ADVERTISEMENT

ಸ್ವಗ್ರಾಮದಲ್ಲಿ ವಿನಯ್ ಸೋಮಯ್ಯ ಅಂತ್ಯಸಂಸ್ಕಾರ; ಯದುವೀರ್ ಭಾಗಿ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2025, 22:43 IST
Last Updated 5 ಏಪ್ರಿಲ್ 2025, 22:43 IST
ಸೋಮವಾರಪೇಟೆ ಸಮೀಪದ ಗೋಣಿಮರೂರು ಗ್ರಾಮದಲ್ಲಿ ಮೃತ ವಿನಯ್ ಸೋಮಯ್ಯ ಮೃತದೇಹದ ಮುಂದೆ ತಾಯಿ, ಪತ್ನಿ, ಮಗು
ಸೋಮವಾರಪೇಟೆ ಸಮೀಪದ ಗೋಣಿಮರೂರು ಗ್ರಾಮದಲ್ಲಿ ಮೃತ ವಿನಯ್ ಸೋಮಯ್ಯ ಮೃತದೇಹದ ಮುಂದೆ ತಾಯಿ, ಪತ್ನಿ, ಮಗು   

ಸೋಮವಾರಪೇಟೆ (ಕೊಡಗು ಜಿಲ್ಲೆ): ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅಂತ್ಯಕ್ರಿಯೆ ಶನಿವಾರ ಸ್ವಗ್ರಾಮ ಗೋಣಿಮರೂರಿನಲ್ಲಿ ಅರೆಭಾಷಿಕ ಗೌಡ ಜನಾಂಗದ ಸಂಪ್ರದಾಯದಂತೆ ನಡೆಯಿತು.

ಸೋಮಯ್ಯ ಕುಟುಂಬದ ಕಾಫಿ ತೋಟದಲ್ಲಿ ಅಂತಿಮ ವಿಧಿವಿಧಾನ ನೆರವೇರಿತು. ಅವರ ತಾಯಿ ದೇವಕ್ಕಿ, ಪತ್ನಿ ಪೂಜೆ ಸಲ್ಲಿಸಿದರು. ಅವಳಿ ಸೋದರ ವಿವೇಕ್ ಆಗ್ನಿಸ್ಪರ್ಶ ಮಾಡಿದರು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ, ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ, ಬಿಜೆಪಿ ಮುಖಂಡರಾದ ಬಿ.ಸಿ.ನವೀನ್, ಗೌತಮ್ ಗೌಡ, ಭಾರತೀಶ್ ಅಂತಿಮ ನಮನ ಸಲ್ಲಿಸಿದರು.

ADVERTISEMENT

ಸಿಬಿಐ ತನಿಖೆಗೆ ಆಗ್ರಹ: ವಿನಯ್‌ ಸೋಮಯ್ಯ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.