ADVERTISEMENT

ಪೊನ್ನಂಪೇಟೆ ಕೊಡವ ಸಮಾಜದ ಆಡಳಿತ ಮಂಡಳಿಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 12:55 IST
Last Updated 1 ಜೂನ್ 2025, 12:55 IST
ಗೋಣಿಕೊಪ್ಪಲು ಸಮೀಪದ ಪೊನ್ನಂಪೇಟೆ ಕೊಡವ ಸಮಾಜದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕಾಳಿಮಾಡ ಮೋಟಯ್ಯ ನೇತೃತ್ವದ ತಂಡ ಗೆಲುವು ಸಾಧಿಸಿತು
ಗೋಣಿಕೊಪ್ಪಲು ಸಮೀಪದ ಪೊನ್ನಂಪೇಟೆ ಕೊಡವ ಸಮಾಜದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಕಾಳಿಮಾಡ ಮೋಟಯ್ಯ ನೇತೃತ್ವದ ತಂಡ ಗೆಲುವು ಸಾಧಿಸಿತು   

ಗೋಣಿಕೊಪ್ಪಲು:‌‌ ಪೊನ್ನಂಪೇಟೆ ಕೊಡವ ಸಮಾಜದ ಆಡಳಿತ ಮಂಡಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಕಾಳಿಮಾಡ ಮೋಟಯ್ಯ ನೇತೃತ್ವದ ತಂಡ ಗೆಲುವು ಸಾಧಿಸಿ ಎರಡನೇ ಬಾರಿಗೆ ಆಡಳಿತ ಮಂಡಳಿಯ ಚುಕ್ಕಾಣಿ ಹಿಡಿಯಿತು.

ಒಟ್ಟು 12 ಸ್ಥಾನಗಳಲ್ಲಿ ಕಾಳಿಮಾಡ ಮೋಟಯ್ಯ ನೇತೃತ್ವದ ತಂಡ 9 ಸ್ಥಾನ ಗಳಿಸಿದ್ದು, ಚೀರಂಡ ಸುಬ್ಬಯ್ಯ ನೇತೃತ್ವದ ತಂಡ 3 ಸ್ಥಾನ ಗಳಿಸಿತು.

ಆಯ್ಕೆಯಾದವರು:

ADVERTISEMENT

ಕಾಳಿಮಾಡ ಮೋಟಯ್ಯ (1057) ಅತ್ಯಧಿಕ ಮತ ಗಳಿಸಿದರೆ, ಚೀರಂಡ ಸುಬ್ಬಯ್ಯ (997), ಕೋಟೇರ ಬಿ. ಉತ್ತಪ್ಪ (978), ಕಳ್ಳಿಚಂಡ ಎಸ್. ದೇವಯ್ಯ (949), ಚೆಪ್ಪುಡೀರ ಎ. ಕಾರ್ಯಪ್ಪ (918), ಆಲೆಮಾಡ ಸುಧೀರ್ (872), ಅಜ್ಜಿಕುಟ್ಟೀರ ಎಂ. ಸುಬ್ಬಯ್ಯ (868), ಕೊಣಿಯಂಡ ಸಂಜು ಸೋಮಯ್ಯ (856), ಅಡ್ಡಂಡ ಸಿ. ಪ್ರಕಾಶ್ (847) ಮತ ಪಡೆದು ಆಯ್ಕೆಯಾದರು.

ಮಹಿಳಾ ಕ್ಷೇತ್ರದಲ್ಲಿ ಮೂಕಳೇರ ಕಾವ್ಯ ಕಾವೇರಮ್ ಮ(997), ಗುಮ್ಮಟೀರ ಜಿ. ಗಂಗಮ್ಮ (926), ಚಿರಿಯಂಪಂಡ ಯು. ಬೋಜಮ್ಮ (889) ಮತಪಡೆದು ಜಯಗಳಿಸಿದರು. ಕಟ್ಟೇರ ಲಾಲಪ್ಪ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.