ADVERTISEMENT

ಹಾಕಿಗೆ ಉತ್ತಮ ಭವಿಷ್ಯ; ಚಾಂಪಿಯನ್‌ಗಳ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2011, 8:35 IST
Last Updated 17 ಸೆಪ್ಟೆಂಬರ್ 2011, 8:35 IST
ಹಾಕಿಗೆ ಉತ್ತಮ ಭವಿಷ್ಯ; ಚಾಂಪಿಯನ್‌ಗಳ ವಿಶ್ವಾಸ
ಹಾಕಿಗೆ ಉತ್ತಮ ಭವಿಷ್ಯ; ಚಾಂಪಿಯನ್‌ಗಳ ವಿಶ್ವಾಸ   

ಮಡಿಕೇರಿ: `ಪಾಲಕರು ನಿರಾಶರಾಗುವುದು ಬೇಡ. ತಮ್ಮ ಮಕ್ಕಳಿಗೆ ಹಾಕಿ ತರಬೇತಿಯನ್ನು ನಿರಾತಂಕವಾಗಿ ಕೊಡಿಸಬಹುದು. ಹಾಕಿ ಆಟಕ್ಕೆ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯ ವಿದೆ...~ ಹೀಗೆಂದವರು ಏಷ್ಯನ್ ಚಾಂಪಿ ಯನ್ಸ್ ಟ್ರೋಫಿ ಹಾಕಿ ಟೂರ್ನಿಯ ವಿಜೇತ ಭಾರತ ತಂಡದ ಆಟಗಾರ, ಕೊಡಗಿನ ಹೆಮ್ಮೆಯ ಪುತ್ರ ವಿ.ಆರ್. ರಘುನಾಥ್.

ಇತ್ತೀಚೆಗಷ್ಟೇ ಟೂರ್ನಿಯ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿದು ಏಷ್ಯನ್ ಚಾಂಪಿಯನ್ಸ್ ಪಟ್ಟ ಅಲಂಕರಿಸಿದ ಭಾರತ ತಂಡದ ಉದಯೋನ್ಮುಖ ಆಟಗಾರನ ವಿಶ್ವಾಸದ ಮಾತುಗಳಿವು.

`ಎಲ್ಲ ಆಟಗಳು ಒಂದೇನೇ. ಆದರೆ, ಕ್ರಿಕೆಟ್ ಜೊತೆ ಹೋಲಿಕೆ ಮಾಡಿಕೊಂಡು ಹಾಕಿಯನ್ನು ನಿರ್ಲಕ್ಷಿಸಬೇಡಿ. ಇಲ್ಲಿಯೂ ಕೂಡ ಉತ್ತಮ ಹೆಸರು ಮಾಡಬಹುದು. ಸದ್ಯಕ್ಕೆ ಉತ್ತಮ ಹಾಕಿ ಆಟಗಾರರು ಮೇಲೆ ಬರು ತ್ತಿದ್ದಾರೆ~ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಒಲಿಂಪಿಕ್ ವಿಶ್ವಾಸ: `ನಮ್ಮದು ಹೊಸ ತಂಡ. ತರಬೇತುದಾರ ಆಸ್ಟ್ರೇಲಿಯಾದ ಮೈಖೆಲ್ ಜಾಕ್ ನಾಬ್ ಅವರು ನಮ್ಮ ತಪ್ಪುಗಳನ್ನು ತಿದ್ದಿ, ಉತ್ತಮ ತಂಡವನ್ನು ಕಟ್ಟಿದ್ದಾರೆ. ನಮ್ಮ ಈ ಗೆಲುವಿಗೆ ಅವರ ಶ್ರಮವೂ ಕಾರಣವಿದೆ. ನಾವು ಇದೇ ರೀತಿ ಪ್ರಯತ್ನ ಮಾಡಿದರೆ ಲಂಡನ್‌ನಲ್ಲಿ ನಡೆಯಲಿ ರುವ ಒಲಿಂಪಿಕ್ ಪಂದ್ಯದಲ್ಲೂ ಜಯಗಳಿಸುತ್ತೇವೆ~ ಎಂದು ವಿಶ್ವಾಸ ವ್ಯಕ್ತಪಡಿಸಿದರು.

