ADVERTISEMENT

‘ಪಹಲ್ಗಾಮ್ ದಾಳಿಯಿಂದ ನಾವು ಪಾಠ ಕಲಿಯಬೇಕು’

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 14:51 IST
Last Updated 28 ಏಪ್ರಿಲ್ 2025, 14:51 IST
ಕರುಣೇಶ್ವರ ಶಿವಾಚಾರ್ಯ
ಕರುಣೇಶ್ವರ ಶಿವಾಚಾರ್ಯ    

ಚಿಂಚೋಳಿ: ‘ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯನ್ನು ಖಂಡಿಸಿದ ನಿಡಗುಂದಾದ ಕಂಚಾಳಕುಂಟಿ ನಂದೀಶ್ವರ ಮಠದ ಕರುಣೇಶ್ವರ ಶಿವಾಚಾರ್ಯರು, ಈ ಘಟನೆಯಿಂದ ಭಾರತೀಯರು ಪಾಠ ಕಲಿಯಬೇಕು’ ಎಂದು ಹೇಳಿದರು.

‘ಇದು ಕೇವಲ 26 ಜೀವಗಳು ಮತ್ತು 26 ಕುಟುಂಬಗಳ ಪ್ರಶ್ನೆಯಲ್ಲ. ಇದು ಅಖಂಡ ಭಾರತದ ಮೇಲಿನ ದಾಳಿಯಾಗಿದೆ. ಇದನ್ನು ಇಡೀ ದೇಶ ಮೆಟ್ಟಿ ನಿಲ್ಲಬೇಕು. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ಆಯಾ ರಾಜ್ಯಗಳು ಸಲಹೆಗಳನ್ನು ನೀಡಲಿ, ಬದಲಾಗಿ ವ್ಯತಿರಿಕ್ತ ಅಭಿಪ್ರಾಯ ನೀಡಬಾರದು’ ಎಂದರು.

‘ಭಾರತದ ಅಖಂಡತೆಗೆ ಮಾರಕವಾಗಿರುವ ಇಂತಹ ದಾಳಿಗಳನ್ನು ಎದುರಿಸಲು ದೇಶ ಸದಾ ಸನ್ನದ್ಧವಾಗಿರಬೇಕು. ದೇಶದ ವಿಚಾರ ಬಂದಾಗ ಎಲ್ಲರೂ ಒಂದಾಗಿ ದೇಶವಿರೋಧಿ ಶಕ್ತಿಗಳ ವಿರುದ್ಧ ಒಂದಾಗಬೇಕು’ ಎಂದು ಅವರು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.