ಕುಶಾಲನಗರ: ಕುಶಾಲನಗರದಲ್ಲಿ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವತಿಯಿಂದ ರೂ. 50 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ರೈತ ಸಹಕಾರ ಭವನವನ್ನು ಸೆ.30 ರಂದು ಮಧ್ಯಾಹ್ನ 2.30 ಕ್ಕೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಉದ್ಘಾಟಿಸಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ವಹಿಸ ಲಿದ್ದಾರೆ. ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಸಮಾರಂಭ ಉದ್ಘಾಟಿಸ ಲಿದ್ದು, ವಿಧಾನ ಪರಿಷತ್ ಸದಸ್ಯ ಎಂ.ಸಿ.ನಾಣಯ್ಯ ಅತಿಥಿ ಗೃಹ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿ ಗಳಾಗಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಸಂಸದ ಎಚ್.ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ ಟಿ.ಜಾನ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಾತಂಡ ಎ.ರಮೇಶ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿ.ಕೆ. ಲೋಕೇಶ್‌ಕುಮಾರ್ ಭಾಗವಹಿಸಲಿ ದ್ದಾರೆ ಎಂದು ಎಂದು ಸಂಘದ ಅಧ್ಯಕ್ಷ ಎಂ.ಎನ್.ಕುಮಾರಪ್ಪ ಹಾಗೂ ಉಪಾಧ್ಯಕ್ಷ ಎಂ.ಕೆ.ಕುಶಾಲಪ್ಪ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾಧಿಕಾರಿ ಡಾ ಎನ್.ವಿ. ಪ್ರಸಾದ್, ಜಿ.ಪಂ. ಸಿಇಓ ಎನ್.ಕೃಷ್ಣಪ್ಪ, ಡಿಸಿಸಿ ಉಪಾಧ್ಯಕ್ಷ ಎಸ್.ಬಿ. ಭರತ್‌ಕುಮಾರ್, ನಿರ್ದೇಶ ಕರಾದ ಬಲ್ಲಾರಂಡ ಮಣಿ ಉತ್ತಪ್ಪ, ಬಿ.ಕೆ. ಚಿಣ್ಣಪ್ಪ, ಸಹ ಕಾರ ಸಂಘಗಳ ಲೆಕ್ಕ ಪರಿ ಶೋಧನಾ ಇಲಾ ಖೆಯ ಉಪ ನಿಬಂಧಕ ಷಣ್ಮುಖ ಸ್ವಾಮಿ, ಸಹಕಾರ ಸಂಘಗಳ ಜಂಟಿ ನಿಬಂಧಕ ಎಂ.ವೆಂಕಟ ಸ್ವಾಮಿ, ಸಹಾಯಕ ನಿಬಂಧಕ ಜಿ. ಜಗದೀಶ್ ಭಾಗವಹಿಸಲಿದ್ದಾರೆ ಎಂದರು.
ಪಟ್ಟಣದ ಒಂದನೇ ಬ್ಲಾಕ್‌ನ ಕಾವೇರಿ ಬಡಾವಣೆಯಲ್ಲಿ ಈ ಹಿಂದೆ ನಡೆಸುತ್ತಿದ್ದ ಹಣ್ಣು ಸಂಸ್ಕರಣಾ ಕೇಂದ್ರ ಸ್ಥಗಿತಗೊಂಡಿತ್ತು. ಬಳಿಕ ಇದನ್ನು ಅತ್ಯಾಧುನಿಕ ಮಾದರಿಯಲ್ಲಿ ನಿರ್ಮಿಸ ಲಾಗಿದೆ. ರೈತ ಸಮುದಾಯ ಭವನ ವನ್ನು ರೈತಪರ ಚಟುವಟಿಕೆಗಳು, ಸಭೆ-ಸಮಾರಂಭಗಳು, ಮದುವೆ ಮತ್ತಿತರ ಉಪಯುಕ್ತ ಕಾರ್ಯಕ್ರಮ ಗಳಿಗೆ ಬಳಸಿಕೊಳ್ಳಲು ಸಂಘದ ವಿಶೇಷ ಸಲಹಾ ಸಮಿತಿ ನೀಡಿದ ಸಲಹೆ ಮೇರೆಗೆ ಅಚ್ಚುಕಟ್ಟಾಗಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಸಮುದಾಯ ಭವನವನ್ನು ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ದಿನಕ್ಕೆ ರೂ.25 ಸಾವಿರ ಬಾಡಿಗೆ ನಿಗದಿ ಮಾಡಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಂಘದ ನಿರ್ದೇಶಕರಾದ ಡಿ.ಸಿ.ಶಿವಣ್ಣ, ಎ.ಎಂ. ರಾಘವಯ್ಯ, ಎಚ್.ಬಿ.ಚಂದ್ರಪ್ಪ, ಕೆ.ಎಸ್.ರತೀಶ್, ಆರ್. ಕುಮಾರ ಸ್ವಾಮಿ ಕೆ.ಕೆ.ಗಿರಿಜ, ಕಾರ್ಯದರ್ಶಿ ಬಿ.ಎಂ.ಪಾರ್ವತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.