`ನಮಗೆ ಆರ್ಥಿಕ ಸಹಾಯ ನೀಡಿದ ರಾಜ್ಯ ಸರ್ಕಾರ ಹಾಗೂ ನಮ್ಮನ್ನು ಸನ್ಮಾನಿಸುತ್ತಿರುವ ಕೊಡಗಿನ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ~ ಎಂದರು. ಇದಕ್ಕೆ ವಿಜೇತ ತಂಡದ ಮತ್ತೋರ್ವ ಆಟಗಾರ ಎಸ್.ವಿ. ಸುನೀಲ್ ಕೂಡ ಧ್ವನಿಗೂಡಿಸಿದರು.

ಸನ್ಮಾನ: ಇದಕ್ಕೂ ಮೊದಲು ಜಿಲ್ಲಾಡಳಿತ, ಜಿ.ಪಂ., ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವತಿ ಯಿಂದ ನಗರದ ಕೋಟೆ ವಿಧಾನ ಸಭಾಂಗಣದಲ್ಲಿ ಇವರಿಬ್ಬರನ್ನೂ ಸನ್ಮಾನಿಸಲಾಯಿತು.

ಕ್ರೀಡಾಪಟುಗಳನ್ನು ಸನ್ಮಾನಿಸಿದ ನಂತರ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಮಾತನಾಡಿ, ಈ ಕ್ರೀಡಾಪಟುಗಳು ದೇಶಕ್ಕೆ, ರಾಜ್ಯಕ್ಕೆ ಹಾಗೂ ಕೊಡಗು ಜಿಲ್ಲೆಗೆ ಹೆಸರು ತಂದುಕೊಟ್ಟಿದ್ದಾರೆ. ಮೊದಲಿನಿಂದಲೂ ಕೊಡಗು ಜಿಲ್ಲೆಯು ಸೇನೆ ಹಾಗೂ ಹಾಕಿಯಲ್ಲಿ ಹೆಸರುವಾಸಿಯಾಗಿದೆ ಎಂದು ಅಭಿಮಾನದಿಂದ ನುಡಿದರು.

ಹಾಕಿ ಆಟಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಜಿಲ್ಲೆಯ ಮೂರೂ ತಾಲ್ಲೂಕುಗಳಲ್ಲಿ ಆಸ್ಟ್ರೋ ಟರ್ಫ್ ಹಾಕಿ ಕ್ರೀಡಾಂಗಣ ನಿರ್ಮಿಸಲು ನಿರ್ಧರಿಸ ಲಾಗಿದೆ. ಅದರಂತೆ ಕೆಲವೆಡೆ ಕಾಮಗಾರಿ ಆರಂಭ ಕೂಡ ಆಗಿದೆ. ಮಡಿಕೇರಿಯಲ್ಲಿ ಇರುವ ಈಜುಗೊಳವನ್ನು ಪುನಃಶ್ಚೇತನ ಗೊಳಿಸಲು ಕೂಡ ಕ್ರಮಕೈಗೊಳ್ಳ ಲಾಗುತ್ತಿದೆ ಎಂದರು.

ಜಿ.ಪಂ.ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ, ಉಪಾಧ್ಯಕ್ಷೆ ಎಚ್.ಎಂ.ಕಾವೇರಿ, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಕಾಂತಿ ಬೆಳ್ಯಪ್ಪ, ಸದಸ್ಯರಾದ ಎಸ್.ಎನ್.ರಾಜಾರಾವ್, ಬಿದ್ದಂಡ ಉಷಾ ದೇವಯ್ಯ, ಮಣಿ ನಂಜಪ್ಪ, ಜಿಲ್ಲಾಧಿಕಾರಿ ಡಾ.ಎನ್.ವಿ.ಪ್ರಸಾದ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಎನ್.ಕೃಷ್ಣಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಅಣ್ಣಿಗೇರಿ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಚಂದ್ರೇಗೌಡ, ಉಪವಿಭಾಗಾ ಧಿಕಾರಿ ಡಾ.ಎಂ.ಆರ್.ರವಿ, ನಗರ ಸಭೆಯ ಆಯುಕ್ತ ಶಶಿಕುಮಾರ್, ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.