ADVERTISEMENT

ಸಿಡಿಲಿಗೆ ನಾಲ್ವರು ಸಾವು, 25 ಕುರಿಗಳು ಬಲಿ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 14:27 IST
Last Updated 10 ಅಕ್ಟೋಬರ್ 2019, 14:27 IST

ಕಲಬುರ್ಗಿ: ಕಲಬುರ್ಗಿ ಜಿಲ್ಲೆಯಲ್ಲಿ ಸಿಡಿಲು ಬಡಿದು ಮೂವರು ಮತ್ತು ರಾಯಚೂರಿನ ಶಕ್ತಿನಗರ ಸಮೀಪದ ದೇವಸೂಗುರಿನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

ಚಿತ್ತಾಪುರ ತಾಲ್ಲೂಕಿನ ದಂಡಗುಂಡ ಗ್ರಾಮದ ಹೊರವಲಯದ ಜಮೀನಿನಲ್ಲಿ ಎಳ್ಳು ರಾಶಿಯಲ್ಲಿ ತೊಡಗಿದ್ದ ಉಮಾದೇವಿ ಬಸ್ಸಪ್ಪ ಹದಗಲ್ (17) ಮತ್ತು ವಾಡಿ ಸಮೀಪದ ಕಡಬೂರಿನಲ್ಲಿ ರಮೇಶ ನರಿಬೋಳ (14) ಮೃತಪಟ್ಟಿದ್ದಾರೆ.

ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಾ ಗ್ರಾಮದಲ್ಲಿ ಮಂಜುನಾಥ ಗುರಪ್ಪ ಮೈಂದರ್ಗಿ(16) ಮೃತಪಟ್ಟಿದ್ದು, ನಮಿತಾ ಶ್ರೀಶೈಲ ಹಡಲಗಿ ಅವರಿಗೆ ಸಣ್ಣಪುಟ್ಟ ಗಾಯವಾಗಿದೆ.

ADVERTISEMENT

ರಾಯಚೂರು ಜಿಲ್ಲೆಯಶಕ್ತಿನಗರ ಸಮೀಪದ ದೇವಸೂಗುರುಜನತಾ ಕಾಲೊನಿ ನಿವಾಸಿ ಸುನೀತಾ ಮಲ್ಲಿಕಾರ್ಜುನ ಕುಂಬಾರ (18) ಸಾವನ್ನಪ್ಪಿದ್ದಾರೆ.

ವಾಡಿ ಸಮೀಪದ ಯಾಗಾಪೂರ ವ್ಯಾಪ್ತಿಯ ಪತ್ತು ನಾಯಕ ತಾಂಡಾದಲ್ಲಿ ಸಿಡಿಲಿಗೆ 25 ಕುರಿಗಳು ಬಲಿಯಾಗಿವೆ.

ದೇವಸೂಗೂರು ಹೋಬಳಿ ವ್ಯಾಪ್ತಿಯ ಶಕ್ತಿನಗರ, ಯದ್ಲಾಪುರ ಸೇರಿ ಕೆಲ ಗ್ರಾಮಗಳು ಜಲಾವೃತವಾಗಿವೆ.ಯಾದಗಿರಿ ಮತ್ತು ಬೀದರ್‌ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ.

ಮಸೀದಿಯ ಮಿನಾರ್‌ಗೆ ಧಕ್ಕೆ: ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಹಸರಗುಂಡಗಿ ಗ್ರಾಮದಲ್ಲಿ ಬುಧವಾರ ರಾತ್ರಿ ಸಿಡಿಲು ಬಡಿದು ಮಸೀದಿಯ ಮಿನಾರ್‌ಗೆ ಧಕ್ಕೆಯಾಗಿದೆ. ಮಿನಾರ್‌ನ ತುತ್ತ ತುದಿಯ ಕೆಳಹಂತದಲ್ಲಿದ್ದ ಗೋಲಾಕಾರದ ಬಿಂದಿಗೆ ಆಕೃತಿ ಒಡೆದಿದೆ. ತುದಿಯ ಭಾಗ ಮುರಿದು ಬೇರೆ ಕಡೆ ವಾಲಿದೆ.

ಸಿಡಿಲಿನಿಂದ ಮಸೀದಿಯ ಅಕ್ಕಪಕ್ಕದಲ್ಲಿರುವ ರೇವಣಸಪ್ಪ ಪೂಜಾರಿ ಮತ್ತು ಇತರರ ಮನೆಗಳಲ್ಲಿದ್ದ ಟಿವಿ, ಫ್ಯಾನ್‌ ಸುಟ್ಟಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.