ADVERTISEMENT

ವಾಹನ ಸಂಚಾರದ ಮಾರ್ಗ ಬದಲಾವಣೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2011, 4:30 IST
Last Updated 4 ಅಕ್ಟೋಬರ್ 2011, 4:30 IST

ಮಡಿಕೇರಿ: ಗೋಣಿಕೊಪ್ಪ ಪಟ್ಟಣದಲ್ಲಿ ಅಕ್ಟೋಬರ್ 6 ರಂದು ನಡೆಯಲಿರುವ ದಸರಾ ಮಂಟಪಗಳ ಮೆರವಣಿಗೆ ಸಂದರ್ಭದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಮತ್ತು ವಾಹನ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವ ದೃಷ್ಟಿ ಯಿಂದ ಅಂದು ಸಂಜೆ 4 ಗಂಟೆಯಿಂದ ಅಕ್ಟೋಬರ್ 7 ರ ಬೆಳಿಗ್ಗೆ 8 ಗಂಟೆ ವರೆಗೆ ವಾಹನ ಸಂಚಾರದಲ್ಲಿ ತಾತ್ಕಾ ಲಿಕ ಬದಲಾವಣೆ ಮಾಡಿ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿ ಕಾರಿ ಡಾ. ಎನ್.ವಿ ಪ್ರಸಾದ್ ಅವರು ಆದೇಶ ಹೊರಡಿಸಿದ್ದಾರೆ.

ಮಾರ್ಗ ಬದಲಾವಣೆ: ಗೋಣಿ ಕೊಪ್ಪ ನಗರದ ಉಮಾಮಹೇಶ್ವರಿ ದೇವಸ್ಥಾನದಿಂದ ಹರಿಶ್ಚಂದ್ರ ಪುರದ ವರೆಗೆ ಪೊನ್ನಂಪೇಟೆ ರಸ್ತೆ ಜಂಕ್ಷನ್‌ನಿಂದ ಕೆಪಿಟಿಸಿಎಲ್ ಕಚೇರಿಯವರೆಗೆ ಪಾಲಿ ಬೆಟ್ಟ ರಸ್ತೆಯಲ್ಲಿ ಕೊಪ್ಪದ ಕೂರ್ಗ್ ಪಬ್ಲಿಕ್ಸ್ ಸ್ಕೂಲ್ ರಸ್ತೆಯವರಗೆ ಮುಖ್ಯ ಬೀದಿಯಲ್ಲಿ ರಸ್ತೆಯ ಬದಿಯಲ್ಲಿ ಯಾವುದೇ ವಾಹನಗಳ ನಿಲುಗಡೆ ಯನ್ನು ನಿಷೇಧಿಸುವುದು.

ಮೈಸೂರಿನಿಂದ ತಿತಿಮತಿ ಗೋಣಿ ಕೊಪ್ಪ ಮಾರ್ಗವಾಗಿ ವಿರಾಜಪೇಟೆಗೆ ಬರುವ ವಾಹನಗಳಿಗೆ ತಿತಿಮತಿ, ಪಾಲಿಬೆಟ್ಟ, ಅಮ್ಮತ್ತಿ ಮಾರ್ಗವಾಗಿ ವಿರಾಜಪೇಟೆಗೆ ಹೋಗಲು ಬದಲಿ ವ್ಯವಸ್ಥೆ ಮಾಡುವುದು.

ವಿರಾಜಪೇಟೆಯಿಂದ ಗೋಣಿ ಕೊಪ್ಪ-ತಿತಿಮತಿ ಮಾರ್ಗವಾಗಿ ಮೈಸೂ ರಿಗೆ ಹೋಗುವ ವಾಹನಗಳಿಗೆ ಕೈಕೇರಿ ಗ್ರಾಮದ ಕಳತ್ಮಾಡು-ಅತ್ತೂರು ಶಾಲೆ ಜಂಕ್ಷನ್-ಪಾಲಿಬೆಟ್ಟದ ಟಾಟಾ ಸ್ಟೋರ್ ಜಂಕ್ಷನ್-ತಿತಿಮತಿ ಮಾರ್ಗ ವಾಗಿ ಮೈಸೂರಿಗೆ ಹೋಗುವ ಬದಲಿ ವ್ಯವಸ್ಥೆ ಮಾಡುವುದು.

