ADVERTISEMENT

ಕೂರ್ಗ್ ಯುನೈಟೆಡ್ ಮತ್ತು ಪ್ರಗತಿ ಕ್ರಿಕೆಟರ್ಸ್‌ಗೆ ಗೆಲುವು

ಕೊಡವ ಕ್ರಿಕೆಟ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಸಿಸನ್-2

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 5:42 IST
Last Updated 10 ಏಪ್ರಿಲ್ 2025, 5:42 IST

ಮಡಿಕೇರಿ: ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಪಾಲಿಬೆಟ್ಟದಲ್ಲಿ ನಡೆಯುತ್ತಿರುವ ಕೊಡವ ಕ್ರಿಕೆಟ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಸಿಸನ್-2ರಲ್ಲಿ ಬುಧವಾರ ಟೀಮ್ ಕೂರ್ಗ್ ಯುನೈಟೆಡ್ ಹಾಗೂ ಟೀಮ್ ಪ್ರಗತಿ ಕ್ರಿಕೆರ್ಟ್ಸ್‌ ತಂಡಗಳು ಗೆಲುವು ಸಾಧಿಸಿದವು.

ಟೀಮ್ ಕೂರ್ಗ್ ಯುನೈಟೆಡ್ ಮತ್ತು ಟೀಮ್ ಕೊಡವ ಟ್ರೆಂಬ್ಸ್ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೂರ್ಗ್ ಯುನೈಟೆಡ್ ತಂಡ ನಿಗದಿತ 20 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 135 ರನ್‌ಗಳನ್ನು ಗಳಿಸಿತು. ಇದನ್ನು ಬೆನ್ನೆಟ್ಟಿದ ಕೊಡವ ಟ್ರೆಂಬ್ಸ್ ತಂಡ 16.1 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 96 ರನ್‌ಗಳನ್ನಷ್ಟೇ ಗಳಿಸಿತು. ಕೂರ್ಗ್ ಯುನೈಟೆಡ್‌ನ ಅಟ್ರಂಗಡ ಶರತ್ ನಂಜಪ್ಪ ಪಂದ್ಯ ಪುರುಷೋತ್ತಮ ಗೌರವಕ್ಕೆ ಪಾತ್ರರಾದರು.

ಟೀಮ್ ಪ್ರಗತಿ ಕ್ರಿಕೆಟರ್ಸ್ ಮತ್ತು ಟೀಮ್ ಕೂರ್ಗ್ ಬ್ಲಾಸ್ಟರ್ಸ್ ನಡುವೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪ್ರಗತಿ ಕ್ರಿಕೆಟರ್ಸ್ ನಿಗದಿ 20  ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ129 ರನ್‌ಗಳನ್ನು ಗಳಿಸಿತು. ಗುರಿ ಬೆನ್ನಟ್ಟಿದ ಕೂರ್ಗ್ ಬ್ಲಾಸ್ಟರ್ಸ್ ತಂಡ 18 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 65 ರನ್‌ಗಳನ್ನು ಗಳಿಸಿತು. ಟೀಮ್ ಪ್ರಗತಿ ಕ್ರಿಕೆಟರ್ಸ್ನ ತೀತಮಾಡ ಅಭಿಮನ್ಯು ದೇವಯ್ಯ ಪಂದ್ಯ ಪುರುಷೋತ್ತಮ ಗೌರವಕ್ಕೆ ಪಾತ್ರರಾದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.