ADVERTISEMENT

ನಾಪೋಕ್ಲು | ತಗ್ಗಿದ ಮಳೆ, ಸಂಚಾರಕ್ಕೆ ಅಡಚಣೆ

​ಪ್ರಜಾವಾಣಿ ವಾರ್ತೆ
Published 28 ಮೇ 2025, 3:53 IST
Last Updated 28 ಮೇ 2025, 3:53 IST
ಕೂರುಳಿ- ಎಮ್ಮೆಮಾಡು ಮುಖ್ಯ ರಸ್ತೆಯಲ್ಲಿ ಮರ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿರುವುದು
ಕೂರುಳಿ- ಎಮ್ಮೆಮಾಡು ಮುಖ್ಯ ರಸ್ತೆಯಲ್ಲಿ ಮರ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿರುವುದು   

ನಾಪೋಕ್ಲು: ಮಳೆಯ ಬಿರುಸು ಮಂಗಳವಾರ ತುಸು ಕಡಿಮೆಯಾಗಿದ್ದರೂ, ಸೋಮವಾರ ರಾತ್ರಿ ಸುರಿದ ಬಿರುಸಿನ ಮಳೆ ಅಲ್ಲಲ್ಲಿ ಸಮಸ್ಯೆ ಸೃಷ್ಟಿಸಿದೆ

ವಿವಿಧೆಡೆ ಪ್ರವಾಹದ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಬಲಮುರಿಯಲ್ಲಿ ರಸ್ತೆ ಸಂಪರ್ಕವೂ ಇಲ್ಲವಾಗಿದೆ. ನಾಪೋಕ್ಲು ಮೂರ್ನಾಡು ಸಂಪರ್ಕ ರಸ್ತೆಯಲ್ಲಿ ಬೊಳಿಬಾಣೆ ಎಂಬಲ್ಲಿ ನೀರು ತುಂಬಿ ಹರಿಯುತ್ತಿದ್ದು, ಸಂಚಾರಕ್ಕೆ ಸಮಸ್ಯೆಯಾಗಿದೆ.

ಸಮೀಪದ ಬೇತುವಿನ ಹಂಸ ಎಂಬುವವರ ಅಂಗಡಿ ಮಳಿಗೆಗಳು ಮಳೆ ಗಾಳಿಯಿಂದ ಪೂರ್ಣ ಹಾನಿಗೊಂಡಿವೆ. ಕರಡದ ಸುಮಿತ್ರಾ ಎಂಬುವರ ವಾಸದ ಮನೆಯಗಳು ಶೀಟ್ ಗಾಳಿ ಮಳೆಗೆ ಹಾರಿದ್ದು, ನಷ್ಟ ಸಂಭವಿಸಿದೆ. ಕೊಳಕೇರಿಯ ಹ್ಯಾರಿಸ್ ಎಂಬುವವರ ಮನೆಯ ತಡೆಗೋಡೆ ಕಾಂಪೌಂಡ್ ಮಳೆಯಿಂದಾಗಿ ಕುಸಿದು ಬಿದ್ದು, ನಷ್ಟ ಸಂಭವಿಸಿದೆ.

ADVERTISEMENT

ಕೂರುಳಿ- ಎಮ್ಮೆಮಾಡು ಮುಖ್ಯ ರಸ್ತೆಯಲ್ಲಿ ಮರಬಿದ್ದಿದೆ. ಸಮೀಪದ ಪಾರಣೆಯಲ್ಲೂ ಮರ ರಸ್ತೆಗಡ್ಡಲಾಗಿ ಬಿದ್ದಿದ್ದು, ಸಂಚಾರಕ್ಕೆ ಅಡ್ಡಿಯಾಗಿತ್ತು. ಚೇಲಾವರದ ಕಾರ್ಯಪ್ಪ ಅವರ ವಾಸದ ಮನೆಯ ಒಂದು ಪಾರ್ಶ್ವಕ್ಕೆ ಮರಬಿದ್ದು ಹಾನಿಯಾಗಿದೆ.

ಬಲಮುರಿಯ ಕಾವೇರಪ್ಪ ಅವರ ಮನೆಯ ಮೇಲೆ ಮರ ಬಿದ್ದು ಆರ್‌ಸಿಸಿ ಹಾಗೂ ರೂಫಿಂಗ್ ಹಾನಿಯಾಗಿದೆ. ಚೇಲಾವರದಲ್ಲಿ ಬೃಹತ್ ಗಾತ್ರದ ಮರಬಿದ್ದು ಮನೆಗೆ ಹಾನಿಯಾಗಿದೆ. ಕುಟ್ಟನ ಕಾರ್ಯಪ್ಪ ಅವರ ಮನೆಯ ಮೂರು ಮಂದಿ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಲೆಕ್ಕಿಗರಾದ ಸ್ವಾತಿ ತೆರಳಿ ಪರಿಶೀಲನೆ ನಡೆಸಿದರು.

ನಾಪೋಕ್ಲು ಸಮೀಪದ ಪಾರಾಣೆಯಲ್ಲಿ ಮರ ರಸ್ತೆಗಡ್ಡಲಾಗಿ ಬಿದ್ದಿದ್ದು ಸಂಚಾರಕ್ಕೆ ಅಡ್ಡಿಯಾಗಿತ್ತು
ನಾಪೋಕ್ಲು ಸಮೀಪದ ಕೊಳಕೇರಿಯ ಹ್ಯಾರಿಸ್ ಎಂಬುವವರ ಮನೆಯ ತಡೆಗೋಡೆ ಮಳೆಯಿಂದಾಗಿ ಕುಸಿದಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.