ADVERTISEMENT

ಅಂಗನವಾಡಿ ಕೇಂದ್ರದಲ್ಲಿ ಸಿಡಿದ ಕುಕ್ಕರ್‌

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 7:13 IST
Last Updated 25 ಅಕ್ಟೋಬರ್ 2017, 7:13 IST
ಸೋಮವಾರಪೇಟೆ ಸಮೀಪದ ಹಿರಿಕರ ಗ್ರಾಮದಲ್ಲಿ ಅಂಗನವಾಡಿಯಲ್ಲಿ ಮಂಗಳವಾರ ಅಡುಗೆ ಮಾಡುವ ಸಂದರ್ಭ ಕುಕ್ಕರ್ ಸಿಡಿದ ಪರಿಣಾಮ ಹೊತ್ತಿದ ಬೆಂಕಿಯನ್ನು ನಂದಿಸಲಾಯಿತು
ಸೋಮವಾರಪೇಟೆ ಸಮೀಪದ ಹಿರಿಕರ ಗ್ರಾಮದಲ್ಲಿ ಅಂಗನವಾಡಿಯಲ್ಲಿ ಮಂಗಳವಾರ ಅಡುಗೆ ಮಾಡುವ ಸಂದರ್ಭ ಕುಕ್ಕರ್ ಸಿಡಿದ ಪರಿಣಾಮ ಹೊತ್ತಿದ ಬೆಂಕಿಯನ್ನು ನಂದಿಸಲಾಯಿತು   

ಸೋಮವಾರಪೇಟೆ: ಅಂಗನವಾಡಿಯಲ್ಲಿ ಮಕ್ಕಳಿಗೆ ಅಡುಗೆ ತಯಾರಿಸುತ್ತಿದ್ದ ಸಂದರ್ಭದಲ್ಲಿ ಕುಕ್ಕರ್ ಸಿಡಿದು ಅಡುಗೆ ಅನಿಲದ ಸಿಲಿಂಡರ್‌ ಉರಿದ ಘಟನೆ ನಡೆದಿದೆ. ವ್ಯಕ್ತಿಯೊಬ್ಬರು ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದೆ.

ಮಂಗಳವಾರ ಬೆಳಿಗ್ಗೆ 11ರ ಸುಮಾರಿಗೆ ಅಂಗನವಾಡಿ ಸಹಾಯಕಿ ಗ್ಯಾಸ್ ಸ್ಟೌ ಮೇಲೆ ಕುಕ್ಕರ್ ಇಟ್ಟು ಆಡುಗೆ ತಯಾರಿಸುತ್ತಿದ್ದ ಸಂದರ್ಭ ಇದ್ದಕ್ಕಿದ್ದಂತೆ ಕುಕ್ಕರ್ ಸಿಡಿದಿದೆ. ಭಯಗೊಂಡ ಸಹಾಯಕಿ ಅಡುಗೆ ಕೋಣೆ ಬಾಗಿಲು ಭದ್ರಪಡಿಸಿ ಹೊರಗೆ ಓಡಿದ್ದಾರೆ. ಇದೇ ಸದಂರ್ಭ ರಸ್ತೆಯಲ್ಲಿ ಸಂಚರಿಸುತ್ತಿದ್ದ ಹಿರಿಕರ ರವಿಯವರನ್ನು ಸಹಾಯಕಿ ಕೂಗಿ ಕರೆದಿದ್ದಾರೆ.

ಅಂಗನವಾಡಿ ಮಕ್ಕಳನ್ನು ಪಕ್ಕದಲ್ಲಿದ್ದ ಪ್ರಾಥಮಿಕ ಶಾಲೆ ಕಳುಹಿಸಿ, ಶಾಲೆಯ ಬಿಸಿಯೂಟ ಕೊಠಡಿಯಲ್ಲಿದ್ದ ಬೆಂಕಿನಂದಕವನ್ನು ಬಳಸಿ ಅಂಗನವಾಡಿಯ ಅಡುಗೆ ಕೊಠಡಿಯಲ್ಲಿ ಹರಡುವ ಸ್ಥಿತಿಯಲ್ಲಿದ್ದ ಬೆಂಕಿಗೆ ಸಿಂಪಡಿಸಿ ನಂದಿಸಿದ್ದಾರೆ. ಸ್ಥಳೀಯರಾದ ದರ್ಶನ್ ರಾಜಪ್ಪ ಹಾಗೂ ಕೀರ್ತಿ ಮುತ್ತಣ್ಣ ಅವರು ಸಹಕಾರ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.