ಗೋಣಿಕೊಪ್ಪಲು: ವಿಶ್ವಕನ್ನಡ ಸಮ್ಮೇಳನದ ಕನ್ನಡ ತೇರಿಗೆ ಪಟ್ಟಣದಲ್ಲಿ ಸೋಮವಾರ ಸಂಭ್ರಮದ ಸ್ವಾಗತ ನೀಡಲಾಯಿತು.ವಿರಾಜಪೇಟೆಯಿಂದ ಬೆಳಿಗ್ಗೆ 10ಗಂಟೆಗೆ ಆಗಮಿಸಿದ ರಥವನ್ನು ಪಟ್ಟಣದ ಉಮಾಮಹೇಶ್ವರಿ ದೇವಸ್ಥಾನದ ಬಳಿ ದೇವಸ್ಥಾನ ಸಮಿತಿ ಅಧ್ಯಕ್ಷ ಸಿ.ಟಿ.ದೇವಯ್ಯ ಸ್ವಾಗತಿಸಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷಬಿ.ಜಿ.ರಘುನಾಥ್ ನಾಯಕ್, ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ.ಕೇಶವಕಾಮತ್, ಜಿ.ಪಂ. ಉಪಾಧ್ಯಕ್ಷೆ ಕಾವೇರಿ, ಸದಸ್ಯರಾದ ಶಕುಂತಲಾ ರವೀಂದ್ರ, ಬಿ.ಎನ್.ಪೃಥ್ಯೂ, ತಾ.ಪಂ.ಅಧ್ಯಕ್ಷ ಎಚ್.ಕೆ.ದಿನೇಶ್, ಸದಸ್ಯರಾದ ಟಾಟು ಮೊಣ್ಣಪ್ಪ,
ಸದಸ್ಯೆ ಹಬೀಬುನ್ನೀಸ,ದಯಾಚಂಗಪ್ಪ,ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಚಂಗಪ್ಪ, ಸದಸ್ಯರಾದ ರೀನಾ, ಸುರೇಶ್, ಬೋಜಮ್ಮ,ಪರ್ವಿನ್ ಮೊಣ್ಣಪ್ಪ,ಸಿ.ಕೆ.ಬೋಪಣ್ಣ, ರಾಜೇಶ್, ಸುಮಿತ್ರ, ತಾ.ಪ.ಮಾಜಿ ಸದಸ್ಯ ಶಾಜಿ ಅಚ್ಯುತನ್, ಮುಖಂಡರಾದ ಮಧು ಮಾಚಯ್ಯ, ವಿ.ಟಿ.ವಾಸು ಸುಮಿ ಸುಬ್ಬಯ್ಯ ಮುಂತಾದವರು ಹಾಜರಿದ್ದರು.
ಪಟ್ಟಣದಲ್ಲಿ ಮೆರವಣಿಗೆ ಮೂಲಕ ಸಾಗಿದ ರಥವನ್ನು ಕೆಲವು ಅಂಗಡಿ ಮಾಲಿಕರು ಹೂಚೆಲ್ಲಿ ಸ್ವಾಗತಿಸಿದರು. ಪಟ್ಟಣದಲ್ಲಿ ಕನ್ನಡ ಧ್ವಜ ಹಾರಾಡುತಿದ್ದವು. ಕೆಲವರು ತಮ್ಮ ಅಂಗಡಿಗಳನ್ನು ತಳಿರು ತೋರಣ ಹಾಗೂ ಹೂಮಾಲೆಗಳಿಂದ ಅಲಂಕರಿಸಿದ್ದರು.
ಬಳಿಕ ಪೊನ್ನಂಪೇಟೆಗೆ ತೆರಳಿದ ರಥವನ್ನು ಅರುವತ್ತೊಕ್ಕಲು ಸರ್ವದೈವತಾ ಶಾಲೆಯ ವಿದ್ಯಾರ್ಥಿಗಳು ಸ್ವಾಗತಿಸಿದರು. ಪೊನ್ನಂಪೇಟೆಯಲ್ಲಿಯೂ ರಥಕ್ಕೆ ಭವ್ಯ ಸ್ವಾಗತ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.