ADVERTISEMENT

ಸಂಘಟನೆಯತ್ತ ವೃತ್ತಿನಿರತರು, ರಾಜಕಾರಣಿಗಳು

ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಘಟಕಕ್ಕೆ ಮೊದಲಬಾರಿಗೆ ಚುನಾವಣೆ, ಸೆ. 29ರಂದು ಮತದಾನ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 5:08 IST
Last Updated 21 ಸೆಪ್ಟೆಂಬರ್ 2019, 5:08 IST
ಗಣೇಶ ಡಿ. ಅಣಕಲ್‌
ಗಣೇಶ ಡಿ. ಅಣಕಲ್‌   

ಕಲಬುರ್ಗಿ: ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಘಟಕದ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಚುನಾವಣೆ ನಡೆಯುತ್ತಿದೆ. ವೃತ್ತಿನಿರತರು, ರಾಜಕಾರಣಿಗಳು ಹಾಗೂ ಮುಂಚೂಣಿ ಹೋರಾಟಗಾರರೂ ಕಣಕ್ಕೆ ಇಳಿದಿದ್ದರಿಂದ ಚುನಾವಣಾ ತುರು‌ಸು ಪಡೆಯುತ್ತಿದೆ.

ಅಧ್ಯಕ್ಷ ಸ್ಥಾನಕ್ಕೆ ಮೂವರು, ಕಾರ್ಯಕಾರಿ ಸಮಿತಿಯ ಪುರುಷರ ಸ್ಥಾನಕ್ಕೆ ಒಟ್ಟು 88 ಮಂದಿ ನಾಮಪತ್ರಗಳು ಸಲ್ಲಿಕೆಯಾಗಿದ್ದು, ಸೆ. 23ರವರೆಗೂ ಹಿಂಪಡೆಯಲು ಅವಕಾಶವಿದೆ. ಸೆ. 29ರಂದು ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಒಟ್ಟು 31 ಮಂದಿಯ ಆಯ್ಕೆಗಾಗಿ ಈ ಎಲ್ಲ ಮತದಾರರೂ ತಲಾ 31 ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ.

ಮಹಾಸಭೆಯ ಜಿಲ್ಲಾ ಘಟಕದ ರಚನೆಯಾಗಿ ಇಲ್ಲಿಗೆ ಸುಮಾರು ಮೂರು ದಶಕ ಉರುಳಿವೆ. ಇಷ್ಟು ವರ್ಷ ಸಮಾಜದ ಸದಸ್ಯರು ನೇಮಕ ಮಾಡಿದ ವ್ಯಕ್ತಿಗಳೇ ಅಧ್ಯಕ್ಷರಾಗುತ್ತ ಬಂದಿದ್ದಾರೆ. ಈ ಬಾರಿ ಹೊಸ ತಲೆಮಾರಿನ ಮುಖಂಡರು ಸಮಾಜ ಸಂಘಟನೆಗೆ ಧುಮುಕಿದ್ದಾರೆ. ಈ ಕಾರಣ ಮೊದಲ ಬಾರಿಗೆ ಚುನಾವಣೆ ಮೂಲಕ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡುವ ಅನಿವಾರ್ಯ ಬಂದಿದೆ.

ADVERTISEMENT

ಮೂರು ಪ್ಯಾನಲ್‌ ಕಣದಲ್ಲಿ: ಅಧ್ಯಕ್ಷ ಕುರ್ಚಿಗಾಗಿ ನಿಕಟಪೂರ್ವ ಅಧ್ಯಕ್ಷ ಅರುಣಕುಮಾರ ಶಂಕರಗೌಡ ಪಾಟೀಲ, ಹೋರಾಟಗಾರ ಗಣೇಶ ಡಿ. ಅಣಕಲ್‌ ಹಾಗೂ ಮಾಜಿ ಮೇಯರ್‌ ಶರಣಕುಮಾರ ಮಲ್ಲಿಕಾರ್ಜುನ ಮೋದಿ ಅವರು ಕಣಕ್ಕಿಳಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.