ADVERTISEMENT

‘ನಿವೃತ್ತ ಸೈನಿಕರಿಗೆ ಸೂಕ್ತ ಸೌಲಭ್ಯ ಕಲ್ಪಿಸಿ’

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 6:38 IST
Last Updated 10 ಮಾರ್ಚ್ 2014, 6:38 IST

ಶನಿವಾರಸಂತೆ: ದೇಶ ಸೇವೆ ಮಾಡಿ ನಿವೃತ್ತರಾಗಿ ಮರಳಿ ನಾಡಿಗೆ ಬರುವ ಸೈನಿಕರಿಗೆ ಯಾವುದೇ ಸವಲತ್ತುಗಳನ್ನು ನೀಡುವುದಿಲ್ಲ. ಮನೆ ಕಟ್ಟಲು ಜಾಗವೂ ಸಿಗುವುದಿಲ್ಲ ಎಂದು ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮೇಜರ್ ಜನರಲ್ ಬಿ.ಎ. ಕಾರ್ಯಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಪಟ್ಟಣದ ನಿವೃತ್ತ ಸೈನಿಕರ ಸಂಘದ ಕಚೇರಿಯಲ್ಲಿ ಭಾನುವಾರ ನಡೆದ ನಿವೃತ್ತ ಸೈನಿಕರ ಸಂಘದ ಉದಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವರ್ಷಕ್ಕೆ ₨ 11,800 ವರಮಾನ­ ಇ­ರುವವರಿಗೆ ಬಿಪಿಎಲ್ ಕಾರ್ಡ್ ಕೊಡುತ್ತಾರೆ. ಇಂದು ಈ ಹಣದಿಂದ ಬದುಕಲು ಸಾಧ್ಯವಿಲ್ಲ. ಸೈನಿಕರ ಬೇಡಿಕೆ ಗಳ ಈಡೇರಿಕೆಗೆ ಜಿಲ್ಲೆಯಲ್ಲಿ ಜಾತಿ, ಮತ ಭೇದವಿಲ್ಲದೇ ಒಂದು ದೊಡ್ಡ ಮಾಡಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಕರ್ನಲ್ ಗಣಪತಿ ಮಾತನಾಡಿ, ಜಿಲ್ಲೆಯಲ್ಲಿ 1,800 ಜನ ನಿವೃತ್ತ ಸೈನಿಕರಿದ್ದಾರೆ. 10 ಸಂಘಗಳಿವೆ.

ಕೇರಳ ರಾಜ್ಯದಲ್ಲಿ ಮನೆ, ನಿವೇಶನ ಇತ್ಯಾದಿ ಸವಲತ್ತುಗಳಿವೆ. ಆದರೆ, ಕರ್ನಾಟಕದಲ್ಲಿ ಇಲ್ಲ. ನಿವೃತ್ತ ಸೈನಿಕರು ಹೋರಾಟ ಮಾಡಿ ಬೇಡಿಕೆ ಈಡೇರಿಸಿಕೊಳ್ಳ ಬೇಕಾಗಿದೆ ಎಂದರು.

ಶಾಸಕ ಅಪ್ಪಚ್ಚು ರಂಜನ್ ಮಾತ ನಾಡಿ, ಸೈನಿಕರ ಬಾಳಿಗೆ ಭದ್ರತೆ ಇದ್ದರೆ ಕೆಲಸ ಮಾಡಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಶನಿವಾರಸಂತೆ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಎಂ.ಎನ್. ಧರ್ಮಪ್ಪ ಮಾತನಾಡಿ, ಸರ್ಕಾರ ಯಾವುದೇ ಕೆಲಸವನ್ನು ಮಾಡಬೇಕಾದರೂ ಚುನಾವಣಾ ನೀತಿ ಸಂಹಿತೆ ಎಂದು ಹೇಳಿ ಕೆಲಸ ಕಾರ್ಯಗಳಿಗೆ ಅಡೆತಡೆ ಒಡ್ಡುವುದು ಸರಿಯಲ್ಲ. ದೇಶ ಕಾಯುವ ಸೈನಿಕರ ಸಮಸ್ಯೆಗಳ ಬಗ್ಗೆಯೂ ಕಾಳಜಿ ಇರಬೇಕು. ಸೈನಿಕರಲ್ಲಿ ಒಗ್ಗಟ್ಟಿರಬೇಕು ಎಂದರು.

ನಿವೃತ್ತ ಕರ್ನಲ್ ಎನ್.ಕೆ. ಅಪ್ಪಯ್ಯ, ಕರ್ನಲ್ ಪಿ. ಗಣೇಶ್, ಜಿ.ಪಂ. ಸದಸ್ಯರಾದ ಡಿ.ಬಿ. ಧರ್ಮಪ್ಪ, ಚಂದ್ರಿಕಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭುವನೇಶ್ವರಿ, ಸದಸ್ಯ ಎಸ್.ಎನ್. ರಘು ಇತರರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಮೇಜರ್ ಕರ್ನಲ್ ಕಾರ್ಯಪ್ಪ, ಎಸ್.ಆರ್. ಜೋಯಪ್ಪ, ಎಸ್.ಎನ್. ರಘು ಅವರನ್ನು ಸನ್ಮಾನಿಸಲಾಯಿತು.

ಬೆಂಗಳೂರಿನ ಉದ್ಯಮಿಕೆ.ಟಿ. ಬೆಳ್ಳೀಗೌಡ, ಶನಿವಾರಸಂತೆ ನಿವೃತ್ತ ಸೈನಿಕರ ಸಂಘಕ್ಕೆ 25 ಸಾವಿರ ರೂಪಾಯಿ ಕೊಡುಗೆ ನೀಡಿದರು.
ಮೇಜರ್ ಒ.ಎಸ್. ಚಂಗಪ್ಪ, ಕ್ಯಾಪ್ಟನ್ ಭಾಸ್ಕರ್, ಥಾಮಸ್ ವಾಸ್, ಪ್ರಮುಖರಾದ ಸವಿತಾ, ಎಚ್.ಎ. ದೇವರಾಜ್, ನಾಗರಾಜ್, ಪ್ರತಾಪ್, ಮೊಹಮ್ಮದ್ ಗೌಸ್, ಜೈನಾಬಿ, ಜಯಕುಮಾರ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.