ADVERTISEMENT

ಕೊಡಗಿನೆಲ್ಲೆಡೆ ಹೊರರಾಜ್ಯದ ಬಂಡವಾಳಶಾಹಿಗಳು; ಆತಂಕ

ಅಮ್ಮತ್ತಿಯಲ್ಲಿ ಜನಜಾಗೃತಿ ಮಾನವ ಸರಪಳಿ; ಎನ್.ಯು.ನಾಚಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 6:12 IST
Last Updated 10 ಅಕ್ಟೋಬರ್ 2024, 6:12 IST
ಕೊಡಗು ಜಿಲ್ಲೆಯ ಅಮ್ಮತ್ತಿಯಲ್ಲಿ ಬುಧವಾರ ಬೃಹತ್ ಪ್ರಮಾಣದ ಭೂಪರಿವರ್ತನೆ ಹಾಗೂ ಭೂವಿಲೇವಾರಿ ವಿರುದ್ಧ ಕೊಡವ ನ್ಯಾಷನಲ್ ಕೌನ್ಸಿಲ್ ಮುಖಂಡರು ಮಾನವ ಸರಪಳಿ ರಚಿಸಿದರು
ಕೊಡಗು ಜಿಲ್ಲೆಯ ಅಮ್ಮತ್ತಿಯಲ್ಲಿ ಬುಧವಾರ ಬೃಹತ್ ಪ್ರಮಾಣದ ಭೂಪರಿವರ್ತನೆ ಹಾಗೂ ಭೂವಿಲೇವಾರಿ ವಿರುದ್ಧ ಕೊಡವ ನ್ಯಾಷನಲ್ ಕೌನ್ಸಿಲ್ ಮುಖಂಡರು ಮಾನವ ಸರಪಳಿ ರಚಿಸಿದರು    

ಮಡಿಕೇರಿ: ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯಲ್ಲಿ ತೊಡಗಿರುವ ಬಂಡವಾಳಶಾಹಿಗಳು ಇಡೀ ಕೊಡಗಿನಲ್ಲಿಯೇ ವ್ಯಾಪಿಸಿಕೊಂಡಿದ್ದಾರೆ. ಪ್ರವಾಸೋದ್ಯಮದ ಆದಾಯವನ್ನಷ್ಟೇ ಗುರಿಯಾಗಿಸಿಕೊಂಡಿರುವ ಸರ್ಕಾರ ಪವಿತ್ರ ಕೊಡವಲ್ಯಾಂಡ್‌ ಅನ್ನು ಮೋಜು, ಮಸ್ತಿಗಾಗಿ ಬಿಟ್ಟುಕೊಡುತ್ತಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಆರೋಪಿಸಿದರು.

ಇಲ್ಲಿನ ಅಮ್ಮತ್ತಿಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಬುಧವಾರ ನಡೆದ ಬೃಹತ್ ಪ್ರಮಾಣದ ಭೂಪರಿವರ್ತನೆ ಹಾಗೂ ಭೂವಿಲೇವಾರಿ ವಿರುದ್ಧದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೊಡಗಿನಲ್ಲಿ ಪ್ರವಾಸೋದ್ಯಮವನ್ನು ‘ಬೂಸ್ಟ್’ ಮಾಡುವುದಾಗಿ ಜಿಲ್ಲಾಡಳಿತ ಹೇಳಿಕೆ ನೀಡುತ್ತಿದೆ. ಪ್ರವಾಸೋದ್ಯಮದ ಬೆಳವಣಿಗೆ ಎಂದರೆ ಏನು ಎನ್ನುವುದನ್ನು ಶ್ವೇತಪತ್ರದ ಮೂಲಕ ಸ್ಪಷ್ಟಪಡಿಸಬೇಕು ಎಂದು ಅವರು ಪುನರುಚ್ಚರಿಸಿದರು.

ADVERTISEMENT

‘ಕೊಡವರ ಸ್ವಾಧೀನದಲ್ಲಿರುವ ಭೂಮಿಯನ್ನು 30 ವರ್ಷಗಳಿಗೆ ಗುತ್ತಿಗೆಗೆ ನೀಡುವ ಸರ್ಕಾರದ ಯೋಜನೆಯನ್ನು ದುಷ್ಟಕೂಟಗಳು ವಿಫಲಗೊಳಿಸಲು ಯತ್ನಿಸುತ್ತಿವೆ’ ಎಂದೂ ಆರೋಪಿಸಿದ ಅವರು, ‘ಕೊಡವರಿಗೆ ಭೂಮಿ ಸಿಗದಂತೆ ಮಾಡಿ ಸಂಕಷ್ಟಕ್ಕೆ ಸಿಲುಕಿಸಿ ಆತಂಕಕ್ಕೆ ತಳ್ಳುವ ಪ್ರಯತ್ನಗಳು ನಡೆಯುತ್ತಿವೆ’ ಎಂದು ಕಿಡಿಕಾರಿದರು.

