ಕಡತ
(ಸಾಂದರ್ಭಿಕ ಚಿತ್ರ)
ಕಲಬುರಗಿ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಎರಡನೇ ದಿನವಾದ ಮಂಗಳವಾರವೂ ಸಮಸ್ಯೆಗಳು ಕಾಡಿದವು. ಇದರಿಂದ ಅಲ್ಲಲ್ಲಿ ಸಮೀಕ್ಷೆ ಮಂದಗತಿ ನಡೆದರೂ, ಪೂರ್ಣ ಪ್ರಮಾಣದಲ್ಲಿ ನಡೆಯಲಿಲ್ಲ.
ಸೋಮವಾರ ನೀಡಿದ್ದ ಸಮೀಕ್ಷಾ ಆ್ಯಪ್ ಅನ್ನು ಮಂಗಳವಾರ ಬೆಳಿಗ್ಗೆ ಪರಿಷ್ಕರಿಸಿ (ಅಪ್‌ಡೇಟ್ ವರ್ಷನ್) ನೀಡಿದ್ದರೂ ಹಲವೆಡೆ ಸಮೀಕ್ಷೆಯೇ ಸಾಧ್ಯವಾಗಿಲ್ಲ.
ಕಲಬುರಗಿ, ಬೀದರ್‌ನಲ್ಲಿ ಕೆಲ ಸಿಬ್ಬಂದಿಗೆ ಒಂದು ಮನೆ ಸಮೀಕ್ಷೆಯೂ ಸಾಧ್ಯವಾಗಿಲ್ಲ. ಯಾದಗಿರಿ ಜಿಲ್ಲೆಯಲ್ಲಿ ಆ್ಯಪ್ ಸಮಸ್ಯೆ ಕಾಡಿತು. ಯಾದಗಿರಿ ತಾಲ್ಲೂಕಿನಲ್ಲಿ ಮಧ್ಯಾಹ್ನದ ಬಳಿಕ ಸಮೀಕ್ಷೆ ಕಿಟ್ ನೀಡಲಾಯಿತು.
ಕೊಪ್ಪಳ ಗ್ರಾಮೀಣ ಪ್ರದೇಶದಲ್ಲಿ ಅನೇಕ ಶಿಕ್ಷಕರಿಗೆ ಎರಡನೇ ದಿನವೂ ಪರಿಕರಗಳೇ ತಲುಪಿರಲಿಲ್ಲ. ಹೆಚ್ಚಿನ ಕಡೆ ಎರಡನೇ ದಿನವೂ ಗಣತಿ ಮಂದಗತಿಯಲ್ಲಿ ಸಾಗಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.