ADVERTISEMENT

ಕಾವೇರಿ ತಾಲ್ಲೂಕು ನಮ್ಮ ಹಕ್ಕು’

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 7:24 IST
Last Updated 27 ಅಕ್ಟೋಬರ್ 2017, 7:24 IST

ಕುಶಾಲನಗರ: ಕಾವೇರಿ ತಾಲ್ಲೂಕು ರಚನೆಗೆ ಒತ್ತಾಯಿಸಿ ಇಲ್ಲಿನ ಕಾರುನಿಲ್ದಾಣದಲ್ಲಿರುವ ಗುಂಡೂರಾವ್ ವೇದಿಕೆಯಲ್ಲಿ ನಡೆಯುತ್ತಿರುವ ಸರಣಿ ಪ್ರತಿಭಟನೆ ಗುರುವಾರ 12ನೇ ದಿನ ಪೂರೈಸಿದೆ. ಹೋಟೆಲ್, ರೆಸಾರ್ಟ್ ಹಾಗೂ ಉಪಹಾರ ಗೃಹಗಳ ಸಂಘ ಮತ್ತು ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಪದಾಧಿಕಾರಿಗಳು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಹೊಟೇಲ್, ರೆಸಾರ್ಟ್ ಹಾಗೂ ಉಪಹಾರ ಗೃಹಗಳ ಸಂಘದ ಜಿಲ್ಲಾಧ್ಯಕ್ಷ ಬಿ.ಆರ್. ನಾಗೇಂದ್ರ ಪ್ರಸಾದ್, ‘ಕಾವೇರಿ ತಾಲ್ಲೂಕು ಬೇಕು ಎನ್ನುವುದು 2 ದಶಕಗಳ ಹಿಂದಿನ ಬೇಡಿಕೆಯಾಗಿದೆ. ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್, ಕಾವೇರಿ ತಾಲ್ಲೂಕಿನ ಕನಸು ಕಂಡಿದ್ದರು. ಈತನಕದ ಯಾವ ಸರ್ಕಾರಗಳು ಕಾವೇರಿ ತಾಲ್ಲೂಕು ರಚಿಸುವಲ್ಲಿ ಆಸಕ್ತಿ ತೋರಿಸಿಲ್ಲ. ಈ ಹಿನ್ನೆಲೆಯಲ್ಲಿ ಮಾಡು ಇಲ್ಲವೆ ಮಡಿ ಎನ್ನುವಂತೆ ಅಂತಿಮ ಹೋರಾಟಕ್ಕೆ ನಾವು ಬೆಂಬಲ ಸೂಚಿಸಿದ್ದು, ಕಾವೇರಿ ತಾಲ್ಲೂಕು ನಮ್ಮ ಹಕ್ಕಾಗಿದೆ’ ಎಂದು ಹೇಳಿದರು.

ದಿನಪೂರ್ತಿ ನಡೆದ ಪ್ರತಿಭಟನೆ ನಂತರ ಮೈಸೂರು- ಮಡಿಕೇರಿ ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿ ರಸ್ತೆ ತಡೆ ನಡೆಸಲಾಯಿತು. ಹೋಟೆಲ್, ರೆಸಾರ್ಟ್ ಹಾಗೂ ಉಪಹಾರ ಗೃಹಗಳ ಸಂಘದ ಪದಾಧಿಕಾರಿಗಳಾದ ಕೆ.ಎಸ್. ರಾಜಶೇಖರ್, ಅತಿಥಿ ಭಾಸ್ಕರ್, ಎಸ್.ಕೆ.ಸತೀಶ್, ಡಿ.ಕೆ.ತಿಮ್ಮಪ್ಪ, ದಿನೇಶ್, ಎಂ.ವಿ.ನಾರಾಯಣ, ಬಷೀರ್, ಬಾಲು, ಸಬೀರ್, ಇಬ್ರಾಹಿಂ, ಉಸ್ಮಾನ್, ರಜಾಕ್, ಹೋರಾಟ ಸಮಿತಿ ಪ್ರಮುಖರಾದ ಜಿ.ಎಲ್. ನಾಗರಾಜ್, ಎಂ.ಎಚ್. ಫಜಲುಲ್ಲಾ, ಎಸ್.ಎನ್. ನರಸಿಂಹಮೂರ್ತಿ, ಅಬ್ದುಲ್ ಖಾದರ್, ಕೆ.ಎಸ್. ನಾಗೇಶ್. ಕೆ.ಎನ್. ದೇವರಾಜ್, ಕೆ.ಬಿ.ರಾಜು, ಸಲೀನ ಪೇದ್ರು, ಜಯ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.