ADVERTISEMENT

ಬಿ.ಟಿ.ಲಲಿತಾನಾಯಕ್‌ಗೆ ಚೂಡಾಮಣಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 10:35 IST
Last Updated 17 ಅಕ್ಟೋಬರ್ 2011, 10:35 IST

ಮೈಸೂರು: `ಕನ್ನಡ ನಾಡು-ನುಡಿಗೆ ಹೋರಾಟ ನಡೆಸಿದ ಮಹನೀಯರಿಗೆ ನೀಡುವ  ಕರ್ನಾಟಕ ಚೂಡಾಮಣಿ    ಪ್ರಶಸ್ತಿಗೆ ಸಾಹಿತಿ ಡಾ.ಬಿ.ಟಿ. ಲಲಿತಾನಾಯಕ್ ಆಯ್ಕೆಯಾಗಿದ್ದಾರೆ~ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ  ಕನ್ನಡ ಕ್ರಿಯಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ವ.ಚ.ಚನ್ನೇಗೌಡ ಹೇಳಿದರು.

`ಪ್ರಶಸ್ತಿಯು ಹತ್ತು ಸಾವಿರ ನಗದು ಬಹುಮಾನ, ಫಲಕ ಒಳಗೊಂಡಿದ್ದು ಅ. 23ರಂದು ನಗರದ ಜೆಎಸ್‌ಎಸ್ ಆಸ್ಪತ್ರೆಯ ಶಿವರಾತ್ರಿ ರಾಜೇಂದ್ರ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಪ್ರದಾನ ಮಾಡುವರು. 

ಕವಯತ್ರಿ ಡಾ.ಲತಾ ರಾಜಶೇಖರ್ ಅಭಿನಂದನಾ ಭಾಷಣ ಮಾಡಲಿದ್ದಾರೆ. ಕವಿ ಜರಗನಹಳ್ಳಿ ಶಿವಶಂಕರ್ ಅಧ್ಯಕ್ಷತೆ ವಹಿಸಲಿದ್ದು, ಮೈಸೂರು ನಗರ ಸಾರಿಗೆ  ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎನ್.ಶ್ರೀನಿವಾಸ್, ಕಸಾಪ ಜಿಲ್ಲಾಧ್ಯಕ್ಷ  ಮಡ್ಡೀಕೆರೆ ಗೋಪಾಲ್ ಭಾಗವಹಿಸಲಿದ್ದಾರೆ~ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಪ್ರಭುಸ್ವಾಮಿ, ಮೈಸೂರು ವಿಭಾಗ ಸಮಿತಿ ಖಜಾಂಚಿ    ಟಿ.ಆರ್.ಶ್ರೀಕಂಠ ಪ್ರಸಾದ್, ಎಂ.ಷಡಕ್ಷರಿ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.