ADVERTISEMENT

ತೋಡು ಅಭಿವೃದ್ಧಿ; ನೀರು ಹರಿವು ಸರಾಗ

​ಪ್ರಜಾವಾಣಿ ವಾರ್ತೆ
Published 20 ಜೂನ್ 2011, 9:20 IST
Last Updated 20 ಜೂನ್ 2011, 9:20 IST

ಮಡಿಕೇರಿ: ಮಳೆಗಾಲವನ್ನು ಎದುರಿಸಲು ಮಡಿಕೇರಿ ನಗರಸಭೆ ಕೈಗೊಂಡ ಮುನ್ನೆಚ್ಚರಿಕೆ ಕ್ರಮ ಗಳು ಈಗ ಫಲ ನೀಡುತ್ತಿವೆ. ಧೋ ಎಂದು ಸುರಿ ಯುವ ಮಳೆ ನೀರು ನಗರದಲ್ಲಿ ಎಲ್ಲೂ ನಿಲ್ಲದಂತೆ, ನಿಂತು ಕೊಚ್ಚೆಯಾಗದಂತೆ ತಡೆಯಲು ನಗರದ ಪ್ರಮುಖ ದಾಸವಾಳ ತೋಡನ್ನು ಅಭಿವೃದ್ಧಿ ಪಡಿಸಿರುವುದು ಇದಕ್ಕೊಂದು ಉತ್ತಮ ಉದಾಹರಣೆ.

ತಿಂಗಳ ಹಿಂದೆಯೇ ನಗರಸಭೆಯು ಖಾಸಗಿ ಬಸ್ ನಿಲ್ದಾಣದಿಂದ ವಿದ್ಯಾನಗರವರೆಗಿನ ಸುಮಾರು 2.5 ಕಿ.ಮೀ.ಗಳಷ್ಟು ಉದ್ದದ ತೋಡನ್ನು ಸ್ವಚ್ಛಗೊಳಿಸಲಾಗಿತ್ತು. ನೀರು ಸರಾಗ ವಾಗಿ ಹರಿದುಹೋಗುವಂತೆ ನೀರಿನ ಮಾರ್ಗ ವನ್ನು ನಿರ್ಮಾಣ ಮಾಡಲಾಯಿತು. ಇದರ ಪರಿಣಾಮ ವಾಗಿ ಈಗ ಎಷ್ಟೇ ಪ್ರಮಾಣದಲ್ಲಿ ಮಳೆಯಾದರೂ ನೀರು ಸರಾಗವಾಗಿ ನಗರದಿಂದ ಹೊರಗೆ ಹೋಗುತ್ತದೆ.

`ಮುಂಗಾರು ಆರಂಭವಾಗುವುದಕ್ಕೆ ಮುಂಚೆಯೇ ಈ ಕಾಮಗಾರಿಯನ್ನು ಕೈಗೆತ್ತಿ ಕೊಳ್ಳಲಾಯಿತು. ಹಿಟಾಚಿ ಬಳಸಿ ಅತ್ಯಂತ ಕಡಿಮೆ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಯಿತು. ತೋಡಿನಲ್ಲಿದ್ದ ಕಸ- ಕಶ್ಮಲಗಳು, ಹಾಗೆಯೇ ಅಲ್ಲಲ್ಲಿ ಸಂಗ್ರಹವಾಗಿದ್ದ ಮಣ್ಣು ಮತ್ತಿತರ ಅಡೆತಡೆಗಳನ್ನು ತೆಗೆದುಹಾಕಿ ಸುಗಮ ಗೊಳಿಸಲಾಗಿದೆ~ ಎಂದು ನಗರಸಭೆಯ ಅಧ್ಯಕ್ಷ ಎಚ್.ಎಂ. ನಂದಕುಮಾರ್ ತಿಳಿಸಿದರು.

