ADVERTISEMENT

ನಿಡ್ತ ವ್ಯಾಪ್ತಿಯಲ್ಲಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬ, ಮರಗಳು

​ಪ್ರಜಾವಾಣಿ ವಾರ್ತೆ
Published 29 ಮೇ 2025, 7:09 IST
Last Updated 29 ಮೇ 2025, 7:09 IST
ಶನಿವಾರಸಂತೆ –ಕುಶಾಲನಗರ ರಸ್ತೆಯಲ್ಲಿ ಕಾರ್ಗೋಡು ಅರಣ್ಯ ಇಲಾಖೆ ಕಚೇರಿ ಸಮೀಪ ಬೃಹತ್ ಗಾತ್ರದ ಮರವೊಂದು ಮಂಗಳವಾರ ಬಿದ್ದಿದ್ದು, ಬುಧವಾರ ತೆರವುಗೊಳಿಸಲಾಯಿತು
ಶನಿವಾರಸಂತೆ –ಕುಶಾಲನಗರ ರಸ್ತೆಯಲ್ಲಿ ಕಾರ್ಗೋಡು ಅರಣ್ಯ ಇಲಾಖೆ ಕಚೇರಿ ಸಮೀಪ ಬೃಹತ್ ಗಾತ್ರದ ಮರವೊಂದು ಮಂಗಳವಾರ ಬಿದ್ದಿದ್ದು, ಬುಧವಾರ ತೆರವುಗೊಳಿಸಲಾಯಿತು   

ಶನಿವಾರಸಂತೆ: ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಸುರಿದ ಭಾರಿ ಮಳೆಗೆ ವಿದ್ಯುತ್ ಕಂಬಗಳು, ಮರಗಳು ಉರುಳಿ ಬಿದ್ದಿವೆ.

ನಿಡ್ತ ಸರ್ಕಾರಿ ಶಾಲೆ ಬಳಿಯ ಹಾರೆಹೊಸೂರು ರಸ್ತೆ ಬದಿಯಲ್ಲಿ ಭಾರಿ ಗಾತ್ರದ ಮರದ ಕೊಂಬೆ ವಿದ್ಯುತ್ ತಂತಿಯ ಮೇಲೆ ಮುರಿದು ಬಿದ್ದು, ವಿದ್ಯುತ್ ಕಂಬ ಮುರಿದಿದೆ. ಇದರಿಂದ ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು.

ಮಾಹಿತಿ ತಿಳಿದ ಸೆಸ್ಕ್ ಸಿಬ್ಬಂದಿ ಸ್ಥಳಕ್ಕೆ ಬಂದು ರಸ್ತೆಗೆ ಅಡ್ಡಲಾಗಿ ಬಿದ್ದ ವಿದ್ಯುತ್ ಕಂಬ, ಮರದ ಕೊಂಬೆಯನ್ನು ತೆರವುಗೊಳಿಸಿದರು.

ADVERTISEMENT

ಬುಧವಾರ ಬೆಳಿಗ್ಗೆ ನಿಡ್ತ ವ್ಯಾಪ್ತಿಯಲ್ಲಿ ಧಾರಕಾರವಾಗಿ ಮಳೆಯಾಗಿದೆ. ನಿಡ್ತ ಸಮಿಪದ ಕಾರ್ಗೊಡು ಬಳಿ ಶನಿವಾರಸಂತೆ ರಸ್ತೆ ಬದಿಯಲ್ಲಿ ಭಾರಿ ಗಾತ್ರದ ಮರವೊಂದು ಬೀಳುವ ಸ್ಥಿತಿಯಲ್ಲಿತ್ತು. ಇದೆ ವೇಳೆಯಲ್ಲಿ ವಾಹನ ಸವಾರರು ಮರ ನೆಲಕ್ಕೆ ವಾಲುತ್ತಿರುವುದನ್ನು ಗಮನಿಸಿ ವಾಹನಗಳನ್ನು ಅಲ್ಲಿ ನಿಲ್ಲಸಿಕೊಂಡರು. ಈ ಕುರಿತು ಸ್ಥಳೀಯರು ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿದ ಮೇರೆಗೆ ವಿಪತ್ತು ನಿರ್ವಹಣಾ ಸಿಬ್ಬಂದಿ ಸ್ಥಳಕ್ಕೆ ಬಂದು ಬೀಳುವ ಹಂತದಲ್ಲಿದ್ದ ಮರವನ್ನು ತೆರವುಗೊಳಿಸುವ ಮೂಲಕ ಅನಾಹುತ ತಪ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.