ADVERTISEMENT

ಮಂಜಿನ ನಗರಿಗೆ ಬಂದ ಕಾಡಾನೆಗಳು

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2017, 9:15 IST
Last Updated 30 ಡಿಸೆಂಬರ್ 2017, 9:15 IST
ಮಡಿಕೇರಿ ಸುದರ್ಶನ ವೃತ್ತದ ಸಮೀಪ ತೆರಳುತ್ತಿರುವ ಆನೆಗಳು
ಮಡಿಕೇರಿ ಸುದರ್ಶನ ವೃತ್ತದ ಸಮೀಪ ತೆರಳುತ್ತಿರುವ ಆನೆಗಳು   

ಮಡಿಕೇರಿ: ಬೆಳ್ಳಂಬೆಳಿಗ್ಗೆ ಎರಡು ಕಾಡಾನೆಗಳು ಕಾಡು ಬಿಟ್ಟು ಮಂಜಿನ ನಗರಿ ಮಡಿಕೇರಿಗೆ ಪ್ರವೇಶಿಸಿದ್ದವು. ಸಿದ್ದಾಪುರದ ಕಡೆಯಿಂದ ಕಾಡಾನೆಗಳು ರಾಷ್ಟ್ರೀಯ ಹೆದ್ದಾರಿ 275ರ ಮೂಲಕ ನಗರ ಪ್ರವೇಶಿಸಿ ಕೆಲಕಾಲ ಆತಂಕ ಸೃಷ್ಟಿಸಿದವು.

ಶಾಸಕ ಕೆ.ಜಿ.ಬೋಪಯ್ಯ ಅವರ ನಿವಾಸದ ಸಮೀಪ ದಾಂದಲೆ ನಡೆಸಿ ಕಾಂಪೌಂಡ್ ಉರುಳಿಸಿದವು. ಸುದರ್ಶನ ವೃತ್ತದ ಸಮೀಪ ವಾಕಿಂಗ್‌ಗೆ ತೆರಳುತ್ತಿದ್ದವರು ಆತಂಕದಿಂದ ಮನೆಗೆ ವಾಪಸ್ ತೆರಳಿದರು.

ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಕಾಡಿಗಟ್ಟಲು ಎಷ್ಟೇ ಪ್ರಯತ್ನಿಸಿದರೂ ಅವು ಅತ್ತಕಡೆಗೆ ಮುಖ ಮಾಡಲಿಲ್ಲ. ಪಕ್ಕದಲ್ಲಿದ್ದ ಸ್ಮಶಾನ ಪ್ರವೇಶಿಸಿ ಅಲ್ಲಿ ಬೀಡುಬಿಟ್ಟವು. ಕ್ಷಿಪ್ರ ಕಾರ್ಯಾಚರಣೆ ಪಡೆಯ ಸಿಬ್ಬಂದಿ ಕೊನೆಗೂ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಯಶಸ್ವಿಯಾದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.