ADVERTISEMENT

ಮಾರುಕಟ್ಟೆಗೆ ಕಳೆ ತಂದ ಗಣೇಶ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 6:40 IST
Last Updated 6 ಸೆಪ್ಟೆಂಬರ್ 2013, 6:40 IST

ಶನಿವಾರಸಂತೆ: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಗೌರಿ-ಗಣೇಶ ಮೂರ್ತಿಗಳ ವ್ಯಾಪಾರ ಭರದಿಂದ ಸಾಗಿದೆ.

ಪ್ರತಿ ವರ್ಷದಂತೆ ವ್ಯಾಪಾರಿ ಐ.ಕೆ. ಮಂಜುನಾಥ್ ಈ ವರ್ಷವೂ ವೈವಿಧ್ಯಮಯ ಮೂರ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ಮೂರ್ತಿಗಳನ್ನು ಸಮೀಪದ ಹೆತ್ತೂರು ಗ್ರಾಮದ ಕಲಾವಿದರಾದ ಧರ್ಮಪ್ಪ-ರೇಖಾ ಹಾಗೂ ರಾಮಶೆಟ್ಟಿ-ರಮ್ಯಾ ದಂಪತಿ ತಯಾರಿಸಿರುವುದು. 6 ತಿಂಗಳ ಮೊದಲೇ ಮೂರ್ತಿಗಳ ತಯಾರಿಕೆಯಲ್ಲಿ ತೊಡಗುವ ಅವರು ಒಂದು ಅಡಿಯಿಂದ 5 ಅಡಿಯವರೆಗೆ ಗಣೇಶ ಮೂರ್ತಿಗಳನ್ನು ತಯಾರಿಸುತ್ತಾರೆ. ರೂ.150ರಿಂದ ರೂ.5,000 ಮೌಲ್ಯದ ವಿಗ್ರಹಗಳು ಮಾರಾಟವಾಗುತ್ತವೆ.

ಶನಿವಾರಸಂತೆಯಲ್ಲಿ ಮಾತ್ರವಲ್ಲದೇ ಕೊಡ್ಲಿಪೇಟೆ, ಸಕಲೇಶಪುರ, ಹೊಳೆನರಸಿಪುರ ಹಾಗೂ ಮೂಡಿಗೆರೆ ಮೊದಲಾದ ಊರುಗಳಲ್ಲೂ ಗಣೇಶ ಮೂರ್ತಿಗಳನ್ನು ಮಾರಾಟ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.