ADVERTISEMENT

ನಾಪೋಕ್ಲು | ಆರೋಗ್ಯ ತಪಾಸಣಾ ಶಿಬಿರ ಜೂನ್ 30ರಂದು

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 14:00 IST
Last Updated 22 ಜೂನ್ 2025, 14:00 IST

ನಾಪೋಕ್ಲು: ಭಾಗಮಂಡಲದ ಗಜಾನನ ಯುವಕ ಸಂಘ ಮತ್ತು ಮಡಿಕೇರಿಯ ರೋಟರಿ ಕ್ಲಬ್ ವತಿಯಿಂದ ಜೂನ್ 30ರಂದು ಭಾಗಮಂಡಲ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣೆಯನ್ನು ಆಯೋಜಿಸಲಾಗಿದೆ.

ಗಜಾನನ ಯುವಕ ಸಂಘ ಮತ್ತು ಕ್ರಿಯೆಟಿವ್ ಸಹಕಾರದಿಂದ ಆಯೋಜಿಸಲಾಗಿದೆ. ಎರಡು ಕಾರ್ಯಕ್ರಮಗಳು ಭಾಗಮಂಡಲದ ಶ್ರೀ ಕಾವೇರಿ ಆಟೊ ಚಾಲಕರ ಮತ್ತು ಮಾಲೀಕರ ಸಂಘ ಸಹಯೋಗದೊಂದಿಗೆ ನಡೆಯಲಿವೆ. ಭಾಗಮಂಡಲ ನಾಡಿನ ಎಲ್ಲರೂ ಈ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಗಜಾನನ ಯುವಕ ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಅಂದು ಉಚಿತವಾಗಿ ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ತಪಾಸಣೆ, ಹೃದಯ ಸಂಬಂಧಿಸಿದ ಕಾಯಿಲೆ, ಸ್ತ್ರೀ ರೋಗ ಸಂಬಂಧಿಸಿದ ಕಾಯಿಲೆಗಳ ತಪಾಸಣೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು ಗೌರೀಶ್ ರೈ 89046 65906, ಖಜಾಂಜಿ ಮನು 90199 30101 ಇವರನ್ನು ಸಂಪರ್ಕಿಸಲು ಕೋರಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.