ADVERTISEMENT

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2012, 5:20 IST
Last Updated 2 ನವೆಂಬರ್ 2012, 5:20 IST

ಮಡಿಕೇರಿ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಲವು ಜನ ಸಾಧಕರಿಗೆ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಅಪ್ಪಚ್ಚು ರಂಜನ್ ಅವರು ಇಲ್ಲಿನ  ಕೋಟೆ ಆವರಣದಲ್ಲಿ ಗುರುವಾರ ನಡೆದ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ವಿತರಿಸಿದರು.

ಪ್ರಶಸ್ತಿ ಪುರಸ್ಕೃತರ ವಿವರ:
ಕಲೆ ಮತ್ತು ಸಂಸ್ಕೃತಿ ಕ್ಷೇತ್ರ-ಬಿ.ಎಸ್.ಲೋಕೇಶ್ ಸಾಗರ್, ಕುಶಾಲನಗರ (ಸುಗಮ ಸಂಗೀತ),ಬಿ.ಎನ್.ಮೋಹನ್ ಪಾಳೇಗಾರ್, ಸೋಮವಾರಪೇಟೆ (ಜಾನಪದ ಗೀತೆ), ವಿದೂಷಿ ರೂಪಾ ಶ್ರಿಕೃಷ್ಣ ಉಪಾಧ್ಯಾ,ಮಡಿಕೇರಿ  (ಭರತ ನಾಟ್ಯ), ಅಡ್ಡಂಡ ಅನಿತಾ ಕಾರ್ಯಪ್ಪ, ಪೊನ್ನಂಪೇಟೆ        (ನಾಟಕ ಮತ್ತು ಚಲನಚಿತ್ರ), ಬಿ.ಅರ್.ಸತೀಶ್, ವಿರಾಜಪೇಟೆ (ಚಿತ್ರಕಲೆ).
ಪತ್ರಿಕೋದ್ಯಮ ಕ್ಷೇತ್ರ: ಸಿ.ಎನ್. ಬೋಪಯ್ಯ, ನಾಪೋಕ್ಲು, ಕಾಯಪಂಡ ಶಶಿಸೋಮಯ್ಯ, ವಿರಾಜಪೇಟೆ, ನಂದಗುಜರ್, ಮಡಿಕೇರಿ, ಉಮೇಶ್, ಮಡಿಕೇರಿ.
ಕ್ರೀಡೆ ಮತ್ತು ಸಾಹಿತ್ಯ: ಪಿ.ಎಂ.ಅಪ್ಪಯ್ಯ, ಅಂತರರಾಷ್ಟ್ರೀಯ ಕ್ರೀಡಾಪಟು, ಪೊನ್ನಂಪೇಟೆ (ಕ್ರೀಡೆ), ಕೆ.ಐನೆ. ಅಸ್ಮಖಾನಂ, ಕುಶಾಲನಗರ (ಕ್ರೀಡೆ), ಡಾ. ಕೋರನ ಸರಸ್ವತಿ ಪ್ರಕಾಶ್ (ಸಾಹಿತ್ಯ), ಪರದಂಡ ಚಂಗಪ್ಪ (ಸಾಹಿತ್ಯ).
ಶಿಕ್ಷಣ ಕ್ಷೇತ್ರ: ಜೀವನ್.ಟಿ.ಬಿ., ವಿರಾಜಪೇಟೆ, ಪಿ.ಮಹಾದೇವಸ್ವಾಮಿ, ಮೂರ್ನಾಡು.
ಸಮಾಜ ಸೇವೆ: ಕೂಡಕಂಡಿ ಕಾವೇರಮ್ಮ ಸೋಮಣ್ಣ, ಮಡಿಕೇರಿ, ಮಣವಟ್ಟಿರ ಕಾವೇರಿಯಮ್ಮ ಪೂವಣ್ಣ, ಮಡಿಕೇರಿ, ಪ್ರಕಾಶ್.ಬಿ.ಎನ್., ಗೋಣಿಕೊಪ್ಪಲು, ಎನ್.ಎಸ್.ಕಂದಾದೇವಯ್ಯ, ಅರುವತ್ತೋಕ್ಲು, ಪಿ.ಎಂ.ರವಿ, ಮಡಿಕೇರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.