ADVERTISEMENT

ದೇವಲ ಗಾಣಗಾಪುರ: ಇಬ್ಬರು ಯಾತ್ರಿಕರು ಸಾವು

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2024, 5:04 IST
Last Updated 27 ಸೆಪ್ಟೆಂಬರ್ 2024, 5:04 IST

ಅಫಜಲಪುರ: ದೇವಲ ಗಾಣಗಾಪುರ ದತ್ತ ಮಹಾರಾಜರ ದರ್ಶನಕ್ಕೆಂದು ಬಂದಿದ್ದ ಮಹಾರಾಷ್ಟ್ರದ ಉದ್ಗಿರ್‌ ನಗರದ ಇಬ್ಬರು ಯಾತ್ರಿಕರು ಗುರುವಾರ ಭೀಮಾ ನದಿಯಲ್ಲಿ ಸ್ನಾನ ಮಾಡಲು ಹೋಗಿ ಮುಳುಗಿ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮಹಾರಾಷ್ಟ್ರ ರಾಜ್ಯದ ಲಾತೂರ್ ಜಿಲ್ಲೆಯ ಉದ್ಗಿರ್ ತಾಲ್ಲೂಕಿನ ಗಣೇಶ ನಗರದ ನಿವಾಸಿ ಬಾಲಾಜಿ ದೋಯಿಜೋಡೆ (40) ಮಂಜುನಾಥ್ ದೋಯಿಜೋಡೆ (47) ಎಂಬುವರು ಮೃತರು. ಇವರೊಂದಿಗೆ ಮೋಹನ್ ಪಾಟೀಲ್ ಎಂಬುವವರೂ ಭೀಮಾನದಿಯಲ್ಲಿ ಸ್ನಾನ ಮಾಡಲು ಹೋಗಿದ್ದರು. ಆದರೆ ಸ್ಥಳೀಯರು ಅವರನ್ನು ರಕ್ಷಣೆ ಮಾಡಿದ್ದಾರೆ ಎಂದು ಎಂದು ತಿಳಿದುಬಂದಿದೆ.

ದತ್ತಾತ್ರೇಯ ಮಹಾರಾಜರ ದರ್ಶನಕ್ಕೆಂದು ಬುಧವಾರವೇ ಗಾಣಗಾಪುರಕ್ಕೆ ಬಂದಿದ್ದ ಯಾತ್ರಿಕರು ವಸತಿಗೃಹದಲ್ಲಿ ತಂಗಿದ್ದರು. ಗುರುವಾರ ಬೆಳಿಗ್ಗೆ ಸ್ನಾನಕ್ಕೆಂದು ನದಿಗೆ ಇಳಿದಿದ್ದರು. ದೇವಲ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.