ಕೊಡಗಿನಲ್ಲಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯಲ್ಲಿ ತೊಡಗಿರುವ ಬಂಡವಾಳಶಾಹಿಗಳು ಹಾಗೂ ಅವರು ಕರೆ ತಂದಿರುವ ಜನರಿಂದ ಇಲ್ಲಿನ ಪರಿಸರ, ಪ್ರಕೃತಿ, ಸಂಸ್ಕೃತಿ, ಜಲಮೂಲ, ಸಾಮಾಜಿಕ ಭದ್ರತೆ ಮತ್ತು ಜನಾಂಗೀಯ ಶಾಸ್ತ್ರ ಸಂಪೂರ್ಣ ಬುಡಮೇಲಾಗುತ್ತಿದೆ ಎಂದೂ ಅಸಮಾಧಾನ ವ್ಯಕ್ತಪಡಿಸಿದರು.

ಕೊಡವರೆಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಿದಾಗ ಮಾತ್ರ ಇದೆಲ್ಲವನ್ನು ತಡೆಯಲು ಸಾಧ್ಯವೆಂದು ಅಭಿಪ್ರಾಯಪಟ್ಟರು.

ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ಮುಂದಿನ ದಿನಗಳಲ್ಲಿ ಭಾಗಮಂಡಲ ಹಾಗೂ ಮಡಿಕೇರಿಯಲ್ಲಿ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಸುವುದಾಗಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಮುದ್ದಿಯಡ ಲೀಲಾವತಿ, ಮಂಡೇಪಂಡ ಲಾಲಾ ಮಾಚಯ್ಯ, ನೆಲ್ಲಮಕ್ಕಡ ವಿವೇಕ್, ಪಟ್ಟಡ ಅರುಣ್, ಕೆ.ಎಸ್.ತಿಮ್ಮಯ್ಯ, ಎಂ.ಸಿ.ಅಯ್ಯಪ್ಪ, ಪಿ.ಪಿ.ಪೂವಯ್ಯ, ನೆಲ್ಲಮಕ್ಕಡ ಸಾಗರ್, ಎಂ.ಎಂ.ದೇವಯ್ಯ, ಪಿ.ಗಗನ್ ಗಣಪತಿ, ಬಿ.ಎ.ಮಂದಣ್ಣ, ಕೆ.ಟಿ.ಮನು, ಎಂ.ಪಿ.ರಾಜೀವ್, ಕೆ.ಎ.ಅಯ್ಯಪ್ಪ, ನೆಲ್ಲಮಕ್ಕಡ ಬೊಳ್ಯಪ್ಪ, ನೆಲ್ಲಮಕಡ ಸುಬ್ರಮಣಿ, ನೆಲ್ಲಮಕ್ಕಡ ಪೆಮ್ಮಯ್ಯ, ನೆಲ್ಲಮಕ್ಕಡ ಮಾಚಯ್ಯ, ಐನಂಡ ಪ್ರಕಾಶ್, ಐನಂಡ ಮೊಣ್ಣಪ್ಪ, ನೆಲ್ಲಮಕ್ಕಡ ಗಣಪತಿ,

ಕೊಡಗು ಜಿಲ್ಲೆಯ ಅಮ್ಮತ್ತಿಯಲ್ಲಿ ಬುಧವಾರ ಬೃಹತ್ ಪ್ರಮಾಣದ ಭೂಪರಿವರ್ತನೆ ಹಾಗೂ ಭೂವಿಲೇವಾರಿ ವಿರುದ್ಧ ಕೊಡವ ನ್ಯಾಷನಲ್ ಕೌನ್ಸಿಲ್ ಮುಖಂಡರು ಮಾನವ ಸರಪಳಿ ರಚಿಸಿದರು
ಕೊಡವರೆಲ್ಲರೂ ಒಂದಾಗಿ ಹೋರಾಟ ನಡೆಸಲು ಕರೆ ಬಂಡವಾಳಶಾಹಿಗಳಿಂದ ಎಲ್ಲವೂ ಬುಡಮೇಲು ಮುಂದಿನ ದಿನಗಳಲ್ಲಿ ಭಾಗಮಂಡಲ, ಮಡಿಕೇರಿಯಲ್ಲಿ ಮಾನವ ಸರಪಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.