ADVERTISEMENT

ಮಡಿಕೇರಿ ಸುತ್ತಮುತ್ತ ಹದ ಮಳೆ

ಕೆಲವು ದಿನಗಳಿಂದ ದುರ್ಬಲಗೊಂಡು ಮತ್ತೆ ನಿರೀಕ್ಷೆ ಮೂಡಿಸಿದ ಮುಂಗಾರು

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 9:41 IST
Last Updated 13 ಜುಲೈ 2017, 9:41 IST
ಮಡಿಕೇರಿ ಸುತ್ತಮುತ್ತ ಹದ ಮಳೆ
ಮಡಿಕೇರಿ ಸುತ್ತಮುತ್ತ ಹದ ಮಳೆ   

ಮಡಿಕೇರಿ: ಕೆಲವು ದಿನಗಳಿಂದ ದುರ್ಬಲಗೊಂಡಿದ್ದ ಮುಂಗಾರು ಮಳೆ ಮತ್ತೆ ನಿರೀಕ್ಷೆ ಮೂಡಿಸಿದ್ದು ಬುಧವಾರ ಸಂಜೆ 20 ನಿಮಿಷಗಳ ಕಾಲ ಮಡಿಕೇರಿ ಸುತ್ತಮುತ್ತ ಉತ್ತಮ ಮಳೆ ಸುರಿಯಿತು. ಬೆಳಿಗ್ಗೆಯಿಂದ ಬಿಸಿಲ ವಾತಾವರಣವಿತ್ತು. ಮಧ್ಯಾಹ್ನ ಕೆಲ ಸಮಯ ತುಂತುರು ಮಳೆಯಾಗಿತ್ತು.

ಬುಧವಾರ ಬೆಳಿಗ್ಗೆ 8ಕ್ಕೆ ಕೊನೆ ಗೊಂಡಂತೆ 24 ಗಂಟೆಯ ಅವಧಿಯಲ್ಲಿ ಜಿಲ್ಲೆಯಲ್ಲಿ 6.65 ಮಿ.ಮೀ ಮಳೆ ಪ್ರಮಾಣ ದಾಖಲಾಗಿದೆ.

ಕಳೆದ ವರ್ಷ ಇದೇ ದಿನ 20.45 ಮಿ.ಮೀ ಮಳೆಯಾಗಿತ್ತು. ಜನವರಿ ಯಿಂದ ಇದುವರೆಗೂ 822.3 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 990.89 ಮಿ.ಮೀ. ಮಳೆ ಯಾಗಿತ್ತು. ಮಡಿಕೇರಿ ತಾಲ್ಲೂಕಿನಲ್ಲಿ 7.1, ವಿರಾಜಪೇಟೆ ತಾಲ್ಲೂಕಿನಲ್ಲಿ 2.18, ಸೋಮವಾರಪೇಟೆ ತಾಲ್ಲೂಕಿನಲ್ಲಿ 10.67 ಮಿ.ಮೀ ಮಳೆ ಸುರಿದಿದೆ.

ADVERTISEMENT

ಹೋಬಳಿವಾರು: ಮಡಿಕೇರಿಯ ಕಸಬಾ 8.2, ನಾಪೋಕ್ಲು 5.4, ಸಂಪಾಜೆ 8.2, ಭಾಗಮಂಡಲ 6.6, ವಿರಾಜಪೇಟೆ ಕಸಬಾ 4, ಹುದಿಕೇರಿ 3, ಅಮ್ಮತ್ತಿ 1.5, ಬಾಳೆಲೆ 4, ಸೋಮವಾರಪೇಟೆ ಕಸಬಾ 9, ಶನಿವಾರಸಂತೆ 17, ಶಾಂತಳ್ಳಿ 20, ಕೊಡ್ಲಿಪೇಟೆ 11.2, ಕುಶಾಲನಗರ 3.6, ಸುಂಟಿಕೊಪ್ಪ 3.2 ಮಿ.ಮೀ ಮಳೆಯಾಗಿದೆ.   

ಸಾಧಾರಣ ಮಳೆ
ಸುಂಟಿಕೊಪ್ಪ:
ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬುಧವಾರ ಸಾಧಾರಣ ಮಳೆ ಸುರಿಯಿತು. ಸುಮಾರು 30 ನಿಮಿಷಗಳ ಕಾಲ ಸುರಿದ ಮಳೆ ಬಳಿಕ ಬಿಡುವು ನೀಡಿತು. ಮಾದಾಪುರ, ಗರಗಂದೂರು, ಏಳನೇ ಹೊಸಕೋಟೆ, ಗುಂಡುಕುಟ್ಟಿಗಳಲ್ಲಿ ಸಾಧಾರಣ ಮಳೆಯಾಗಿದೆ.

ರೈತರಲ್ಲಿ ಹರ್ಷ
ಶನಿವಾರಸಂತೆ:
ಪಟ್ಟಣ ಹಾಗೂ ಹೋಬಳಿಯಾದ್ಯಂತ ಬುಧವಾರ ಸಂಜೆ 5ರಿಂದ ಸಾಧಾರಣ ಮಳೆ ಸುರಿಯಿತು. ನಾಲ್ಕೈದು ದಿನಗಳಿಂದ ಬಿಡುವು ನೀಡಿದ್ದ ಮಳೆ ರೈತರ ಮೊಗದಲ್ಲಿ ತುಸು ನೆಮ್ಮದಿ ಮೂಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.