ADVERTISEMENT

12ರಂದು ದಸರಾ ಕವಿಗೋಷ್ಠಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2013, 8:24 IST
Last Updated 19 ಸೆಪ್ಟೆಂಬರ್ 2013, 8:24 IST

ಮಡಿಕೇರಿ: ನಾಡಹಬ್ಬ ಮಡಿಕೇರಿ ದಸರಾ ಉತ್ಸವ ಕಾರ್ಯಕ್ರಮ­ಗಳಲ್ಲೊಂದಾದ ದಸರಾ ಬಹುಭಾಷಾ ಕವಿಗೋಷ್ಠಿಯನ್ನು ಈ ಬಾರಿ ಅಕ್ಟೋಬರ್ 12ರಂದು ನಡೆಸಲು ತೀರ್ಮಾನಿಸಲಾಗಿದೆ.

ಬಹುಭಾಷಾ ಕವಿಗೋಷ್ಠಿ ಸಮಿತಿ ವತಿಯಿಂದ ನಗರದ ದಸರಾ ಸಮಿತಿ ಕಚೇರಿಯಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.

ಸಮಿತಿ ಅಧ್ಯಕ್ಷ ಕಾಯಪಂಡ ಶಶಿಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಾರಿ ವಿಭಿನ್ನವಾಗಿ ಕವಿಗೋಷ್ಠಿ ನಡೆಸುವ ಕುರಿತು ಚರ್ಚಿಸಲಾಯಿತು.

ಕವನ ವಾಚನ ಮಾತ್ರವಲ್ಲದೆ ಸ್ಥಳದಲ್ಲೇ ಕವನ ರಚನೆ, ಕವನಗಳ ಕುರಿತು ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆಯೂ ನಿರ್ಧರಿಸಲಾಯಿತು.

ಇದೇ ಸಂದರ್ಭ ಕವಿಗೋಷ್ಠಿಗೆ ಬಂದಿರುವ ಕವನಗಳ ಆಯ್ಕೆಗೆ ಸಮಿತಿಯನ್ನು ರಚಿಸಲಾಯಿತು.
ಸಭೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಎನ್. ಮೂರ್ತಿ, ಗೌರವ ಸಲಹೆಗಾರರಾದ ಶ್ರಿಧರ್ ಹೂವಳ್ಳಿ, ಅನಿಲ್ ಎಚ್.ಟಿ., ಅಲ್ಲಾರಂಡ ವಿಠಲ್ ನಂಜಪ್ಪ, ಸದಸ್ಯರಾದ ಅಜ್ಜಾಮಾಡ ರಮೇಶ್ ಕುಟ್ಟಪ್ಪ, ಮಾದೇಟಿರ ಬೆಳ್ಯಪ್ಪ, ಉಜ್ವಲ್ ರಂಜಿತ್, ಎಸ್.ಜಿ. ಉಮೇಶ್, ಎಂ.ಇ.ಮಹಮದ್, ಪ್ರಸಾದ್ ಸಂಪಿಗೆಕಟ್ಟೆ, ಜಿ.ವಿ.ರವಿಕುಮಾರ್, ಹೊಟ್ಟೇಂಗಡ ಸ್ವಾತಿ, ಪುದಿಯನೆರವನ ರೇವತಿ ಉಪಸ್ಥಿತರಿದ್ದರು.

ಪದಾಧಿಕಾರಿಗಳ ಆಯ್ಕೆ
ಮಡಿಕೇರಿ ದಸರಾ ಸಮಿತಿ ವತಿಯಿಂದ ದಸರಾ ಸ್ವಾಗತ ಸಮಿತಿ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಸೆ.17ರಂದು ನಗರದ ದಸರಾ ಸಮಿತಿಯ ಕಾರ್ಯಲಯದಲ್ಲಿ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು.

ಸ್ವಾಗತ ಸಮಿತಿ ಪದಾಧಿಕಾರಿಗಳು: ಉಪಾಧ್ಯಕ್ಷರಾಗಿ ರವೀಂದ್ರ (ಅಪ್ಪು), ಕಿಶನ್ ಪೂವಯ್ಯ, ಸುಖೇಶ್ ಚಂಗಪ್ಪ, ಕಾರ್ಯದರ್ಶಿಗಳಾಗಿ ಟಿ.ವಿ.ವೇಣುಗೋಪಾಲ್, ಖಲೀಲ್ ಬಾಷಾ ಎಂ.ಎ, ಅರುಣ್ ಶೆಟ್ಟಿ, ಸಹ ಕಾರ್ಯದರ್ಶಿಗಳಾಗಿ ಡ್ಯಾನಿ ಬರೋಸ್, ಹಾರುನ್, ಉಸ್ಮನ್, ಪ್ರಶಾಂತ್ ಬಿ.ಎಸ್. ಆಯ್ಕೆಯಾಗಿದ್ದಾರೆ.

ಹಾಗೆಯೇ ದಸರಾ ವೇದಿಕೆ ಸಮಿತಿಗೆ ಅಧ್ಯಕ್ಷರಾಗಿ ಕನ್ನಕಂಡ ಪೆಮ್ಮಯ್ಯ, ಉಪಾಧ್ಯಕ್ಷರಾಗಿ ಪಿ.ಬಿ. ಮೋಹನ, ಎಸ್ ಭರತ್, ಕಾರ್ಯದರ್ಶಿಯಾಗಿ ಸುಂದರ ಬಿ.ಟಿ, ಸುರೇಶ್, ಸಹ ಕಾರ್ಯದರ್ಶಿಯಾಗಿ ದಿನೇಶ್ ಕುಮಾರ್, ಸದಸ್ಯರಾಗಿ ವಿಜಯ, ಬಿ.ಕೆ. ಶಿವಕುಮಾರ್, ಜಯಕುಮಾರ್ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.