ADVERTISEMENT

ಕಲಬುರಗಿ: ದೊಡ್ಡಪ್ಪ ಅಪ್ಪಗೆ ತುಲಾಭಾರ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2022, 14:37 IST
Last Updated 5 ಸೆಪ್ಟೆಂಬರ್ 2022, 14:37 IST
ಕಲಬುರಗಿಯ ಶಬರಿ ಸಂಕಲ್ಪ ಸನ್ನಿಧಾನದಲ್ಲಿ ನಡೆದ ಇರುಮುಡಿ ಮಹಾಪೂಜೆ ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಅವರನ್ನು ನಾಣ್ಯದಿಂದ ತುಲಾಭಾರ ಮಾಡಲಾಯಿತು
ಕಲಬುರಗಿಯ ಶಬರಿ ಸಂಕಲ್ಪ ಸನ್ನಿಧಾನದಲ್ಲಿ ನಡೆದ ಇರುಮುಡಿ ಮಹಾಪೂಜೆ ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ಸಂಸ್ಥಾನದ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಅವರನ್ನು ನಾಣ್ಯದಿಂದ ತುಲಾಭಾರ ಮಾಡಲಾಯಿತು   

ಕಲಬುರಗಿ: ನಗರದ ಶಬರಿ ಸಂಕಲ್ಪ ಸನ್ನಿಧಾನದಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರು ಮಾಲೆ ಧಾರಣೆಯ ಇರುಮುಡಿ ಮಹಾಪೂಜೆ ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಅವರನ್ನು ನಾಣ್ಯದಿಂದ ತುಲಾಭಾರ ಮಾಡಲಾಯಿತು.

ಗುರುಸ್ವಾಮಿ ತುಕಾರಾಮ ಚಿತ್ತಾಪುರ ನೇತೃತ್ವದಲ್ಲಿ ಸುಮಾರು 65 ಮಾಲಾಧಾರಿಗಳು ಕಠಿಣ ವೃತ್ತದೊಂದಿಗೆ ಅಯ್ಯಪ್ಪ ಸ್ವಾಮಿಯ ಧ್ಯಾನ ಮಾಡಿ ಶ್ರದ್ಧಾ-ಭಕ್ತಿಯಿಂದ ಪೂಜೆ ನೆರವೇರಿಸಿದರು. ಶರಣಬಸವೇಶ್ವರ ದೇವಸ್ಥಾನದಿಂದ ಸನ್ನಿಧಾನದವರೆಗೆ ಮೆರವಣಿಗೆ ನಡೆಯಿತು.

ಶ್ರೀನಿವಾಸ ಸರಡಗಿಯ ಡಾ. ಅಪ್ಪರಾವ ಮುತ್ಯಾ, ನರನಾಳ ಸೊಂತದ ಶಿವಕುಮಾರ ಶಿವಾಚಾರ್ಯರು, ಮುಲ್ಲಾಮಾರಿ ತೀರದ ಶಂಕರಲಿಂಗ ಮಹಾರಾಜ, ಚವದಾಪೂರ ಮಠದ ಡಾ.ರಾಜಶೇಖರ ಶಿವಾಚಾರ್ಯರು, ಅತನೂರ ಸಂಸ್ಥಾನ ಮಠದ ಅಭಿನವ ಗುರುಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.

ADVERTISEMENT

ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಡಾ.ದಾಕ್ಷಾಯಣಿ ಎಸ್.ಅಪ್ಪ, ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ದೇಶಮುಖ, ಕ್ರೆಡೆಲ್ ಅಧ್ಯಕ್ಷ ಚಂದು ಪಾಟೀಲ, ಮಾಜಿ ಸಚಿವ ರೇವುನಾಯಕ ಬೇಳಮಗಿ,ಬಸಯ್ಯ ಸಾಲಿಮಠ, ನಾಗರಾಜ ಸಜ್ಜನ, ಚಂದ್ರು ಮಾಲೀಪಾಟೀಲ, ರುದ್ರಶೆಟ್ಟಿ ಕಲ್ಯಾಣಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.