ADVERTISEMENT

ಜಿಲ್ಲಾ ಪೊಲೀಸ್ ಕ್ರೀಡಾಕೂಟ: ಗಿರೀಶ್ ಚಾಂಪಿಯನ್

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 6:15 IST
Last Updated 24 ಡಿಸೆಂಬರ್ 2012, 6:15 IST

ಮಡಿಕೇರಿ: ಒತ್ತಡದಲ್ಲಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿಗೆ ಕ್ರೀಡಾಕೂಟ ಚೌತನ್ಯ ನೀಡುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ. ಎನ್.ವಿ. ಪ್ರಸಾದ್ ಸಲಹೆ ಮಾಡಿದರು.

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ನಡೆದ ಕೊಡಗು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕ್ರೀಡೆಯಿಂದ ಆರೋಗ್ಯ ಹಾಗೂ ಆನಂದ ಎರಡೂ ದೊರೆಯುತ್ತದೆ. ಪೊಲೀಸರಿಗೆ ಉತ್ತೇಜನಕ್ಕಾಗಿಯೇ ಕ್ರೀಡಾಕೂಟ ಇದೆ ಎಂದರು.
ನಿವೃತ್ತ ಕರ್ನಲ್ ಅಪ್ಪಯ್ಯ,  ಜಿಲ್ಲಾ ಎಸ್ಪಿ ಮಂಜುನಾಥ್ ಅಣ್ಣಿಗೇರಿ, ಇಲಾಖೆಯ ಅಂಥೋನಿ ಡಿಸೋಜ ವೇದಿಕೆಯಲ್ಲಿದ್ದರು.

ಫಲಿತಾಂಶ: ಪುರುಷರು
ಓಟ: 100 ಮೀಟರ್: ಎಂ.ಎ. ಗಿರೀಶ್ (ಪ್ರಥಮ), ರಾಜೇಶ್, (ದ್ವಿತೀಯ), ಮಂಜುನಾಥ್ (ತೃ).
200 ಮೀಟರ್: ಸಿದ್ದರಾಜು (ಪ್ರಥಮ),  ಗಿರೀಶ್, (ದ್ವಿತೀಯ), ಮಂಜುನಾಥ್ (ತೃತೀಯ).
400 ಮೀ: ಗಿರೀಶ್ (ಪ್ರಥಮ), ಸಿದ್ದರಾಜು (ದ್ವಿ), ಮಂಜುನಾಥ್ (ತೃತೀಯ).
800 ಮೀಟರ್: ಎಂ.ಎ. ಗಿರೀಶ್ (ಪ್ರಥಮ), ಸಿದ್ದರಾಜು, (ದ್ವಿತೀಯ), ಚೆನ್ನಿಗಪ್ಪ (ತೃತೀಯ).
ಉದ್ದ ಜೀಗಿತ: ಮುನೀರ್ (ಪ್ರಥಮ),  ಮಂಜುನಾಥ್ (ದ್ವಿ), ತೀರ್ಥಾನಂದ (ತೃತೀಯ).
ಎತ್ತರ ಜಿಗಿತ: ಶರತ್ (ಪ್ರಥಮ), ಪುರುಷೋತ್ತಮ್ (ದ್ವಿತೀಯ), ಪ್ರವೀಣ್ (ತೃತೀಯ).
ಗುಂಡು ಎಸೆತ: ಪ್ರಕಾಶ್ (ಪ್ರಥಮ), ಕೃಷ್ಣ (ದ್ವಿತೀಯ), ಪುರುಷೋತ್ತಮ್ (ತೃತೀಯ).
ತಟ್ಟೆ ಎಸೆತ: ಮಹೇಶ್ (ಪ್ರಥಮ), ಪ್ರಕಾಶ್ (ದ್ವಿತೀಯ), ಯೋಗೇಶ್ (ತೃತೀಯ).

ಮಹಿಳೆಯರ ವಿಭಾಗ
100 ಮೀ.ಓಟ: ಭವ್ಯ (ಪ್ರಥಮ), ಯಶೋಧ (ದ್ವಿತೀಯ), ನಿಶಾ (ತೃತೀಯ).
200 ಮೀಟರ್: ಎಸ್.ಡಿ. ಆಶಾ (ಪ್ರಥಮ), ಭವ್ಯ (ದ್ವಿತೀಯ), ಪಿ.ಎಸ್. ನಿಶಾ (ತೃತೀಯ).
ಎತ್ತರ ಜೀಗಿತ: ಆಶಾ ಸುರೇಶ್ (ಪ್ರಥಮ), ಯಶೋಧ (ದ್ವಿತೀಯ), ಪಿ.ಬಿ. ನಿಶಾ (ತೃತೀಯ).
ಗುಂಟು ಎಸೆತ: ಭವ್ಯ (ಪ್ರಥಮ), ವೀಣಾ (ದ್ವಿ).

ಪಿಎಸ್‌ಐ/ಸಿಪಿಐಎಸ್ ವಿಭಾಗ
100 ಮೀಟರ್ ಓಟ: ಅಯ್ಯಣ ಗೌಡ (ಪ್ರಥಮ), ರವಿಕಿರಣ್ (ದ್ವಿತೀಯ), ಸುರೇಶ್ ಬೋಪಣ್ಣ (ತೃತೀಯ).
ಎತ್ತರ ಜೀಗಿತ: ಅಯ್ಯಣ ಗೌಡ (ಪ್ರಥಮ), ರವಿಕಿರಣ್ (ದ್ವಿತೀಯ), ಸುಬ್ರಮಣ್ಯ (ತೃತೀಯ).
ಗುಂಡು ಎಸೆತ: ಪಿ.ಪಿ. ಸಂತೋಷ್‌ಕುಮಾರ್ (ಪ್ರಥಮ), ಅಯ್ಯಣ ಗೌಡ (ದ್ವಿತೀಯ), ರವಿಕಿರಣ್ (ತೃತೀಯ).
ಕಬ್ಬಡ್ಡಿ: ವಿರಾಜಪೇಟೆ ತಂಡ ( ಪ್ರಥಮ), ಮಡಿಕೇರಿ (ದ್ವಿತೀಯ).
ಹಗ್ಗ ಜಗ್ಗಾಟ: ಮಡಿಕೇರಿ (ಪ್ರಥಮ), ವಿರಾಜಪೇಟೆ (ದ್ವಿತೀಯ).
ವಾಲಿಬಾಲ್: ಸೋಮವಾರಪೇಟೆ (ಪ್ರಥಮ), ವಿರಾಜಪೇಟೆ (ದ್ವಿತೀಯ).
ಶೂಟಿಂಗ್: ದುಗ್ಗಪ್ಪ (ಪ್ರಥಮ), ಮಂಜುನಾಥ್ ಅಣ್ಣಿಗೇರಿ (ದ್ವಿತೀಯ), ರಾಜೀವ್ ಮಾಂಗ್ (ತೃತೀಯ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.