ಕೇರಳದಿಂದ ಪೆರಂ ಬಾಡಿ- ಗೋಣಿಕೊಪ್ಪ ಮಾರ್ಗವಾಗಿ ಮೈಸೂರಿಗೆ ಹೋಗುವ ವಾಹನಗಳಿಗೆ ಪೆರಂಬಾಡಿ-ವಿರಾಜಪೇಟೆ-ಸಿದ್ದಾಪುರ-ಪಿರಿಯಾಪಟ್ಟಣ-ಮೈಸೂರು ಕಡೆಗೆ ಬದಲಿ ಮಾರ್ಗ ವ್ಯವಸ್ಥೆ ಮಾಡುವುದು.

ವಿರಾಜಪೇಟೆಯಿಂದ ಗೋಣಿಕೊಪ್ಪ ಮಾರ್ಗವಾಗಿ ಕಾನೂರು- ಶ್ರೀಮಂಗಲ-ಕುಟ್ಟ-ಕೇರಳ ರಾಜ್ಯದ ಕಡೆಗಳಿಗೆ ಹೋಗುವ ವಾಹನಗಳು ವಿರಾಜಪೇಟೆ- ಹಾತೂರು-ಕುಂದ-ಪೊನ್ನಂಪೇಟೆ ಮಾರ್ಗವಾಗಿ ಸಂಚರಿಸುವುದು.

ಬಾಳಲೆಯಿಂದ ಗೋಣಿಕೊಪ್ಪ ಮಾರ್ಗವಾಗಿ ವಿರಾಜಪೇಟೆಗೆ ಹೋಗುವ ವಾಹನಗಳು ಬಾಳೆಲೆ- ಪೊನ್ನಂಪೇಟೆ-ಕುಂದ-ಹಾತೂರು ಮಾರ್ಗವಾಗಿ ವಿರಾಜಪೇಟೆಗೆ ಸಂಚರಿಸುವುದು.

ಕುಟ್ಟ-ಶ್ರೀಮಂಗಲ ಕಾನೂರು ಕಡೆಯಿಂದ ಗೋಣಿಕೊಪ್ಪ ಮಾರ್ಗ ವಾಗಿ ವಿರಾಜಪೇಟೆಗೆ ಹೋಗುವ ವಾಹನಗಳು ಪೊನ್ನಂಪೇಟೆ- ಕುಂದ- ಹಾತೂರು- ಮಾರ್ಗವಾಗಿ ವಿರಾಜ ಪೇಟೆಗೆ ಸಂಚರಿಸುವುದು.

ಮೈಸೂರು-ತಿತಿಮತಿ ಗೋಣಿ ಕೊಪ್ಪ-ಶ್ರೀಮಂಗಲ-ಕುಟ್ಟ-ಕೇರಳ ರಾಜ್ಯದ ಕಡೆಗಳಿಗೆ ಹೋಗುವ ವಾಹನಗಳು ತಿತಿಮತಿ- ಕೊಣನಕಟ್ಟೆ- ಪೊನ್ನಪ್ಪಸಂತೆ- ನಲ್ಲೂರು- ಪೊನ್ನಂ ಪೇಟೆ ಮಾರ್ಗವಾಗಿ ಸಂಚರಿಸುವುದು.

ದಸರಾ ವೀಕ್ಷಣೆಗೆ ಗೋಣಿಕೊಪ್ಪಕ್ಕೆ ವಿರಾಜಪೇಟೆ ಕಡೆಯಿಂದ ಬರುವ ವಾಹನಗಳಿಗೆ ಕಾವೇರಿ ಕಾಲೇಜ್ ಮೈದಾನದಲ್ಲಿ ಪೊನ್ನಂಪೇಟೆ ಕಡೆಯಿಂದ ಬರುವ ವಾಹನಗಳಿಗೆ ಗೋಣಿಕೊಪ್ಪ ಪೊನ್ನಂಪೇಟೆ ರಸ್ತೆಯಲ್ಲಿರುವ ವೆಂಕ ಟಪ್ಪ ಲೇಔಟ್ ಬೈಪಾಸ್ ರಸ್ತೆಯಲ್ಲೂ, ತಿತಿಮತಿ ಮತ್ತು ಬಾಳೆಲೆ ಕಡೆಯಿಂದ ಬರುವ ವಾಹನಗಳಿಗೆ ಗೋಣಿಕೊಪ್ಪಲು ಆರ್.ಎಂ.ಸಿ. ಯಲ್ಲೂ ಹಾಗೂ ಪಾಲಿ ಬೆಟ್ಟ ರಸ್ತೆಯಲ್ಲಿ ಪಾಲಿಬೆಟ್ಟ ಕಡೆಯಿಂದ ಬರುವ ವಾಹನಗಳಿಗೆ ಶಾಸ್ತಾ ಇಂಡಸ್ಟ್ರೀಸ್‌ನಿಂದ ರಸ್ತೆಯ ಒಂದು ಬದಿಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲು ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.