ADVERTISEMENT

‘ಶಾಂತಿ, ಸಾಮರಸ್ಯಕ್ಕೆ ಶ್ರದ್ಧಾಕೇಂದ್ರಗಳು ಅವಶ್ಯಕ’

​ಪ್ರಜಾವಾಣಿ ವಾರ್ತೆ
Published 20 ಮೇ 2018, 13:45 IST
Last Updated 20 ಮೇ 2018, 13:45 IST
ಚಾಮುಂಡೇಶ್ವರಿ ದೇವಸ್ಥಾನದಲ್ಲಿ ತೃತೀಯ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ನೂತನವಾಗಿ ನಿರ್ಮಿಸಲಾಗಿರುವ ನೈವೇದ್ಯ ಕೊಠಡಿ ಹಾಗೂ ಅಡುಗೆ ಕೋಣೆಯನ್ನು ಉದ್ಘಾಟಿಸಿ ಬಿ.ಬಿ.ಭಾರತೀಶ್ ಮಾತನಾಡಿದರು
ಚಾಮುಂಡೇಶ್ವರಿ ದೇವಸ್ಥಾನದಲ್ಲಿ ತೃತೀಯ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ನೂತನವಾಗಿ ನಿರ್ಮಿಸಲಾಗಿರುವ ನೈವೇದ್ಯ ಕೊಠಡಿ ಹಾಗೂ ಅಡುಗೆ ಕೋಣೆಯನ್ನು ಉದ್ಘಾಟಿಸಿ ಬಿ.ಬಿ.ಭಾರತೀಶ್ ಮಾತನಾಡಿದರು   

ಸುಂಟಿಕೊಪ್ಪ: ಪ್ರತಿ ಗ್ರಾಮಗಳಲ್ಲಿ ಶಾಂತಿ, ಸಾಮರಸ್ಯ ಉಳಿಯಬೇಕಾದರೆ ಶ್ರದ್ಧಾ ಕೇಂದ್ರಗಳು ಅವಶ್ಯಕತೆ ಇದೆ. ಶೃದ್ಧಾ ಕೇಂದ್ರಗಳು ಜೀರ್ಣೋದ್ಧಾರಗೊಂಡಾಗ ಮಾತ್ರ ಗ್ರಾಮದಲ್ಲಿ ಶಾಂತಿ ಸಾಮರಸ್ಯ,ರೋಗ ರುಜಿನಗಳನ್ನು ತಡೆಯಬಹುದು ಎಂದು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಬಿ.ಬಿ.ಭಾರತೀಶ್ ಹೇಳಿದರು.

ಸಮೀಪದ ಕಂಬಿಬಾಣೆಯ ಶ್ರೀರಾಮ ಮತ್ತು ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ತೃತೀಯ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ನೂತನವಾಗಿ ನಿರ್ಮಿಸಲಾಗಿರುವ ನೈವೇಧ್ಯ ಕೊಠಡಿ ಹಾಗೂ ಅಡುಗೆ ಕೋಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಬಿಜು ಮಾತನಾಡಿ, ತಾ.ಪಂ. ವತಿಯಿಂದ ದೊರೆತ ಅನುದಾನದಲ್ಲಿ ದೇವಸ್ಥಾನ ಅಭಿವೃದ್ಧಿಗೆ ವಿನಿಯೋಗಿಸಿದ್ದು ಮುಂದಿನ ದಿನಗಳಲ್ಲಿಯೂ ಗ್ರಾಮದ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡುವುದಾಗಿ ಭರವಸೆ ವ್ಯಕ್ತಪಡಿಸಿದರು.

ADVERTISEMENT

ಉದ್ಯಮಿ ಜಗನ್ನಾಥ್ ಶೆಣೈ ಮಾತನಾಡಿ, ‘ದೇವಸ್ಥಾನದಲ್ಲಿ ಕೇವಲ ವಾರ್ಷಿಕ ಆಚರಣೆಗೆ ಸೀಮಿತವಾಗದೆ ಪ್ರತಿವಾರವು ದೇವರ ಭಜನೆ, ಹರಿಕಥೆಗಳನ್ನು ಆಯೋಜಿಸುವ ಮೂಲಕ ಯುವ ಪೀಳಿಗೆಗಳಿಗೆ ಮನವರಿಕೆ ಮಾಡುವ ಕಾರ್ಯವು ದೇವಸ್ಥಾನ ಆಡಳಿತ ಮಂಡಳಿಯು ನಡೆಸಬೇಕು’ ಎಂದು ಕಿವಿ ಮಾತು ಹೇಳಿದರು.

ರೋಶಿನಿ ತೋಟದ ಮಾಲೀಕ ಎ.ರಾಮಚಂದ್ರ ಶೆಟ್ಟಿ, ಶ್ರೀ ದಂಡಿನ ಮಾರಿಯಮ್ಮ ದೇವಾಲಯದ ಅಧ್ಯಕ್ಷ ಪಿ.ಕೆ.ಮುತ್ತಣ್ಣ, ಗಣಪತಿ ನರ್ಸರಿ ಮಾಲೀಕ ಜಿ.ಕುಮಾರಸ್ವಾಮಿ, ಕಂಬಿಬಾಣೆ ಗ್ರಾ.ಪಂ. ಅಧ್ಯಕ್ಷ ಕೆ.ಬಿ.ಕೃಷ್ಣ ಇತರರು ಇದ್ದರು.
ಬೆಳಿಗ್ಗೆ 6 ಗಂಟೆಯಿಂದ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಸ್ಥಳಶುದ್ಧಿ, ಗಣಪತಿ ಹೋಮ, ದುರ್ಗಾಹೋಮ, ರಾಮತಾರಕ ಹೋಮ, ಪಂಚವಿಂಶತಿ ಕಲಶ ಪೂಜೆ, ಶ್ರೀ ರಾಮ ಮತ್ತು ಚಾಮುಂಡೇಶ್ವರಿ ದೇವರಿಗೆ ಪಂಚಾಮೃತ ಅಭಿಷೇಕ ಸಹಿತ ಪಂಚವಿಂಶತಿ ಕಲಾಶಭೀಷೇಕ, ಮಹಾಪೂಜೆ, ವೈದಿಕಾ ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಿತು.

ಪೂಜಾ ಕೈಂಕಾರ್ಯದಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.