲಬುರಗಿ: ‘ಆಪರೇಷನ್‌ ಸಿಂಧೂರ್‌ ಬಗೆಗೆ ಕಾಂಗ್ರೆಸ್‌ ಪಕ್ಷದ ಮುಖಂಡರು ಮನಬಂದಂತೆ ಹೇಳಿಕೆಗಳನ್ನು ನೀಡುತ್ತಿರುವುದು ಖಂಡನೀಯ’ ಎಂದು ಬಿಜೆಪಿ ವಕ್ತಾರೆ ಡಾ. ಸುಧಾ ಹಾಲಕೈ ಅಸಮಾಧಾನ ವ್ಯಕ್ತಪಡಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಯೋತ್ಪಾದಕರ ತಾಣಗಳಿಗೆ ನಿಖರವಾಗಿ ಗುರಿಯಿಟ್ಟು ಧ್ವಂಸಗೊಳಿಸಿದ ಭಾರತೀಯ ಸೈನಿಕರ ಬಗೆಗೆ ಶಾಸಕ ಕೊತ್ತೂರು ಮಂಜುನಾಥ ಸೇರಿದಂತೆ ಕಾಂಗ್ರೆಸ್‌ ಮುಖಂಡರು ಆಡುತ್ತಿರುವ ಮಾತು ಬೇಸರ ತಂದಿದೆ’ ಎಂದರು.

‘ಜಿಲ್ಲೆಯ ಅಭಿವೃದ್ಧಿ ಬಗೆಗೆ ಯೋಚಿಸಿದೇ ಬರೀ ರಾಜಕೀಯ ಮಾಡುತ್ತಿರುವ ಸಚಿವ ಪ್ರಿಯಾಂಕ್‌ ಖರ್ಗೆ, ಸೇನಾ ಹೋರಾಟ, ಕದನ ವಿರಾಮ ಕುರಿತು ಪ್ರಧಾನಿಗೆ ಯಾವ ನೈತಿಕತೆಯಿಂದ ಪ್ರಶ್ನೆಗಳ ಕೇಳುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.