ADVERTISEMENT

ಕೊಡವ ಕುಲಶಾಸ್ತ್ರ ಅಧ್ಯಯನ: ಮರು ಚಾಲನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 8:43 IST
Last Updated 4 ಜನವರಿ 2018, 8:43 IST

ಮಡಿಕೇರಿ: ಸ್ಥಗಿತಗೊಂಡಿರುವ ಕೊಡವ ಕುಲಶಾಸ್ತ್ರ ಅಧ್ಯಯನಕ್ಕೆ ಮರು ಚಾಲನೆ ನೀಡಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್‌.ಯು. ನಾಚಪ್ಪ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ರಾಜ್ಯ ಸರ್ಕಾರವು ಕುಲಶಾಸ್ತ್ರ ಅಧ್ಯಯನ ನಡೆಸಲು ಮೈಸೂರು ಬುಡಕಟ್ಟು ಅಧ್ಯಯನ ಸಂಸ್ಥೆಗೆ ಈ ಹಿಂದೆ ವಹಿಸಿತ್ತು. ಜತೆಗೆ, ಅಧ್ಯಯನಕ್ಕೆ ₹ 11 ಲಕ್ಷ ಅನುದಾನವನ್ನೂ ಬಿಡುಗಡೆ ಮಾಡಲಾಗಿತ್ತು. ಆದರೆ, ಕೆಲವರು ಕುತಂತ್ರ ನಡೆಸಿದ ಪರಿಣಾಮ ಅಧ್ಯಯನ ಸ್ಥಗಿತ ಮಾಡಲಾಗಿತ್ತು. ಮರು ಚಾಲನೆ ನೀಡುವ ಮೂಲಕ ಸಾಧನಾ ಸಂಭ್ರಮವನ್ನು ಸಾರ್ಥಕ ಮಾಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.

ಮೈಸೂರು ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ವಿದ್ಯಾರ್ಥಿಗಳು 1 ತಿಂಗಳು ಅಧ್ಯಯನ ನಡೆಸಿದ್ದರು. 2016 ಡಿಸೆಂಬರ್‌ನಲ್ಲಿ ಸ್ಥಗಿತ ಗೊಂಡಿರುವ ಅಧ್ಯಯನಕ್ಕೆ ಚಾಲನೆ ನೀಡಲು ಮರು ಆದೇಶ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಚಂಬಂಡ ಜನತ್, ಪುಲ್ಲೆರ ಕಾಳಪ್ಪ, ಮಂದಪಂಡ ಮನೋಜ್ ಮತ್ತು ಕೂಪದಿರ ಸಾಬು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.