ADVERTISEMENT

ಚೌಡೇಶ್ವರಿ ದೇವಿ ವಾರ್ಷಿಕೋತ್ಸವ ಜೂ 9ರಂದು

​ಪ್ರಜಾವಾಣಿ ವಾರ್ತೆ
Published 30 ಮೇ 2025, 5:45 IST
Last Updated 30 ಮೇ 2025, 5:45 IST
ಕುಶಾಲನಗರ ಶ್ರೀ ಚೌಡೇಶ್ವರಿ ದೇವಾಲಯ
ಕುಶಾಲನಗರ ಶ್ರೀ ಚೌಡೇಶ್ವರಿ ದೇವಾಲಯ   

ಕುಶಾಲನಗರ: ಪಟ್ಟಣದ ರಥಬೀದಿ ಚೌಡೇಶ್ವರಿ ದೇವಸ್ಥಾನ, ದೇವಾಂಗ ಸಂಘದಿಂದ ರಾಮಲಿಂಗ ಚೌಡೇಶ್ವರಿ ಅಮ್ಮನವರ ವಾರ್ಷಿಕೋತ್ಸವ ಜೂ9ರಂದು ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಡಿ.ವಿ.ರಾಜೇಶ್ ತಿಳಿಸಿದರು.

ಅಂದು ಸೋಮವಾರ ಬೆಳಿಗ್ಗೆ 5 ಗಂಟೆಗೆ ಗಣಪತಿ ಹೋಮ, 6.30ಕ್ಕೆ ಧ್ವಜಾರೋಹಣ, 7ಗಂಟೆಗೆ ಕಾವೇರಿ ನದಿಯಲ್ಲಿ ಗಂಗೆಪೂಜೆ, ನಂತರ ನದಿಯಿಂದ ಮಂಗಳವಾದ್ಯ ಹಾಗೂ ಪೂರ್ಣಕುಂಭ ಕಳಸದೊಂದಿಗೆ ಮಹಿಳೆಯರು ಮುಖ್ಯರಸ್ತೆಯಲ್ಲಿ ಮೆರವಣಿಗೆ ನಡೆಸಲಿದ್ದಾರೆ. ಜೊತೆಯಲ್ಲಿ ಜಾನಪದ ವೀರಗಾಸೆ, ನೃತ್ಯ ಮೆರವಣಿಗೆಗೆ ಮೆರಗು ನೀಡಲಿದೆ.

 ದೇವಾಲಯದಲ್ಲಿ ದೇವಿಗೆ ಪೂಜೆ ನಡೆಯಲಿವೆ. ಸಂಜೆ 6ಕ್ಕೆ ವಿದ್ಯುತ್ ದೀಪಾಲಂಕಾರದ ಭವ್ಯ ಮಂಟಪದಲ್ಲಿ ದೇವಿ ವಿಗ್ರಹ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಮಂಗಳವಾದ್ಯದೊಂದಿಗೆ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಗುತ್ತದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಡಿ.ಆರ್. ಕೃಷ್ಣಕುಮಾರ್ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.