ADVERTISEMENT

ನಾಗಾವಿ ಯಲ್ಲಮ್ಮನ ಜಾತ್ರೆಗೆ ಭಕ್ತರ ದಂಡು

ಶಕ್ತಿ ದೇವತೆಯ ಅದ್ಧೂರಿ ಪಲ್ಲಕ್ಕಿ ಮೆರವಣಿಗೆ, ಉತ್ಸವಕ್ಕೆ ಸಾಕ್ಷಿಯಾದ ಐತಿಹಾಸಿಕ ಪಟ್ಟಣ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 10:25 IST
Last Updated 14 ಅಕ್ಟೋಬರ್ 2019, 10:25 IST
ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರು ಪಲ್ಲಕ್ಕಿ ಹೊತ್ತು ಯಲ್ಲಮ್ಮ ದೇವಿ ಜಾತ್ರೆ ಮೆರವಣಿಗೆಗೆ ಚಾಲನೆ ನೀಡಿದರು
ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರು ಪಲ್ಲಕ್ಕಿ ಹೊತ್ತು ಯಲ್ಲಮ್ಮ ದೇವಿ ಜಾತ್ರೆ ಮೆರವಣಿಗೆಗೆ ಚಾಲನೆ ನೀಡಿದರು   

ಚಿತ್ತಾಪುರ: ಪಟ್ಟಣ ಹೊರ ವಲಯದಲ್ಲಿರುವ ಐತಿಹಾಸಿಕ ಕ್ಷೇತ್ರ ನಾಗಾವಿಯಲ್ಲಿ ಶಕ್ತಿ ದೇವತೆ ಯಲ್ಲಮ್ಮ ದೇವಿಯ ಜಾತ್ರೆ, ಪಲ್ಲಕ್ಕಿ ಉತ್ಸವದ ಮೆರವಣಿಗೆ ಭಾನುವಾರ ಶ್ರದ್ಧಾಭಕ್ತಿಯಿಂದ ಜರುಗಿತು.

ಪ್ರತಿ ವರ್ಷ ಪಟ್ಟಣದ ಸರಾಫ್ ಲಚ್ಚಪ್ಪ ನಾಯಕ ಅವರ ಮನೆಯಿಂದ ಪಲ್ಲಕ್ಕಿ ಉತ್ಸವದ ಮೆರವಣಿಗೆ ಹೊರಡುತ್ತದೆ. ಅದರಂತೆ ಭಾನುವಾರ ಮಧ್ಯಾಹ್ನ 2 ಗಂಟೆಗೆ ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರು ಲಚ್ಚಪ್ಪ ನಾಯಕ ಮನೆಯಲ್ಲಿ ದೇವಿಗೆ ಪೂಜೆ, ಮಂಗಳರಾತಿ, ವಿಘ್ನೇಶ್ವರ ಪೂಜೆ, ಗುರುಪೂಜೆ, ಪಲ್ಲಕ್ಕಿ ಪೂಜೆ ನೆರವೇರಿಸಿ ಪಲ್ಲಕ್ಕಿ ಹೊತ್ತುಕೊಂಡು ಹೆಜ್ಜೆ ಹಾಕುವ ಮೂಲಕ ಜಾತ್ರೆ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಪೂಜೆ ಕಾರ್ಯಕ್ರಮದಲ್ಲಿ ಗ್ರೇಡ್-2 ತಹಶೀಲ್ದಾರ್ ರವೀಂದ್ರ ದಾಮಾ, ಸಿದ್ರಾಮಪ್ಪ ನಾಚವಾರ, ದಶರಥ ಮಂತಟ್ಟಿ, ಮುಖಂಡರಾದ ಭೀಮಣ್ಣ ಸಾಲಿ, ಚಂದ್ರಶೇಖರ ಅವಂಟಿ, ಈರಪ್ಪ ಭೋವಿ, ಕೃಷ್ಣ ನಾಯಕ, ಜೀವನರಾವ ನಾಯಕ, ಕಣ್ವ ನಾಯಕ ಇದ್ದರು.

ADVERTISEMENT

ಪಲ್ಲಕ್ಕಿ ಮೆರವಣಿಗೆಯಲ್ಲಿ ವಿವಿಧ ತಂಡಗಳ ಡೊಳ್ಳು ಕುಣಿತ ಆಕರ್ಷಕವಾಗಿತ್ತು. ಭಜನೆ, ಹಲಿಗೆ ವಾದನ ಗಮನ ಸೆಳೆಯಿತು. ಯುವಕರ ಲೇಜಿಮ್ ನೃತ್ಯ, ಡಿಜೆ ಸೌಂಡ್‌ಸಿಸ್ಟಮ್‌ ಮತ್ತು ಹಾಡುಗಳಿಗೆ ಯುವಕರ ನೃತ್ಯಗಳು ಮನ ರಂಜಿಸಿದವು.

