ADVERTISEMENT

ಯೋಗಾಸನ ಸ್ಪರ್ಧೆ; ಉತ್ತಮ ಸಾಧನೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 12:54 IST
Last Updated 17 ಜನವರಿ 2019, 12:54 IST
ಅಂತರರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಕಲಬುರ್ಗಿಯ ಭೂಮಿ ಯೋಗ ಫೌಂಡೇಷನ್‌ನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ
ಅಂತರರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಕಲಬುರ್ಗಿಯ ಭೂಮಿ ಯೋಗ ಫೌಂಡೇಷನ್‌ನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ   

ಕಲಬುರ್ಗಿ: ಮೈಸೂರಿನ ಬ್ರಹ್ಮಶ್ರೀ ನಾರಾಯಣಗುರು ಯೋಗ ಮಂದಿರ ಹಾಗೂ ಮೈಸೂರು ಯೋಗ ಒಕ್ಕೂಟದ ವತಿಯಿಂದ ಮೈಸೂರಿನಲ್ಲಿ ಈಚೆಗೆ ಜರುಗಿದ ಅಂತರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ನಗರದ ಭೂಮಿ ಯೋಗ ಫೌಂಡೇಶನ್ ಟ್ರಸ್ಟ್‌ನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಈ ಸ್ಪರ್ಧೆಯಲ್ಲಿ ಭಾರತ ಸೇರಿದಂತೆ ಚೀನಾ, ಶ್ರೀಲಂಕಾ, ನೇಪಾಳ ಹಾಗೂ ಇತರ ರಾಷ್ಟ್ರಗಳ 600ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು.

ವಿಜೇತರ ವಿವರ: ನಾಗರಾಜ ಆರ್.ಸಾಲೋಳ್ಳಿ (4ನೇ ಸ್ಥಾನ), ಅಂಬಿಕಾ ಎಸ್.ಪಾಟೀಲ (ದ್ವಿತೀಯ), ಲಲಿತಾ ಖ್ಯಾಮನವರ (5ನೇ ಸ್ಥಾನ), ನಿಖಿತಾ ಬಾಬುರಾವ (3ನೇ ಸ್ಥಾನ), ಗೀತಾ ಗುತ್ತೇದಾರ (5ನೇ ಸ್ಥಾನ), ಶಂಕ್ರಮ್ಮ ಕಲಶೆಟ್ಟಿ (6ನೇ ಸ್ಥಾನ), ಸುಧಾಶ್ರೀ ಬಿ.ಬೆಳವಾರ (7ನೇ ಸ್ಥಾನ), ದೀಪಿಕಾ ಬಿ.ಮಂದೋಲಿಕರ್, ಶ್ರೇಯಸ್ ಎಲ್.ಪಾಟೀಲ (ಸಮಾಧಾನಕರ ಬಹುಮಾನ).

ADVERTISEMENT

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತಾಧಿಕಾರಿ ವಿಶಾಲಾಕ್ಷಿ ಘಂಟಿ, ಶ್ರೀಕಾಂತ ಸಿಂಪಿ, ಸಂದೀಪ ಬಿ., ಡಾ. ಶಿವಶರಣಪ್ಪ ನೀಲೂರ, ಮಲ್ಲಿಕಾರ್ಜುನ ಬುಳ್ಳಾ, ರಾಜಕುಮಾರ ಠಾಕೂರ, ಸಿದ್ದರಾಮ ಪಾಟೀಲ, ಸತೀಶ್ ಕಸಕಸಿ, ಗಣೇಶ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.