ADVERTISEMENT

ರೈಲು–ಪ್ಲಾಟ್‌ಫಾರ್ಮ್‌ ಮಧ್ಯೆ ಸಿಲುಕಿದ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು 

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2022, 14:49 IST
Last Updated 7 ಡಿಸೆಂಬರ್ 2022, 14:49 IST
   

ಕಲಬುರಗಿ: ಪ್ಲಾಟ್‌ಫಾರ್ಮ್‌ ಮತ್ತು ಚಲಿಸುವ ರೈಲಿನ ನಡುವಿನ ಕಿರಿದಾದ ಅಂತರದಲ್ಲಿ ಸಿಲುಕಿದ ಮಹಿಳೆ ಸೇರಿ ಇಬ್ಬರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಕಲಬುರಗಿ ರೈಲು ನಿಲ್ದಾಣದಲ್ಲಿ ಮಂಗಳವಾರ ಸಂಜೆ ನಡೆದಿದೆ.

‘ಪ್ಲಾಟ್‌ಫಾರ್ಮ್‌ ಸಂಖ್ಯೆ ಮೂರಕ್ಕೆ ಹುಸೇನ್‌ ಸಾಗರ್‌ ರೈಲು ಬರುವ ಬಗ್ಗೆ ಘೋಷಣೆ ಮಾಡಲಾಯಿತು. ಒಂದನೇ ಪ್ಲಾಟ್‌ಫಾರ್ಮ್‌ನಲ್ಲಿದ್ದ ಇಬ್ಬರು ಪ್ರಯಾಣಿಕರು ರೈಲು ಹಳಿ ದಾಟಿಕೊಂಡು ಮೂರನೇ ಪ್ಲಾಟ್‌ಫಾರ್ಮ್‌ಗೆ ಹೋಗಲು ಯತ್ನಿಸಿದರು. ಆಗ ಗೂಡ್ಸ್ ರೈಲು ಬಂದಿದೆ. ತಕ್ಷಣ ಅವರು ಪ್ಲಾಟ್‌ಫಾರ್ಮ್‌ ಕೆಳಗಡೆ ಕೂತರು. ರೈಲು ಹೋದ ಬಳಿಕ ಇತರೆ ಪ್ರಯಾಣಿಕರು ಅವರನ್ನು ಮೇಲೆಳೆದರು’ ಎಂದು ಕಲಬುರಗಿ ರೈಲು ನಿಲ್ದಾಣದ ವ್ಯವಸ್ಥಾಪಕ ಸತ್ಯನಾರಾಯಣ ದೇಸಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆ ಇಬ್ಬರು ಪ್ರಯಾಣಿಕರ ಬಗ್ಗೆ ಮಾಹಿತಿ ಪಡೆಯಲು ಪೊಲೀಸರು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ರೈಲು ಹಳಿ ದಾಟದಂತೆ ನಿತ್ಯ ಹೇಳಿದರೂ ಪ್ರಯಾಣಿಕರು ಸ್ಪಂದಿಸುತ್ತಿಲ್ಲ. ಸುರಕ್ಷತೆ ಹಿತದೃಷ್ಟಿಯಿಂದ ಪ್ರಯಾಣಿಕರು ಮೇಲ್ಸೇತುವೆ ಬಳಸಬೇಕು’ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.