ADVERTISEMENT

ಜನೋತ್ಸವ ಕಚೇರಿ ಉದ್ಘಾಟನೆ

29ರಿಂದ ಮಡಿಕೇರಿ ದಸರಾ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 5:43 IST
Last Updated 20 ಸೆಪ್ಟೆಂಬರ್ 2019, 5:43 IST
ಮಡಿಕೇರಿಯ ನಗರಸಭೆ ಆವರಣದಲ್ಲಿರುವ ನಗರಸಭೆ ಸ್ಥಾಯಿ ಸಮಿತಿ ಕಚೇರಿಯಲ್ಲಿ ಮಡಿಕೇರಿ ದಸರಾ ಜನೋತ್ಸವ ಕಚೇರಿಗೆ ಚಾಲನೆ ನೀಡಿದ ನಂತರ ಪೂಜಾ ಕಾರ್ಯ ನಡೆಯಿತು
ಮಡಿಕೇರಿಯ ನಗರಸಭೆ ಆವರಣದಲ್ಲಿರುವ ನಗರಸಭೆ ಸ್ಥಾಯಿ ಸಮಿತಿ ಕಚೇರಿಯಲ್ಲಿ ಮಡಿಕೇರಿ ದಸರಾ ಜನೋತ್ಸವ ಕಚೇರಿಗೆ ಚಾಲನೆ ನೀಡಿದ ನಂತರ ಪೂಜಾ ಕಾರ್ಯ ನಡೆಯಿತು   

ಮಡಿಕೇರಿ: ನಗರಸಭೆ ಸ್ಥಾಯಿ ಸಮಿತಿ ಕಚೇರಿಯಲ್ಲಿ ‘ಮಡಿಕೇರಿ ದಸರಾ ಜನೋತ್ಸವ’ ಕಚೇರಿಗೆ ಬುಧವಾರ ಶಾಸಕ ಕೆ.ಜಿ.ಬೋಪಯ್ಯ ಚಾಲನೆ ನೀಡಿದರು. ನಂತರ, ಪೂಜಾ ಕಾರ್ಯಗಳು ನೆರವೇರಿದವು.

ದಸರಾ ಸಮಿತಿ ಕಾರ್ಯಾಧ್ಯಕ್ಷರಾಬಿನ್ ದೇವಯ್ಯ, ದಶಮಂಟಪ ಸಮಿತಿ ಅಧ್ಯಕ್ಷ ರಂಜಿತ್ ಕುಮಾರ್ ಹಾಗೂ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ದಸರಾಕ್ಕೆ ಯಾವುದೇ ವಿಘ್ನಗಳಿಲ್ಲದೆ ಜರುಗಲಿ ಎಂದು ಗಣಪತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಸಮಿತಿ ಉಪಾಧ್ಯಕ್ಷ ಅರುಣ್ ಕುಮಾರ್, ಈ ಬಾರಿ ನಾಡಹಬ್ಬ ದಸರಾ ಯಾವುದೇ ವಿಘ್ನವಿಲ್ಲದೆ ನಡೆಯಬೇಕಿದೆ. ಇದೇ 29ರಿಂದ ದಸರಾ ಉತ್ಸವ ಆರಂಭವಾಗಲಿದ್ದು, ಪೂರ್ವ ಭಾಗಿಯಾಗಿಸಮಿತಿಗಳು ಅಗತ್ಯ ತಯಾರಿ ನಡೆಸುತ್ತಿದೆ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.