`ಮುಂದಿನ 2-3 ವರ್ಷಗಳವರೆಗೆ ಯಾವುದೇ ಚಿಂತೆ ಇಲ್ಲ. ಈ ಕಾಮಗಾರಿ ನಿರ್ವಹಿಸಿದ ಗುತ್ತಿಗೆ ದಾರರಿಗೆ ಶೀಘ್ರದಲ್ಲಿ ಹಣ ಸಂದಾಯ ಮಾಡ ಲಾಗುವುದು. ಹಣ ಮಂಜೂರು ಮಾಡುವಂತೆ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ~ ಎಂದರು.

ಅಲ್ಲದೆ, ಈ ತೋಡಿನ ಇನ್ನೊಂದು ಪಾರ್ಶ್ವ ದಲ್ಲಿ ಕೆಲವೆಡೆ ಕೆಲವರು ಒತ್ತುವರಿ ಮಾಡಿ ಕೊಂಡಿದ್ದು, ಇದನ್ನು ತೆರವುಗೊಳಿಸಿ ಬೇಲಿ ಅಳ ವಡಿಸಲಾಗುವುದು ಎಂದು ತಿಳಿಸಿದರು.

ಡ್ರೈನೇಜ್‌ಗೆ ಸೂಚನೆ: ನಗರದ ಕೆಲವೆಡೆ ಇತ್ತೀಚೆಗೆ ನಿರ್ಮಿಸಲಾಗಿರುವ ಡ್ರೈನೇಜ್‌ಗಳಿಗೆ ನೀರು ಸರಾಗವಾಗಿ ಹರಿದುಬರುತ್ತಿಲ್ಲ. ಡ್ರೈನೇಜ್ ಕಾಮಗಾರಿ ಸಮರ್ಪಕವಾಗಿಲ್ಲ ಎಂದು ದೂರು ಗಳು ಬಂದಿರುವ ಹಿನ್ನೆಲೆಯಲ್ಲಿ ಡ್ರೈನೇಜ್‌ಗಳ ನಿರ್ವಹಣೆಗೆ ಕ್ರಮಕೈಗೊಳ್ಳಲಾಗಿದೆ ಎಂದರು. ಡ್ರೈನೇಜ್‌ಗಳಿಗೆ ನೀರು ಸರಾಗವಾಗಿ ಬರುವಂತೆ ಮಾಡಲು ಡ್ರೈನೇಜ್‌ಗಳನ್ನು ನಿರ್ಮಿಸಿರುವ ಗುತ್ತಿಗೆದಾರರಿಗೆ ಸೂಚಿಸಿದೆ ಎಂದು  ನುಡಿದರು.

ವಾಹನ ನಿಲುಗಡೆಗೆ ಅವಕಾಶ: ನಗರದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಮುಂಭಾಗದಲ್ಲಿ ತೋಡಿನ ಒಂದು ಭಾಗದಲ್ಲಿ 40 ಲಕ್ಷ ರೂ.ಗಳ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಲಾಗುತ್ತಿದ್ದು, ಇದು ಮುಗಿದ ಕೂಡಲೇ ಇನ್ನೊಂದು ಭಾಗದಲ್ಲಿ  ಅಷ್ಟೇ ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಿ, ಸ್ಲ್ಯಾಬ್ ಅಳವಡಿಸುವ ಯೋಚನೆ ಇದೆ ಎಂದರು. ಸ್ಲ್ಯಾಬ್ ನಿರ್ಮಿಸಿದ ನಂತರ ಇದರ ಮೇಲೆ ವಾಹನಗಳ ನಿಲುಗಡೆಗೆ ಬಳಸಲಾಗುವುದು.  

ಪ್ರಮುಖ ಕಾಮ ಗಾರಿಗಳನ್ನು ನಿರ್ವಹಿಸಲು 2ಕೋಟಿ ರೂ.ಗಳ ಅವಶ್ಯಕತೆ ಇದ್ದು,  ಹಣ ಒದಗಿಸಲು ಕ್ರಮಕೈ ಗೊಳ್ಳುವಂತೆ ವಿಧಾನ ಸಭಾಧ್ಯಕ್ಷ ಬೋಪಯ್ಯ ಅವರನ್ನು ಕೋರಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.