ADVERTISEMENT

ಡಾ.ಸೂರ್ಯಕುಮಾರ್ ಅವರ ‘ಮಂಗಳಿ’ ಕೃತಿಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 6:43 IST
Last Updated 31 ಜುಲೈ 2025, 6:43 IST
ಸೂರ್ಯಕುಮಾರ್
ಸೂರ್ಯಕುಮಾರ್   

ಮಡಿಕೇರಿ: ನಗರದ ಹಿರಿಯ ವೈದ್ಯ ಸಾಹಿತಿ ಡಾ.ಕೆ.ಬಿ.ಸೂರ್ಯಕುಮಾರ್ ಅವರ ‘ಮಂಗಳಿ’ ಕೃತಿಯು ಕನ್ನಡ ವೈದ್ಯ ಬರಹಗಾರರ ಸಮಿತಿ ನೀಡುವ ಅತ್ಯುತ್ತಮ ಕೃತಿ ಪ್ರಶಸ್ತಿಗೆ ಆಯ್ಕೆಯಾಗಿದೆ.

ಪ್ರಶಸ್ತಿ ಪ್ರಧಾನ ಸಮಾರಂಭವು ಆಗಸ್ಟ್ 24ರಂದು ಬಳ್ಳಾರಿಯಲ್ಲಿ ನಡೆಯಲಿದೆ. ಈವರೆಗೂ ಇವರು ಕನ್ನಡದಲ್ಲಿ 7 ಮತ್ತು ಇಂಗ್ಲೀಷ್‌ನಲ್ಲಿ ಒಂದು ಕೃತಿಯನ್ನು ರಚಿಸಿದ್ದಾರೆ.

ಡಾ.ಇಂದಿರಾ ದೊಡ್ಡಬಳ್ಳಾಪುರ ಅವರು ನೀಡಿರುವ ಪ್ರಶಸ್ತಿಯು ಸೂರ್ಯಕುಮಾರ್ ಅವರು ಬರೆದಿರುವ ಮಂಗಳಮುಖಿಯರ ಜೀವನ ಶೈಲಿಯ ನಿರೂಪಣೆ ಇರುವ ಮಂಗಳಿ ಕೃತಿಗೆ ಸಂದಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.