ADVERTISEMENT

ಗೋಪಾಲಪುರ: ಸಂಭ್ರಮದ ಬನದ ಹುಣ್ಣಿಮೆ ಪೂಜೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 8:50 IST
Last Updated 11 ಜನವರಿ 2012, 8:50 IST
ಗೋಪಾಲಪುರ: ಸಂಭ್ರಮದ ಬನದ ಹುಣ್ಣಿಮೆ ಪೂಜೆ
ಗೋಪಾಲಪುರ: ಸಂಭ್ರಮದ ಬನದ ಹುಣ್ಣಿಮೆ ಪೂಜೆ   

ಶನಿವಾರಸಂತೆ: ಸಮೀಪದ ಗೋಪಾಲಪುರ ಗ್ರಾಮದ ಶ್ರೀಬನಶಂಕರಿ ದೇವಾಲಯದಲ್ಲಿ ಸೋಮವಾರ ಬನದ ಹುಣ್ಣಿಮೆ ಪೂಜಾಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು. ಗ್ರಾಮಸ್ಥರು ಸಂಭ್ರಮದಿಂದ ಪಾಲ್ಗೊಂಡಿದ್ದರು.

ಮುಂಜಾನೆಯಿಂದಲೇ ಮಹಾಗಣಪತಿ ಪೂಜೆ, ಅಮ್ಮನವರಿಗೆ ಫಲ ಪಂಚಾಮೃತ ಅಭಿಷೇಕ, ದುರ್ಗಾಸೂಕ್ತ ಶ್ರೀ ಸೂಕ್ತ ಮುಖೇನ ಶುದ್ಧೋದಕ ಅಭಿಷೇಕ ಪೂಜೆ ನಡೆಯಿತು. ಬಳಿಕ ಗಣಪತಿ, ನವಗ್ರಹ, ಮೃತ್ಯುಂಜಯ ಹಾಗೂ ದುರ್ಗಹೋಮ ನಡೆದವು. ಮಧ್ಯಾಹ್ನ ಪೂರ್ಣಾಹುತಿ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಮಾಡಲಾಯಿತು.

  ಪೂಜಾ ವಿಧಿಗಳನ್ನು ದೇವಾಲಯದ ಅರ್ಚಕ ಎನ್.ಕೆ.ನಾಗೇಶ್, ಬಾಗೇರಿ ಶ್ರೀರಾಮೇಶ್ವರ ಪ್ರಸನ್ನ ದೇವಾಲಯದ ಅರ್ಚಕ ಶಂಕರನಾರಾಯಣಭಟ್ಟರು ಹಾಗೂ ಕೆಂಚಮ್ಮನ ಹೊಸಕೋಟೆ ಕೆಂಚಾಂಬ ದೇವಾಲಯದ ಅರ್ಚಕರಾದ ರಾಮಸ್ವಾಮಿ ಮತ್ತು ರಾಜಶೇಖರ್ ನೆರವೇರಿಸಿದರು. ದೇವಾಲಯ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.