ಮೆರವಣಿಗೆ ವೇಳೆ ಭಕ್ತರು ತಂಡೋಪತಂಡವಾಗಿ ಬಂದು ಪಲ್ಲಕ್ಕಿಯಲ್ಲಿನ ಯಲ್ಲಮ್ಮ ದೇವಿಯ ಮೂರ್ತಿ ದರ್ಶನ ಪಡೆದರು. ಪಲ್ಲಕ್ಕಿ ಹೊತ್ತವರ ಪಾದಗಳಿಗೆ ನೀರು ನೀಡಿದರು. ದೇವಿಗೆ ಕಾಯಿಕರ್ಪೂರ, ಕುಂಕುಮ, ಭಂಡಾರ ಅರ್ಪಿಸಿದರು.

ಸಾಲಾಗಿ ನಿಂತು ದರ್ಶನ:
ದೇವಸ್ಥಾನದಲ್ಲಿ ನಸುಕಿನಿಂದಲೇ ಸಾವಿರಾರು ಭಕ್ತರು ಕೈಯಲ್ಲಿ ನೈವೇದ್ಯ, ಕುಂಕುಮ, ಭಂಡಾರ, ಕಾಯಿಕರ್ಪೂರದೊಂದಿಗೆ ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.

ಬಿಗಿ ಬಂದೋಬಸ್ತ್: ಯಾವುದೇ ಅಹಿತಕರ ಘಟನೆ ನಡೆಯದಂತೆ ಶಹಾಬಾದ್ ಡಿವೈಎಸ್ಪಿ ಕೆ.ಬಸವರಾಜ ಮಾರ್ಗದರ್ಶನದಲ್ಲಿ ಸಿಪಿಐ ಪಂಚಾಕ್ಷರಿ ಸಾಲಿಮಠ, ಪಿಎಸ್ಐ ನಟರಾಜ್ ಲಾಡೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು.

ಎಲ್ಲಿ ನೋಡಿದರೂ ಜನಜಂಗುಳಿ

ಚಿತ್ತಾಪುರ: ಜಾತ್ರೆಯ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗ ಹಾಗೂ ‌ಹೊರ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರುನಾಗಾವಿಗೆ ಆಗಮಿಸಿದ್ದರು.

ದೂರದ ಊರು, ಪಟ್ಟಣಗಳಿಂದ ಶನಿವಾರವೇ ಆಗಮಿಸಿದ ಭಕ್ತರು ದೇವಸ್ಥಾನದ ಪರಿಸರದಲ್ಲಿ ತಂಗಿಕೊಂಡಿದ್ದರು.

60 ಕಂಬದ ದೇಗುಲದ ಆವರಣ ಭಕ್ತರಿಂದ ತುಂಬಿತ್ತು. ನೂತನ ಯಾತ್ರಿ ನಿವಾಸ ಕಟ್ಟಡ, ಬಸ್ ನಿಲ್ದಾಣ ಕಟ್ಟಡ, ಅರ್ಧಕ್ಕೆ ನಿಂತ ಕಲ್ಯಾಣ ಮಂಟಪದ ಖುಲ್ಲಾ ಸ್ಥಳ, ದ್ವಾರಬಾಗಿಲ ಗೋಪುರ ನಿರ್ಮಾಣ ಸ್ಥಳ, ನಂದಿ ಬಾವಿ, ಈಶ್ವರ ದೇವಾಲಯ, ಸಿದ್ಧೇಶ್ವರ ಮಠ, ಸಂಜೀವಿನಿ ಆಂಜನೇಯ ಮಂದಿರ ಪರಿಸರ, ಹೊಲಗದ್ದೆಗಳಲ್ಲಿ, ಗಿಡಮರಗಳ ಆಸರೆಯಲ್ಲಿ ಭಕ್ತರು ತಂಗಿದ್ದರು.

ಅನ್ನ ದಾಸೋಹ ಮಾಡಿದ ಭಕ್ತರು

ಚಿತ್ತಾಪುರ: ಪಲ್ಲಕ್ಕಿ ಮೆರವಣಿಗೆ ಸಾಗಿದ ಚಿತಾವಲಿ ಚೌಕ್, ಕಪಡಾ ಬಜಾರ, ನಾಗಾವಿ ಚೌಕ್, ಒಂಟಿ ಕಮಾನ್, ದಿಗ್ಗಾಂವ್ ಕ್ರಾಸ್‌ದಿಂದ ದೇವಸ್ಥಾನದವರೆಗೆ ಅನ್ನದಾಸೋಹದ ಸಾಲು ಸಾಲು ಟೆಂಟ್‌ಗಳು ಕಂಡು ಬಂದವು. ಜನರು ಸಜ್ಜಕ, ಶಿರಾ, ಪಲಾವ್, ಅನ್ನ, ಶುದ್ಧ ಕುಡಿಯುವ ನೀರಿನ ದಾಸೋಹ ವ್ಯವಸ್ಥೆ ಮಾಡಿದ್ದರು.

ಸಾವಿರಾರು ಭಕ್ತರು ದಾಸೋಹ ಸೇವೆಯ ಸೌಲಭ್ಯ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.