ADVERTISEMENT

ಕಲಬುರ್ಗಿ: ಜ್ವರದಿಂದ ಮೂವರು ಬಾಲಕಿಯರ ಸಾವು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 6:38 IST
Last Updated 6 ಅಕ್ಟೋಬರ್ 2021, 6:38 IST

ಕಲಬುರ್ಗಿ: ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಆನೂರ ಗ್ರಾಮದಲ್ಲಿ ಜ್ವರದಿಂದ ತಿಂಗಳಲ್ಲಿ ಮೂವರುಬಾಲಕಿಯರುಸಾವನ್ನಪ್ಪಿದ್ದಾರೆ.

ಗ್ರಾಮದ ಚೈತ್ರಾ ಹೂಗಾರ (12), ಸಂಗಮ್ಮ ತೆಲ್ಲೂರ (10), ಅನುಶ್ರೀ ಸಿಂಗೆ (9) ಮೃತಪಟ್ಟ ಬಾಲಕಿಯರು. ಎಲ್ಲರು ತೀವ್ರ ಜ್ವರದಿಂದ ಬಳಲು ತಿದ್ದರು ಎನ್ನಲಾಗಿದೆ.

ಗ್ರಾಮದಲ್ಲಿ ಸಾಮಾನ್ಯ ಜ್ವರ ಲಕ್ಷಣದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ಸಾಧಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾಳೆ. ಮತ್ತೋರ್ವ ಬಾಲಕಿ ಇದಾದ ನಾಲ್ಕೈದು ದಿನಗಳ ನಂತರ ಇದೇ ಸಮಸ್ಯೆಯಿಂದ ಮತಪಟ್ಟಿರುವುದರಿಂದ ಗ್ರಾಮದಲ್ಲಿ ಜನರು ಆತಂಕ ಪಡುವಂತಾಗಿದೆ.

ADVERTISEMENT

ಈ ಬಗ್ಗೆ ಪ್ರತಿಕ್ರಿಯೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ ಲಭ್ಯರಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.