ADVERTISEMENT

ಎಂಜಿನಿಯರಿಂಗ್‌, ವೈದ್ಯಕೀಯ ಪರಸ್ಪರ ಪೂರಕವಾಗಲಿ

ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಿಗೆ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 12:29 IST
Last Updated 30 ಡಿಸೆಂಬರ್ 2019, 12:29 IST
ವಿಟಿಯು ಪ್ರಾದೇಶಿಕ ಕೇಂದ್ರದಲ್ಲಿ ನಡೆದ ಎಂ.ಆರ್‌.ಎಂ.ಸಿ. ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ.ಉಮೇಶಚಂದ್ರ ಡಿ.ಜಿ. ಚಾಲನೆ ನೀಡಿದರು. ಪ್ರೊ.ಮನು ಟಿ., ಡಾ.ಬಸವರಾಜ ಗಾದಗೆ, ಡಾ.ಎಸ್‌.ಎಸ್‌.ಹೆಬ್ಬಾಳ, ಶುಭಾಂಗಿ ಡಿ.ಸಿ. ಇದ್ದರು
ವಿಟಿಯು ಪ್ರಾದೇಶಿಕ ಕೇಂದ್ರದಲ್ಲಿ ನಡೆದ ಎಂ.ಆರ್‌.ಎಂ.ಸಿ. ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ.ಉಮೇಶಚಂದ್ರ ಡಿ.ಜಿ. ಚಾಲನೆ ನೀಡಿದರು. ಪ್ರೊ.ಮನು ಟಿ., ಡಾ.ಬಸವರಾಜ ಗಾದಗೆ, ಡಾ.ಎಸ್‌.ಎಸ್‌.ಹೆಬ್ಬಾಳ, ಶುಭಾಂಗಿ ಡಿ.ಸಿ. ಇದ್ದರು   

ಕಲಬುರ್ಗಿ: ರೋಗಿಗಳಿಗೆ ಸಮರ್ಪಕವಾಗಿ ವೈದ್ಯಕೀಯ ಸೇವೆಗಳು ದೊರಕುವಲ್ಲಿ ಎಂಜಿನಿಯರಿಂಗ್‌ ಕ್ಷೇತ್ರದ ಕೊಡುಗೆಯೂ ಸಾಕಷ್ಟಿದೆ. ಇಂಟರ್ನೆಟ್‌ ಆಧರಿತ ಸೇವೆಗಳನ್ನು ವೈದ್ಯಕೀಯ ಕ್ಷೇತ್ರದಲ್ಲಿ ಸಮರ್ಪಕವಾಗಿ ಬಳಸುವುದರಿಂದ ಹಲವಾರು ರೋಗಿಗಳ ಜೀವವನ್ನು ಉಳಿಸಬಹುದು ಎಂದು ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪ ರಾಂಪೂರೆ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ.ಉಮೇಶಚಂದ್ರ ಡಿ.ಜಿ. ಹೇಳಿದರು.

ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಲಬುರ್ಗಿ ಪ್ರಾದೇಶಿಕ ಕಚೇರಿಯಲ್ಲಿ ಸೋಮವಾರ ಆರಂಭವಾದ ಆರು ದಿನಗಳ ಟೆಕ್ವಿಪ್ 1.3 ಪ್ರಾಯೋಜಿತ ಬೋಧಕ ಸಿಬ್ಬಂದಿ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ತಂತ್ರಜ್ಞಾನವನ್ನು ಜನರಿಗೆ ತಲುಪಿಸುವುದರಿಂದ ಹಣ ಮತ್ತು ಸಮಯದ ಸದುಪಯೋಗವಾಗುವುದಲ್ಲದೇ ಎಲ್ಲ ತರಹದ ರೋಗಿಗಳಿಗೆ ಅನುಕೂಲವಾಗಲಿದೆ ಎಂದರು.ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಚಾರ್ಯ ಡಾ.ಎಸ್‌.ಎಸ್‌.ಹೆಬ್ಬಾಳ ಮಾತನಾಡಿ, ‘ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ. ಸಹಯೋಗದಲ್ಲಿ ಶೀಘ್ರವೇ ಅಂತರರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಲಾಗುವುದು’ ಎಂದು ಹೇಳಿದರು.

ADVERTISEMENT

ಕಾರ್ಯಕ್ರಮದ ಸಂಯೋಜಕಿ ಶುಭಾಂಗಿ ಡಿ.ಸಿ ಮಾತನಾಡಿ, ಕಾರ್ಯಾಗಾರದಲ್ಲಿ ಮೊದಲ ಮೂರು ದಿನಗಳು ವಿಷಯದ ಮೇಲೆ ಚರ್ಚೆಯನ್ನು ಅಧ್ಯಾಪಕರು ನಡೆಸಿಕೊಡುತ್ತಾರೆ. ಕೊನೆಯ ಮೂರು ದಿನ ನುರಿತ ಔದ್ಯೋಗಿಕ ರಂಗದವರು ನಡೆಸಿಕೊಡುತ್ತಾರೆ ಎಂದು ವಿವರಿಸಿದರು.

ವಿ.ವಿ. ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಬಸವರಾಜ ಗಾದಗೆ, ‘ಪ್ರಾದೇಶಿಕ ಕೇಂದ್ರವನ್ನು ಆವಿಷ್ಕಾರ ಕೇಂದ್ರವನ್ನಾಗಿ ಮಾಡಲು ಪ್ರಯತ್ನ ನಡೆದಿದೆ. ವಿ.ವಿ. ಕುಲಪತಿ ಹಾಗೂ ಕುಲಸಚಿವರು ಇಂತಹ ಕಾರ್ಯಾಗಾರಗಳನ್ನು ನಡೆಸಲು ಅನುಮತಿ ನೀಡಿದ್ದಾರೆ ಎಂದರು.ಕಾರ್ಯಕ್ರಮವನ್ನು ಪ್ರೊ.ಸ್ವರೂಪ ಶಾಸ್ತ್ರಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.