ADVERTISEMENT

ರಸ್ತೆ ಕಾಮಗಾರಿಗೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2017, 6:15 IST
Last Updated 22 ಅಕ್ಟೋಬರ್ 2017, 6:15 IST

ಸಿದ್ದಾಪುರ: ‘ಕೊಡಗು ಜಿಲ್ಲೆಗೆ ರಾಜ್ಯ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಇದರ ಸದ್ಬಳಕೆ ಆಗಬೇಕು’ ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಶನಿವಾರ ಹೇಳಿದರು.

ಚೆಟ್ಟಳ್ಳಿ ಹಾಗೂ ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ಮುಖ್ಯಮಂತ್ರಿಗಳ ಅನುದಾನದಿಂದ ಬಿಡುಗಡೆಯಾದ ₹ 35 ಲಕ್ಷ ವೆಚ್ಚದಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಮುಖ್ಯಮಂತ್ರಿಗೆ ಜಿಲ್ಲೆಯ ಬಗ್ಗೆ ಕಾಳಜಿಯಿದೆ. ಹಲವು ಅನುದಾನ ನೀಡಿದ್ದಾರೆ. ಹಸಿವು ಮುಕ್ತ ರಾಜ್ಯವಾಗಿಸುವ ಕನಸು ನನಸಾಗಿಸಲು ನುಡಿದಂತೆ ನಡೆದಿದ್ದಾರೆ ಎಂದರು.
ಪಕ್ಷದ, ಜಿಲ್ಲೆಯ ಅಭಿವೃದ್ಧಿಗೆ ಮಹಿಳಾ ಪ್ರತಿನಿಧಿಯಾಗಿ ಜನರ ಕುಂದು ಕೊರತೆ ಬಗೆಹರಿಸಲು ಪ್ರಾಮಾಣಿಕವಾಗಿ ಯತ್ನಿಸಿದ್ದೇನೆ ಎಂದು ವೀಣಾ ಅಚ್ಚಯ್ಯ ಹೇಳಿದರು.

ADVERTISEMENT

ಚೆಟ್ಟಳ್ಳಿ ಚೇರಳ ಭಗವತಿ ದೇವಾಲಯದ ರಸ್ತೆ ಹಾಗೂ ಪುತ್ತರಿರ ಕುಟುಂಬದ ರಸ್ತೆ, ವಾಲ್ನೂರು –ತ್ಯಾಗತ್ತೂರು ಗ್ರಾಮದ ಬಸವೇಶ್ವರ ದೇವಸ್ಥಾನ ರಸ್ತೆ, ಅಭ್ಯತ್‌ ಮಂಗಲ ಗ್ರಾಮದ ರಸ್ತೆಗಳ ಕಾಮಗಾರಿಗೆ ಚಾಲನೆ ನೀಡಲಾಯಿತು.

ಬಳಿಕ ಜಿ.ಪಂ ಸದಸ್ಯೆ ಸುನಿತಾ ಮಂಜುನಾಥ್ ಅವರ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಪಕ್ಷದ ಪ್ರಮುಖರಾದ ಪಾಟ್ರಿಕ್ ಲೋಬೋ, ತೀರ್ಥಕುಮಾರ್, ಜುಬೇರ್, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ವತ್ಸಲ, ವಲಯ ಅಧ್ಯಕ್ಷ ಪುತ್ತರಿರ ಪಪ್ಪುತಿಮ್ಮಯ್ಯ, ಅಪ್ರು ರವೀಂದ್ರ ,ಭುವನೇಂದ್ರ, ಮೇರಿ ಅಂಬುದಾಸ್, ಸಿಂದೂ, ಪ್ರಭಾಕರ, ವಿನೋದ್, ಇಸ್ಮಾಯಿಲ್, ವಾಲ್ನೂರ್ ಕ್ಷೇತ್ರದ ತಾಲೂಕು ಪಂಚಾಯಿತಿ ಸದಸ್ಯೆ ಸುಹದಾ ಅಶ್ರಫ್, ತಮ್ಮಂಡ ಆನಂದ, ಕೊಂಗೇಟಿರ ಬೋಪಯ್ಯ, ವಾಲ್ನೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನಾಗರತ್ನಾ, ಬಸವೇಶ್ವರ ದೇವಾಲಯ ಮುಖ್ಯಸ್ಥರಾದ ಬಿ.ಎಂ. ರಾಮಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.