ADVERTISEMENT

ತೀವ್ರಗೊಂಡ ತಾಲ್ಲೂಕು ರಚನೆ ಹೋರಾಟ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 7:01 IST
Last Updated 30 ಅಕ್ಟೋಬರ್ 2017, 7:01 IST

ಕುಶಾಲನಗರ : ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ಇಲ್ಲಿನ ಕಾರು ನಿಲ್ದಾಣದಲ್ಲಿರುವ ಶ್ರೀ ಗುಂಡೂರಾವ್ ಸತ್ಯಾಗ್ರಹ ವೇದಿಕೆಯಲ್ಲಿ ನಡೆಯುತ್ತಿರುವ ಧರಣಿ ಭಾನುವಾರಕ್ಕೆ 15 ದಿನ ಪೂರೈಸಿತು. ವರ್ಕ್‌ಶಾಪ್‌ ಮಾಲೀಕರು ಮತ್ತು ನೌಕರರ ಸಂಘ, ಕಾವೇರಿ ಲಾರಿ ಮಾಲಿಕರ ಸಂಘ ಹಾಗೂ ಮಿನಿಲಾರಿ ಮಾಲಿಕರು ಮತ್ತು ಚಾಲಕರ ಸಂಘದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಮಿನಿಲಾರಿ ಮಾಲಿಕರ ಸಂಘದ ಅಧ್ಯಕ್ಷ ಸುರೇಶ್ ದೊಡ್ಡಣ್ಣ, ಕಾವೇರಿ ತಾಲ್ಲೂಕು ರಚನೆಗೆ ಗ್ರಾಮಾಂತರ ಪ್ರದೇಶಗಳಲ್ಲೂ ಭಾರಿ ಬೆಂಬಲ ವ್ಯಕ್ತವಾಗುತ್ತಿರುವುದು ಸ್ವಾಗತಾರ್ಹ. ಸೋಮವಾರ ರ‍್ಯಾಲಿಗೂ ಇದೇ ಮಾರಿಯಲ್ಲಿ ಜನಬೆಂಬಲ ಸಿಗುವ ನಿರೀಕ್ಷೆ ಇದ್ದು, ನಮ್ಮ ಸಂಘದ ಸದಸ್ಯರು ಸಕ್ರಿಯವಾಗಿ ಭಾಗವಹಿಸುತ್ತಾರೆ ಎಂದರು.

ವರ್ಕ್‌ಶಾಪ್‌ ಮಾಲಿಕರು ಮತ್ತು ನೌಕರರ ಸಂಘದ ಪದಾಧಿಕಾರಿಗಳಾದ ಪೂವಯ್ಯ, ಸಂಜು, ಶಿವು, ರಂಜಿತ್, ವಿ.ಪಿ. ನಾಗೇಶ್, ಸಿ.ಎ. ಮದನ, ಕಾವೇರಿ ಲಾರಿ ಮಾಲೀಕರ ಸಂಘದ ಡಿ.ಕೆ. ಗಣೇಶ್, ಚಂದ್ರಶೇಖರ್, ದಿನೇಶ್, ಸಿದ್ದರಾಜು, ಮಿನಿಲಾರಿ ಮಾಲಿಕರ ಸಂಘದ ರಾಜಣ್ಣ, ಶಂಶುದ್ದೀನ್, ಹೋರಾಟ ಸಮಿತಿಯ ಜಿ.ಎಲ್. ನಾಗರಾಜ್, ಎಂ.ಹೆಚ್. ಫಜಲುಲ್ಲಾ, ಪಿ.ಕೆ. ಜಗದೀಶ್ ಮತ್ತಿತರರಿದ್ದರು.

ADVERTISEMENT

ಪಂಜಿನ ಮೆರವಣಿಗೆ: ತಾಲ್ಲೂಕು ರಚನೆ ಹೋರಾಟದ ಭಾಗವಾಗಿ ಶನಿವಾರ ರಾತ್ರಿ ಆಟೊ ಚಾಲಕರು ಮತ್ತು ಮಾಲೀಕರ ಸಂಘದಿಂದ ಪಂಜಿನ ಮೆರವಣಿಗೆ ನಡೆಸಲಾಯಿತು.
ಕೊಪ್ಪ ಗೇಟ್ ಬಳಿಯ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿದ ನಂತರ ಹೋರಾಟ ಕೇಂದ್ರ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಮೆರವಣಿಗೆಗೆ ಚಾಲನೆ ನೀಡಿದರು.

ಮೈಸೂರು- ಮಡಿಕೇರಿ ಹೆದ್ದಾರಿಯಲ್ಲಿ ಸಾಗಿದ ಪಂಜಿನ ಮೆರವಣಿಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಮೂಲಕ ಐಬಿ ವೃತ್ತದ ತನಕ ಸಾಗಿ ಮತ್ತೆ ಶ್ರೀ ಗಣಪತಿ ದೇವಾಲಯದ ಬಳಿ ಜಮಾಯಿಸಿತು.

ಈ ವೇಳೆ ಮಾತನಾಡಿದ ಶಶಿಧರ್, ಕಾವೇರಿ ತಾಲ್ಲೂಕು ಬೇಡಿಕೆಗೆ ಹಳ್ಳಿ ಹಳ್ಳಿಗಳಲ್ಲೂ ಬೆಂಬಲ ವ್ಯಕ್ತವಾಗುತ್ತಿದೆ. ಇದು ಮಾಡು ಇಲ್ಲವೇ ಮಡಿ ಹೋರಾಟವಾಗಿದ್ದು, ನಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಸಿಕ್ಕಿರುವ ಕೊನೆಯ ಅವಕಾಶ ಎಂದರು.

ಪಂಜಿನ ಮೆರವಣಿಗೆ ಕಾರ್ಯಕ್ರಮ ಸಂಚಾಲಕ ಕೆ.ಎಸ್. ನಾಗೇಶ್, ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ, ಕುಮುದಾ ಧರ್ಮಪ್ಪ, ಕೆ.ಆರ್. ಮಂಜುಳಾ, ಹೋರಾಟ ಸಮಿತಿ ಪ್ರಮುಖರಾದ ಆರ್.ಕೆ. ನಾಗೇಂದ್ರ ಬಾಬು, ಜಿ.ಎಲ್. ನಾಗರಾಜ್, ವಿ.ಪಿ. ನಾಗೇಶ್, ಮುಸ್ತು, ಚಂದನ್‌ ಕುಮಾರ್, ಎಂ. ಕೃಷ್ಣ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.