ADVERTISEMENT

ತಲೆಮರೆಸಿಕೊಂಡಿದ್ದ ಮೂವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 14:09 IST
Last Updated 28 ನವೆಂಬರ್ 2021, 14:09 IST
ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿ ಪೊಲೀಸರು ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಪಿಎಸ್‌ಐ ಮಲ್ಲಣ್ಣಾ ಯಲಗೊಂಡ ಹಾಗೂ ಪೊಲೀಸ್‌ ಸಿಬ್ಬಂದಿಗಳು ಇದ್ದರು
ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿ ಪೊಲೀಸರು ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ. ಪಿಎಸ್‌ಐ ಮಲ್ಲಣ್ಣಾ ಯಲಗೊಂಡ ಹಾಗೂ ಪೊಲೀಸ್‌ ಸಿಬ್ಬಂದಿಗಳು ಇದ್ದರು   

ಆಳಂದ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ವಿವಿಧ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಭಾನುವಾರ ಮಾದನ ಹಿಪ್ಪರಗಾ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ರಾಮು ಸೋಪಾನ ಪವಾರ, ಸೋಪಾನ ರಾಮು ಪವಾರ, ಪಾರ್ವತಿ ರಾಮು ಪವಾರ ಬಂಧಿತರು. ಇವರು ಹಿರೋಳಿ ಪಾರ್ಧಿ ತಾಂಡಾದ ನಿವಾಸಿಗಳು.

2015ರಲ್ಲಿ ಹಿರೋಳಿ ಗ್ರಾಮದಲ್ಲಿ ಕೊಲೆ ಯತ್ನ ಹಾಗೂ 2016ರಲ್ಲಿ ಸರಸಂಬಾ ಗ್ರಾಮದಲ್ಲಿ ಮೋಟಾರ್‌ ಪೈಪ್‌ ಹಾಗೂ ಸಾಮಗ್ರಿಗಳು ಕಳವು ಮಾಡಿದ ಪ್ರಕರಣದ ಆರೋಪಿಗಳಾಗಿದ್ದರು.

ADVERTISEMENT

ಪಿಎಸ್ಐ ಮಲ್ಲಣ್ಣ ಯಲಗೊಂಡ ನೇತೃತ್ವದಲ್ಲಿ ಸಿಬ್ಬಂದಿಯಾದ ಹಣಮಂತ, ಬೀರಣ್ಣಾ ಪೂಜಾರಿ, ಮಲ್ಲಿನಾಥ ಸಕ್ಕರಗಿ ಅವರು ಹಿರೋಳಿ ಗ್ರಾಮದ ಸರಹದ್ದಿನಲ್ಲಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಚಿತಲಿ ಗ್ರಾಮದಲ್ಲಿ 9 ಕುರಿ ಕಳವು

ಆಳಂದ: ತಾಲ್ಲೂಕಿನ ಚಿತಲಿ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ ಕುರಿಗಳನ್ನು ದುಷ್ಕರ್ಮಿಗಳು ಶುಕ್ರವಾರ ರಾತ್ರಿ ಕಳ್ಳತನ ಮಾಡಿದ್ದಾರೆ.

ಗ್ರಾಮದ ದತ್ತಾತ್ರೇಯ ಅಪ್ಪಾರಾವ ಕೌಲಗಿ ಅವರು ಮನೆ ಮುಂದಿನ ಕೊಟ್ಟಿಗೆಯಲ್ಲಿ 30ಕ್ಕೂ ಹೆಚ್ಚು ಕುರಿಗಳನ್ನು ಕಟ್ಟಿದ್ದರು. ರಾತ್ರೋ ರಾತ್ರಿ ಕೊಟ್ಟಿಗೆಗೆ ನುಗ್ಗಿದ ಕುರಿಗಳ್ಳರು 9 ಕುರಿಗಳನ್ನು ಹೊತ್ತುಕೊಂಡು ಪರಾರಿಯಾಗಿದ್ದಾರೆ.

ಅಂದಾಜು ₹ 1 ಲಕ್ಷ ಮೌಲ್ಯದ ಕುರಿಗಳು ಕಳೆದುಕೊಂಡ ಘಟನೆಯಿಂದ ಸಹಜವಾಗಿ ಬಡ ಕುರಿಗಾಯಿ ರೈತ ಸಂಕಷ್ಟ ಎದುರಾಗಿದೆ. ಆಳಂದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.