ಕಲಬುರಗಿ: ಕಳೆದ ಜನವರಿ 25ರಂದು ನಡೆದ ಗ್ರೂಪ್ ಬಿ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗವು ಕೀ ಉತ್ತರಗಳನ್ನು ಪ್ರಕಟಿಸಿದ್ದು, ಅದರಲ್ಲಿ 12 ಉತ್ತರಗಳು ತಪ್ಪಾಗಿವೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.
ಕೀ ಉತ್ತರದ ವಿಷಯ ಸಂಕೇತ 609ರ ಪ್ರಶ್ನೆಪತ್ರಿಕೆ ವರ್ಶನ್ ಕೋಡ್ ‘ಆರ್’ ನಲ್ಲಿನ 23, 25, 45, 51, 66, 67, 76, 83, 88, 92 ಹಾಗೂ 95ನೇ ಪ್ರಶ್ನೆಗಳಿಗೆ ನೀಡಲಾದ ಕೀ ಉತ್ತರಗಳು ತಪ್ಪಾಗಿವೆ ಎಂದು ಪರೀಕ್ಷೆ ಬರೆದ ಕಲಬುರಗಿಯ ಅಭ್ಯರ್ಥಿ ಜಗನ್ನಾಥ ಆರೋಪಿಸಿದ್ದಾರೆ.
ನಾನ್ ಕ್ರೀಮಿ ಲೇಯರ್ ಪ್ರಮಾಣಪತ್ರವನ್ನು ಯಾರು ನೀಡುತ್ತಾರೆ ಎಂಬ 23ನೇ ಪ್ರಶ್ನೆಗೆ ಕೆಪಿಎಸ್‌ಸಿ ಕೀ ಉತ್ತರದಲ್ಲಿ ಉಪವಿಭಾಗಾಧಿಕಾರಿ ಎಂದು ಇದೆ. ಆದರೆ, ಪ್ರಮಾಣಪತ್ರವನ್ನು ತಹಶೀಲ್ದಾರ್ ನೀಡುತ್ತಾರೆ.
76ನೇ ಪ್ರಶ್ನೆ ಕರ್ನಾಟಕದಲ್ಲಿ ಒಬಿಸಿ ಪಟ್ಟಿಯ ಪ್ರವರ್ಗ–2ರಲ್ಲಿ ಮುಸ್ಲಿಮರನ್ನು ಸೇರಿಸಲು ಯಾವ ಆಯೋಗವು ಪ್ರಸ್ತಾಪಿಸಿತು ಎಂಬ ಪ್ರಶ್ನೆಗೆ ಮಂಜುನಾಥ ಹೆಗಡೆ ಆಯೋಗ ಎಂದು ಉತ್ತರ ನೀಡಲಾಗಿದೆ. ಆದರೆ, ಕರ್ನಾಟಕದಲ್ಲಿ ಆ ಹೆಸರಿನ ಆಯೋಗವೇ ಇಲ್ಲ ಎಂದು ಅವರು ಹೇಳಿದ್ದಾರೆ.
‘ಈ ಬಗ್ಗೆ ಆಯೋಗಕ್ಕೆ ಲಿಖಿತ ಆಕ್ಷೇಪಣೆಯನ್ನೂ ಸಲ್ಲಿಸಲಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.