ADVERTISEMENT

ಅಂಬೇಡ್ಕರ್ ಆದರ್ಶ ಯುವ ಪೀಳಿಗೆಗೆ ದಾರಿ ದೀಪ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 7:35 IST
Last Updated 16 ಏಪ್ರಿಲ್ 2012, 7:35 IST

ಗೋಣಿಕೊಪ್ಪಲು: ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ಶ್ರಮಿಸಿದರು. ಇವರ ಹೋರಾಟ ಮತ್ತು ಆದರ್ಶ ಯುವ ಪೀಳಿಗೆಗೆ ದಾರಿದೀಪವಾಗಲಿ ಎಂದು ಧನುಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ  ಮುಖ್ಯ ಶಿಕ್ಷಕ  ತಿರುನೆಲ್ಲಿಮಾಡ ಜೀವನ್ ಹೇಳಿದರು.

 ಮಾಯಮುಡಿ ಸಮೀಪದ ಧನುಗಾಲ ಸರ್ಕಾರಿ ಹಿರಿಯ  ಪ್ರಾಥಮಿಕ  ಶಾಲೆಯಲ್ಲಿ ಶನಿವಾರ ಅಂಬೇಡ್ಕರ್ ಜಯಂತಿಯಲ್ಲಿ ವರು ಮಾತನಾಡಿರು. ಶೋಷಿತರ ಮತ್ತು ಬಡವರ ಧ್ವನಿಯಾಗಿದ್ದ ಅಂಬೇಡ್ಕರ್ ರಚಿಸಿದ ಸಂವಿಧಾನ ವಿಶ್ವದಲ್ಲಿಯೇ ಮಾದರಿ ಎಂದರು. 

   ಅಂಬೇಡ್ಕರ್  ಅವರ ಬದುಕಿನ ಚರಿತ್ರೆಯನ್ನು ಓದಿ ಅರ್ಥೈಸಿಕೊಂಡು ಅವರಂತೆ ಬದುಕಲು ಮುಂದಾಗಬೇಕು ಎಂದು ಕರೆ  ನೀಡಿದರು.

  ಹಿರಿಯ ಶಿಕ್ಷಕಿ ಶ್ರೀಜಾ ಮಾತನಾಡಿ ಮಹಿಳೆಯರಿಗೆ ಮೀಸಲಾತಿ ದೊರಕಿಸಿಕೊಡಲು ಮೊದಲು ಧ್ವನಿ ಎತ್ತಿದವರು ಅಂಬೇಡ್ಕರ್ ಎಂದರು. 

ಗ್ರಾಮದ ಹಿರಿಯ ಮುಖಂಡ ಸುಬ್ಬಮ್ಮಯ್ಯ ಅತಿಥಿಯಾಗಿದ್ದರು. ವಿದ್ಯಾರ್ಥಿಗಳಾದ ಅರ್ಚನಾ, ಚೈತ್ರ, ದೀಕ್ಷಿತ್, ರವಿನಂದನ್, ಕೆ.ಆರ್.ನಂದಾ, ಧನಲಕ್ಷ್ಮಿ, ಶಾಲಿನಿ, ಕಾರ್ತಿಕ್ ಮಾತನಾಡಿದರು. ಶಿಕ್ಷಕಿ ಕೆ.ಆರ್.ಗ್ರೇಸಿ ನಿರ್ವಹಿಸಿದರು. ಬಳಿಕ ಪ್ರಸಕ್ತ ಸಾಲಿನ ಫಲಿತಾಂಶ ಪ್ರಕಟಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.